Asianet Suvarna News Asianet Suvarna News

ಪಿಯುಸಿ ಫಲಿತಾಂಶ ಬಂದಾಯ್ತು, ಮುಂದೇನು ಎಂಬ ಚಿಂತೆಯೇ? ಇಲ್ಲಿವೆ ಕೆಲವು ದಾರಿಗಳು

ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನ ಪಥವನ್ನೇ  ಬದಲಿಸುವುದೆನ್ನಲಾದ ದ್ವಿತೀಯ ಪಿ.ಯು.ಸಿ. ಫಲಿತಾಂಶಗಳು ಹೊರಬಿದ್ದಿವೆ. ನೂರಾರು ಆಶಯ, ಕನಸುಗಳನ್ನಿರಿಸಿಕೊಂಡ ಮಕ್ಕಳ- ಪೋಷಕರಿಗೆ ಕಾಡುವ ಪ್ರಶ್ನೆ... ಪಿ.ಯು.ಸಿ. ನಂತರ ಮುಂದೇನು ಎನ್ನುವುದು. ಬಹಳ ಜನ ಪಿ.ಯು.ಸಿ. ನಂತರ ಕೇವಲ ಎಂಜಿನೀಯರಿಂಗ್, ಮೆಡಿಕಲ್‌ಗಳೇ ಅಂತಿಮ ಎಂದೆನಿಸುತ್ತಾರೆ.  ಇಲ್ಲದಿದ್ದರೆ ಓದು ನಿರರ್ಥಕ ಎಂಬ ಭಾವನೆ ಹೊಂದಿರುತ್ತಾರೆ.

After PUC what Next

ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನ ಪಥವನ್ನೇ  ಬದಲಿಸುವುದೆನ್ನಲಾದ ದ್ವಿತೀಯ ಪಿ.ಯು.ಸಿ. ಫಲಿತಾಂಶಗಳು ಹೊರಬಿದ್ದಿವೆ. ನೂರಾರು ಆಶಯ, ಕನಸುಗಳನ್ನಿರಿಸಿಕೊಂಡ ಮಕ್ಕಳ- ಪೋಷಕರಿಗೆ ಕಾಡುವ ಪ್ರಶ್ನೆ... ಪಿ.ಯು.ಸಿ. ನಂತರ ಮುಂದೇನು ಎನ್ನುವುದು. ಬಹಳ ಜನ ಪಿ.ಯು.ಸಿ. ನಂತರ ಕೇವಲ ಎಂಜಿನೀಯರಿಂಗ್, ಮೆಡಿಕಲ್‌ಗಳೇ ಅಂತಿಮ ಎಂದೆನಿಸುತ್ತಾರೆ. ಇಲ್ಲದಿದ್ದರೆ ಓದು ನಿರರ್ಥಕ ಎಂಬ ಭಾವನೆ ಹೊಂದಿರುತ್ತಾರೆ.

ಹಾಗೇನೂ ಇಲ್ಲ, ಎಂಜಿನೀಯರಿಂಗ್, ಮೆಡಿಕಲ್‌ಗಳಲ್ಲದೇ ಇನ್ನಿತರ ಹಲವಾರು ಆಯ್ಕೆಗಳ ಅವಕಾಶಗಳಿವೆ ಎಂಬುದೇ ವಾಸ್ತವ. ಕೇವಲ ವಿಜ್ಞಾನದ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಕಲಾ ಹಾಗೂ ವಾಣಿಜ್ಯ  ವಿಷಯಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಶಿಕ್ಷಣ ಪಡೆದು, ಒಳ್ಳೇ ಜೀವನ ನಡೆಸುವ  ನೂರಾರು ಅವಕಾಶಗಳಿವೆ.

ನಾಯಿ ಕೊಡೆಗಳಂತೆ ತಲೆ ಎತ್ತಿರುವ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಿಂದ ಪ್ರತಿ ವರ್ಷ ಸಾವಿರಾರು ಪದವಿಧರರು ಹೊರಬರುತ್ತಾರೆ. ಅವರಲ್ಲಿ ಉತ್ತಮ ಶ್ರೇಣಿಗಳಲ್ಲಿ ಹೊರ  ಬರುವವರಿಗೆ ಮಾತ್ರ ಯಶಸ್ಸು ಸಾಧ್ಯ. ಇಲ್ಲವೋ ಇನ್ನೂ ಉನ್ನತ ವಿದ್ಯಾಭ್ಯಾಸ ಪಡೆಬೇಕಾಗಬಹುದು. ಎಂಜಿನೀಯರಿಂಗ್ ಮಂಡಿಕಲ್ ಕೈಗೆಟುಕದ ಮಧ್ಯಮ ವರ್ಗದ, ಬಡ ಕುಟುಂಬಗಳ ಪ್ರತಿಭಾವಂತ, ಆಸಕ್ತ ವಿದ್ಯಾರ್ಥಿಗಳಿಗಾಗಿ ಇನ್ನೂ ಅನೇಕ ಉತ್ತಮ ಕೋರ್ಸುಗಳಿವೆ. ಹೋಟೆಲ್ ಮ್ಯಾನೇಜ್‌ಮೆಂಟ್ ಪ್ಯಾರಾಮೆಡಿಕಲ್ ಸಿನಿಮಾಟೋಗ್ರಫಿ, ಅನಿಮೇಷನ್ ತಂತ್ರಜ್ಞಾನ, ಲ್ಯಾಬ್ ಟೆಕ್ನಿಷಿಯನ್ ಅಲ್ಲದೆ ಇನ್ನಿತರ ವೃತ್ತಿ ಶಿಕ್ಷಣ ಕೋರ್ಸುಗಳಿವೆ. ಇವುಗಳ ಫೀಸೂ ದುಬಾರಿಯಲ್ಲ ಹಾಗೂ ಕೋರ್ಸ್ ಮುಗಿಸಿದ ನಂತರ ಖಾಸಗಿ,  ಸರ್ಕಾರಿ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ.

ಭಾರತೀಯ ಸೇನೆಯಲ್ಲಿ ದ್ವಿತೀಯ ಪಿ.ಯು. ವಿಜ್ಞಾನ ಮುಗಿಸಿದ ಬಾಲಕರಿಗಾಗಿ ನಾಲ್ಕು ವರ್ಷಗಳ ಮಿಲಿಟರಿ ಹಾಗೂ ತಾಂತ್ರಿಕ ತರಬೇತಿಯ ಅವಕಾಶವಿದೆ. ತರಬೇತಿ ಬಳಿಕ ಲೆಫ್ಟಿನೆಂಟ್ ದರ್ಜೆಯ ಹುದ್ದೆಗಳಲ್ಲಿ (ಜೂನ್ ೩೦ರ ವರೆಗೆ ಅವಕಾಶವಿದೆ) ಕಾರ್ಯನಿರ್ವಹಿಸುವ ಅರ್ಹತೆ ಇರುತ್ತವೆ. ದ್ವಿತೀಯ ಪಿ.ಯು. ವಿಜ್ಞಾನ ಮುಗಿಸಿದವರಿಗೆ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಅವಕಾಶವಿದೆ. ವಿಜ್ಞಾನ ವಿಭಾಗದಲ್ಲಿ ಕಲಿತ ಹೆಣ್ಣು ಮಕ್ಕಳು ಹೋಂ ಸೈನ್ಸ್‌ನಲ್ಲಿ ಪದವಿ ಪಡೆಯುವ ಅವಕಾಶವಿದೆ. ಇದೇ ರೀತಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಕೃಷಿ ವಿಜ್ಞಾನ, ವೆಟನರಿ ಸೈನ್ಸ್ ಗಳಲ್ಲೂ ಅವಕಾಶವಿದೆ.
 

ದ್ವಿತೀಯ ಪಿ.ಯು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಬಿ.ಕಾಂ. ಪದವಿ ಪಡೆದು ನಂತರ ಎಂ.ಕಾಂ. ಗಳಿಸಿ ಉಪನ್ಯಾಸಕ ವೃತ್ತಿ ಆಯ್ದುಕೊಳ್ಳಬಹುದು. ಇಲ್ಲವೇ 5 ವರ್ಷಗಳ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ಅಧ್ಯಯನ ಮಾಡಬಹುದು. ಇದರಲ್ಲಿ ಯಶಸ್ಸು ಗಳಿಸಿದರೆ ಉತ್ತಮ ಅವಕಾಶವಿದೆ.  ವಾಣಿಜ್ಯ ಹಾಗೂ ಕಲಾ ವಿದ್ಯಾರ್ಥಿಗಳು ಎಲ್.ಎಲ್.ಬಿ. ಇಂಟಿಗ್ರೇಟೆಡ್ ಕೋರ್ಸ್ (5 ವರ್ಷ) ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಕಲಾ ಹಾಗೂ ವಾಣಿಜ್ಯ ವಿಭಾಗದ
ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಜೊತೆ, ಜೊತೆಗೆ ಕಂಪ್ಯೂಟರ್ ಶಿಕ್ಷಣ ಪಡೆದು, ಪದವಿ ನಂತರ ಅನೇಕ ರೀತಿಯ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು. ದ್ವಿತೀಯ ಪಿ.ಯು.ನಲ್ಲಿ ಅನುತ್ತೀರ್ಣರಾದವರಿಗೂ ಹಲವಾರು ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಅವಕಾಶವಿದೆ. ಇತ್ತೀಚೆಗೆ ಕರ್ನಾಟಕದ ಅಭ್ಯರ್ಥಿಗಳು ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದಾರೆ.

ಇವರೆಲ್ಲಾ ಪಿ.ಯು.ಸಿ. ಯಲ್ಲಿ ಶೇ.90 ಅಂಕ ಪಡೆದವರಲ್ಲ. ಸಾಧಾರಣ ಪದವಿ ಅಭ್ಯಾಸದ ಜೊತೆಗೆ, ಸಾಮಾನ್ಯ ಜ್ಞಾನ ಪ್ರಚಲಿತ ವಿದ್ಯಮಾನಗಳ ಅರಿವನ್ನು ಹೆಚ್ಚಿಸಿಕೊಂಡು ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಪರಿಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ. ಒಟ್ಟಾರೆಯಾಗಿ ಸಾಧಿಸುವ ಮನಸ್ಸಿದ್ದರೆ ಹಲವಾರು ಮಾರ್ಗಗಳಿವೆ. ಪರಿಶ್ರಮ ವಹಿಸಿ ಅಭ್ಯಾಸ ಮಾಡಿದರೆ ಯಶಸ್ಸು  ಖಂಡಿತ. 

Follow Us:
Download App:
  • android
  • ios