ವರ್ಕ್‌ಔಟ್ ಮಾಡೋ ಮುನ್ನ ಕಾಫಿಯೊಂದಿಗೆ ಇದನ್ನು ಬೆರೆಸಿಕೊಂಡು ಕುಡಿದರೆ, ತೂಕ ಇಳಿಯುತ್ತಂತೆ. ಏನದು?

ಲಂಡನ್: ಅಯ್ಯೋ, ಏನು ಮಾಡಿದ್ರೂ ತೂಕ ಕಮ್ಮಿ ಆಗಿಲ್ಲವೆಂದು ತಲೆ ಕೆಡಿಸಿಕೊಳ್ಳುವವರಿಗೆ ಇಲ್ಲೊಂದಿದೆ ಸಿಹಿ ಸುದ್ದಿ. ಕುಡಿಯುವ ಕಾಫಿಯೊಂದಿಗೆ ಮೊಟ್ಟೆ ಸೇರಿಸಿ ಕುಡಿದರೆ, ಸಿಕ್ಕಾಪಟ್ಚೆ ತೂಕ ಇಳಿಯುತ್ತಂತೆ.

ಸಾಮಾನ್ಯವಾಗಿ ವರ್ಕ್‌ಔಟ್ ಮಾಡುವ ಅನೇಕರು ಜಿಮ್‌ಗೆ ತೆರಳುವ ಮುನ್ನ ಕಾಫಿ ಕುಡಿಯೋದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಈ ಕಾಫಿಗೆ ಹಸಿ ಮೊಟ್ಟೆಯನ್ನು ಮಿಕ್ಸ್ ಮಾಡಿಕೊಂಡು ಕುಡಿದರೆ, ಸ್ಲಿಮ್ ಆಗಬಹುದೆಂದು ಅಧ್ಯಯನವೊಂದು ತಿಳಿಸಿದೆ.

ಹಂಗೇರಿಯಾ, ಸ್ಯಾಂಡಿನೇವಿಯನ್, ವಿಯೇಟ್ನಾಮ್ ಹಾಗೂ ಇತರೆಡೆ ಜನರಿಗೆ ಬ್ಲ್ಯಾಕ್ ಕಾಫಿಯೊಂದಿಗೆ ಮೊಟ್ಟೆ ಸೇವಿಸುವ ಅಭ್ಯಾಸವಿದೆ. ಇದೀಗ ಎಲ್ಲೆಡೆ ಈ ಡ್ರಿಂಕ್ ವರ್ಕ್‌ಔಟ್‌ಗೂ ಮುನ್ನ ಸೇವಿಸುವುದನ್ನು ಜನರು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.

ಹಸಿ ಮೊಟ್ಟೆ ತಿನ್ನೋದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಆದರೆ, ಕಾಫಿಯೊಂದಿಗೆ ಸೇವಿಸುವುದರಿಂದ ಪರಿಣಾಮಕಾರಿಯಾಗಿರುತ್ತದೆ. ಕಾಫಿ ಬಿಸಿ ಇರುವುದರಿಂದ ಮೊಟ್ಟೆಯಲ್ಲಿನ ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತದೆ. 

ಕ್ರೀಡಾಳುಗಳು ಕಾಫಿಯೊಂದಿಗೆ ಮೊಟ್ಟೆ ಬೆರೆಸಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಕೆಲವರು ಮೊಟ್ಟೆಯೊಂದಿಗೆ ಕಾಫಿ ಸೇವಿಸುವುದನ್ನೂ ರೂಢಿಸಿಕೊಂಡಿದ್ದಾರೆಂದು ಕೆನಡಾದ ಬ್ಯಾಸ್ಕೆಟ್‌ಬಾಲ್ ಟೀಮ್‌ನ ನ್ಯೂಟ್ರಿಷಿಯನ್ ಹೇಳಿದ್ದಾರೆ.