Asianet Suvarna News Asianet Suvarna News

ಅಸಹಜ ಉದ್ವೇಗ ನಿಮಗಿದೆಯಾ?

ಕ್ರಿಯಾಶೀಲ ಮನಸ್ಸು ಮಂಕು ಹಿಡಿದಂತಾಗುತ್ತದೆ. ವಿನಾಕಾರಣ ಭಯ ಸುಮ್ಮನೇ ಕೂತಿದ್ದಾಗ ಯಾರೋ ತನ್ನನ್ನು ನೋಯಿಸಬಹುದು ಎಂಬ ಭಯ, ಸಿಗ್ನಲ್‌ನಲ್ಲಿ ನಿಂತಾಗ ಡಾಕ್ಯುಮೆಂಟ್ಸ್ ಎಲ್ಲಾ ಸರಿಯಾಗಿದ್ದರೂ ಪೊಲೀಸ್ ಹಿಡಿದು ಜೈಲಿಗೆ ಹಾಕಿದರೆ ಅನ್ನೋ ರೀತಿಯ ಭಯ. ಕೆಲವರಿಗೆ ಹಾವು, ಕೀಟಗಳ ಭಯವೂ ಕಾಡಬಹುದು. ಜೀರ್ಣಕ್ರಿಯೆಯಲ್ಲಿ ಸಮಸ್ಯೆ

ಏನೇ ತಿಂದರೂ ಹೊಟ್ಟೆಯೊಳಗೆ ತಳಮಳ, ಗ್ಯಾಸ್ಟ್ರಿಕ್ ಹೆಚ್ಚಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು, ಹೊಟ್ಟೆನೋವು, ಡಯೇರಿಯ ಮೊದಲಾದವು ಈ ಉದ್ವೇಗದ ಸಮಸ್ಯೆಗೆ ಜೊತೆಯಾಗುತ್ತವೆ. ದೈಹಿಕ ಹಾಗೂ ಮಾನಸಿಕತೆ ಬೆರೆತ ಸಮಸ್ಯೆಯಿದು.

abnormal tension

ಎದೆ ಢವಢವ ಹೊಡ್ಕೊಳತ್ತೆ. ಭಯ, ಟೆನ್ಶನ್‌ಗೆ ಮೈ ಮುಖದಲ್ಲೆಲ್ಲ ಬೆವರು. ಒಂದು ಹೆಜ್ಜೆ ಮುಂದಿಡಲಾರದ ಸ್ಥಿತಿ. ಒಂದಲ್ಲ ಒಂದು ಬಾರಿ ಎಲ್ಲರೂ ಈ ಮನಸ್ಥಿತಿಯಿಂದ ಬಳಲಿದವರೇ. ಇದು ‘ಉದ್ವೇಗ’ದ ಸಮಸ್ಯೆ. ಯಾವತ್ತೋ ಒಮ್ಮೆ ಬರುವ ಉದ್ವೇಗ ಸಹಜವಾದದ್ದು. ಆದರೆ ಅದು ಪದೇಪದೇ ಕಾಣಿಸಿಕೊಂಡರೆ ಒಳ್ಳೆಯದಲ್ಲ. ಇಲ್ಲಿ ಅಸಹಜ ಉದ್ವೇಗದ ಲಕ್ಷಣಗಳಿವೆ. ಈ ಸಮಸ್ಯೆ ನಿಮಗೂ ಇದೆಯಾ ಅಂತ ಒಮ್ಮೆ ಚೆಕ್ ಮಾಡಿ.

ಸಿಕ್ಕಾಪಟ್ಟೆ ಚಿಂತೆ

ವಿಷಯ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಸಿಕ್ಕಾಪಟ್ಟೆ ಚಿಂತೆ ಮಾಡೋದು. ಇಡೀ ದಿನ ಯೋಚ್ನೆ ಮಾಡಿ ಮಾಡಿ ತಲೆಚಿಟ್ಟು ಹಿಡಿಸ್ಕೊಳ್ಳೋದು. ಇದರಿಂದ ಸುಸ್ತಾಗುತ್ತೆ. ಬೇರೇನು ಮಾಡಲೂ ಚೈತನ್ಯ ಇರಲ್ಲ.

ಕ್ರಿಯಾಶೀಲ ಮನಸ್ಸು ಮಂಕು ಹಿಡಿದಂತಾಗುತ್ತದೆ. ವಿನಾಕಾರಣ ಭಯ ಸುಮ್ಮನೇ ಕೂತಿದ್ದಾಗ ಯಾರೋ ತನ್ನನ್ನು ನೋಯಿಸಬಹುದು ಎಂಬ ಭಯ, ಸಿಗ್ನಲ್‌ನಲ್ಲಿ ನಿಂತಾಗ ಡಾಕ್ಯುಮೆಂಟ್ಸ್ ಎಲ್ಲಾ ಸರಿಯಾಗಿದ್ದರೂ ಪೊಲೀಸ್ ಹಿಡಿದು ಜೈಲಿಗೆ ಹಾಕಿದರೆ ಅನ್ನೋ ರೀತಿಯ ಭಯ. ಕೆಲವರಿಗೆ ಹಾವು, ಕೀಟಗಳ ಭಯವೂ ಕಾಡಬಹುದು. ಜೀರ್ಣಕ್ರಿಯೆಯಲ್ಲಿ ಸಮಸ್ಯೆ

ಏನೇ ತಿಂದರೂ ಹೊಟ್ಟೆಯೊಳಗೆ ತಳಮಳ, ಗ್ಯಾಸ್ಟ್ರಿಕ್ ಹೆಚ್ಚಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು, ಹೊಟ್ಟೆನೋವು, ಡಯೇರಿಯ ಮೊದಲಾದವು ಈ ಉದ್ವೇಗದ ಸಮಸ್ಯೆಗೆ ಜೊತೆಯಾಗುತ್ತವೆ. ದೈಹಿಕ ಹಾಗೂ ಮಾನಸಿಕತೆ ಬೆರೆತ ಸಮಸ್ಯೆಯಿದು.

ಸ್ನಾಯು ಸೆಳೆತ ಬಾಯಿ ಒಣಗುವುದು, ದೇಹದ ಸ್ನಾಯುಗಳಲ್ಲಿ ನೋವು, ಸೆಳೆತ ಕಂಡುಬರುತ್ತೆ. ಇದು ಉದ್ವೇಗ ಹೆಚ್ಚಿದಷ್ಟು ಹೆಚ್ಚು ಕಾಲ ಮುಂದುವರಿಯುತ್ತದೆ. ಎಕ್ಸರ್‌ಸೈಸ್ ಮೂಲಕ ಈ ಸೆಳೆತವನ್ನು ನಿಯಂತ್ರಿಸಬಹುದು.

ಉದ್ವೇಗ ತಹಬಂದಿಗೆ ಬಂದಾಗ ಇದೂ ಮಾಯವಾಗಿ ಬಿಡುತ್ತೆ. ನಿದ್ದೆ ಬರಲ್ಲ  ಹಗಲಿನ ಯೋಚನೆ ರಾತ್ರಿಗೂ ವಿಸ್ತರಿಸುತ್ತೆ. ಬಹಳ ಆಯಾಸ ವಾಗಿದ್ದರೂ ನಿದ್ದೆ ಹತ್ತಲ್ಲ. ಇನ್ನೇನಾದರೂ ಮಾಡೋಣ ಅಂದುಕೊಂಡರೆ ತೂಕಡಿಕೆ ಶುರುವಾಗುತ್ತೆ. ಹಾಗೆ ಮಂಪರು ಆವರಿಸಿದರೂ ಆಗಾಗ ಎಚ್ಚರವಾಗಿ ಮನಸ್ಸಿಗೆ ಕಿರಿಕಿರಿಯಾಗುತ್ತೆ. ಸಣ್ಣಪುಟ್ಟದಕ್ಕೂ ಪ್ಯಾನಿಕ್ ಆಗೋದು

ರೈಲ್‌ನಲ್ಲಿ ಹೋಗ್ಬೇಕು, ನಿಮ್ಮ ಸೀಟ್‌ನಲ್ಲಿ ಇನ್ಯಾರೋ ಕೂತುಬಿಟ್ಟಿದ್ದಾರೆ. ಈ ಸಮಸ್ಯೆ ಇದ್ದಾಗ ನೀವು ಅಲ್ಲಿ ಕುಳಿತವರನ್ನು ಎಬ್ಬಿಸದೇ ಚಿಂತಾಕ್ರಾಂತರಾಗಿ ಬಿಡ್ತೀರಿ. ಏಳಲು ಹೇಳಿದರೆ ಎಲ್ಲಿ ನಿಮ್ಮ ಪ್ರಾಣ ತೆಗೆದುಬಿಡುತ್ತಾರೋ ಎಂಬಷ್ಟು ಭಯ ಕಾಡುತ್ತೆ. ಪ್ಯಾನಿಕ್ ಆಗ್ತೀರಿ.

ನಿಮ್ಮ ನೆಗೆಟಿವ್ ಯೋಚನೆಗಳನ್ನು ಗುರುತಿಸಿ.

  • ಅವನ್ನು ಪ್ರಯತ್ನಪಟ್ಟು ಬದಲಾಯಿಸಲು ಯತ್ನಿಸಿ.
  • ಋಣಾತ್ಮಕ ಚಿಂತನೆಗಳನ್ನು ಬಲವಂತದಿಂದ ತೆಗೆದುಹಾಕಿ, ಕಷ್ಟಪಟ್ಟಾದರೂ ಪಾಸಿಟಿವ್ ಆಗಿ
  • ಯೋಚಿಸಲು ಶುರುಮಾಡಿ.
  • ಯಾವುದೇ ವಿಷಯದ ಬಗ್ಗೆ ಪೂರ್ವಾಗ್ರಹ ಇಟ್ಟುಕೊಳ್ಳಬೇಡಿ. ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳಿ.
  • ನಿಮಗೆ ನೀವೇ ರಿಲ್ಯಾಕ್ಸ್ ಮಾಡಿಕೊಳ್ಳಲು ಕಲಿಯಿರಿ. ಸೈಕಿಯಾಟ್ರಿಸ್ಟ್ ಈ ಥೆರಪಿಯನ್ನು
  •  
Follow Us:
Download App:
  • android
  • ios