ಮೂಲಂಗಿ ಸೇವನೆಯಿಂದ ಕೆಮ್ಮು, ಶೀತದಿಂದ ಹಿಡಿದು ಕ್ಯಾನ್ಸರ್, ಕಾಮಾಲೆ ರೋಗವೂ ನಿವಾರಣೆಯಾಗುತ್ತದೆ. ಇದಲ್ಲದೆ ಇಂಥ ಇನ್ನೂ ಹತ್ತು ಹಲವು ರೋಗಗಳನ್ನು ನಿವಾರಿಸುವಲ್ಲಿ ಈ ತರಕಾರಿ ಸಹಕರಿಸುತ್ತದೆ. ಪ್ರತಿ ದಿನ ಮೂಲಂಗಿಯನ್ನು ಉಪಯೋಗಿಸುತ್ತಿದ್ದರೆ ಅದರ ಪ್ರಯೋಜನ ಅರಿವಿಗೆ ಬರುತ್ತದೆ. 

- ಮೂಲಂಗಿ ಬೀಜವನ್ನು ನೀರಿನಲ್ಲಿ ನೆನೆಸಿ, ಅರೆದು ದಿನಕ್ಕೆ ಮೂರು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಕಲೆಗಳು ಮಾಯವಾಗಿ ಮುಖದ ಕಾಂತಿ ವೃದ್ಧಿಸುತ್ತದೆ. 
- ಇದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದಲ್ಲದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 
- ಹಸಿ ಮೂಲಂಗಿಗೆ ಸ್ವಲ್ಪ ಉಪ್ಪು , ಕಾಳು ಮೆಣಸು ಮತ್ತು ನಿಂಬೆರಸ ಸೇರಿಸಿ,  ಊಟವಾದ ನಂತರ ಸೇವಿಸಿದರೆ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. 
- ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸುವುದು ಉತ್ತಮ. 
- ಮೂಲಂಗಿಯನ್ನು ಯಥೇಚ್ಛವಾಗಿ ಸೇವಿಸಿದರೆ ಕ್ಯಾನ್ಸರ್, ಕಾಮಾಲೆ ರೋಗವನ್ನೂ ತಡೆಯಬಹುದು. 
- ಒಂದು ಚಮಚ ಜೇನು ತುಪ್ಪಕ್ಕೆ, ಒಂದು ಚಮಚ ಮೂಲಂಗಿ ರಸ ಸೇರಿಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ. 
- ಮೂಲಂಗಿ ಮತ್ತು ಉಪ್ಪು ಅರೆದು ಚೇಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ನೋವು ಮಾಯವಾಗುತ್ತದೆ. 
- ಕೆಂಪು ಮೂಲಂಗಿ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. 
- ಮೂಲಂಗಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ನರವ್ಯೂಹ ಬಲಗೊಳ್ಳಲು ಸಹಕರಿಸುತ್ತದೆ. 

ಮನೆ ಮದ್ದುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ