ಪ್ರೀತಿ ಅನ್ನೋದು ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಸಂತೋಷ ನೀಡುತ್ತದೆ. ಆದರೆ ಅದರಿಂದ ಉಂಟಾಗುವ ಬ್ರೇಕ್ ಅಪ್ ಜೀವನವನ್ನೇ ಹಾಳು ಮಾಡುತ್ತದೆ. ಕೆಲವು ಭಗ್ನ ಪ್ರೇಮಿಗಳು ಜೀವನವನ್ನೇ ಕೊನೆಯಾಗಿಸುತ್ತಾರೆ. ಆದರೆ ಒಂದು ಬಾರಿ ಯೋಚಿಸಿ ನೋಡಿ... ಬ್ರೇಕ್ ಅಪ್‌ನಿಂದ ದುಃಖ ಆಗುತ್ತೆ ನಿಜ. ಆದರೆ ಅದರ ಆಚೆಗೂ ಜೀವನವಿದೆ ಅನ್ನೋದನ್ನು ನೀವು ಅರಿತುಕೊಳ್ಳಬೇಕು. ಪ್ರಪಂಚ ವಿಶಾಲವಾಗಿದ್ದು, ಬ್ರೇಕ್ ಅಪ್ ಆಯಿತು ಎಂದ ಕೂಡಲೇ ದೇವದಾಸನಾಗೋ ಅಗತ್ಯವಿಲ್ಲ.

ಇಂಥ ಬ್ರೇಕ್ ಅಪ್ ಜೀವನದಲ್ಲಿ ಹಲವು ಪಾಠಗಳನ್ನು ಕಲಿಸುತ್ತೆ ಎಂಬುವುದು ಗೊತ್ತಾದರೆ ಬದುಕೇ ಬಿಂದಾಸ್...

ಈ ಕಿಸ್ಸಿಂದ ವ್ಯಕ್ತಿತ್ವದ ಗುಟ್ಟೂ ಆಗುತ್ತೆ ರಟ್ಟು..

  • ನಿಮಗಾಗಿ ಸಮಯ ಮೀಸಲಿಡಬಹುದು. ಬ್ರೇಕಪ್‌ನಿಂದ ಕೇವಲ ಬೇಸರ ಮಾತ್ರವಲ್ಲ, ಲಾಭಾನೂ ಇದೆ. ಮುಖ್ಯವಾಗಿ ನಿಮಗಾಗಿಯೇ ಸಮಯ ಮೀಸಲಿಡಬಹುದು. ಪ್ರತಿ ದಿನ ಅವರ ಬಗ್ಗೆ ತಲೆ ಕೆಡಿಸಿಕೊಂಡಿರಬೇಕು ಎಂಬ ರೂಲ್ಸ್ ಕೂಡ ಇರಲ್ಲ. 
  • ಬೇರೆ ಬೇರೆ ಜನರೊಂದಿಗೆ ಫ್ರೆಂಡ್‌ಶಿಪ್ ಮಾಡಿಕೊಳ್ಳಬಹುದು. ಅಲ್ಲಿ ಯಾವುದೇ ತಡೆ ಗೋಡೆ ಇರೋದಿಲ್ಲ. ಅವರೊಂದಿಗೆ ನೀವೂ ಎಂಜಾಯ್ ಮಾಡಬಹುದು. 
  • ಹೊಸ ಪ್ರಪಂಚ ನಿಮಗಾಗಿ ಕಾಯುತ್ತಿರುತ್ತದೆ. ಆದುದರಿಂದ ಹೊಸ ಮನುಷ್ಯರಾಗಿ, ಹೊಸ ಉತ್ಸಾಹದಿಂದ, ಹೊಸ ನಗುವಿನೊಂದಿಗೆ ಮುಂದೆ ಬನ್ನಿ. 
  • ರಿಲೇಷನ್ ಶಿಪ್‌ನಲ್ಲಿದ್ದರೆ ನೀವು ಹೆಚ್ಚಾಗಿ ಅವರಿಗೆ ಸಮಯ ಮೀಸಲಿಡಿ. ಆದರೆ ಬ್ರೇಕಪ್ ನಂತರ ಅವಕಾಶಗಳಿಗೆ ಬೇಗನೆ ಸ್ಪಂದಿಸಬಹುದು. ಎಲ್ಲದಕ್ಕೂ ಅವರನ್ನೇ ಅವಲಂಬಿಸಬೇಕಾಗಿಲ್ಲ. 
  • ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಲು ಬ್ರೇಕಪ್ ಅನುವು ಮಾಡಿಕೊಡುತ್ತದೆ. ಅಷ್ಟೊಂದು ಕಹಿ ಎದುರಿಸಿದ ಮೇಲೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸುವ ಛಲ ಹುಟ್ಟುತ್ತದೆ. 
  • ಸ್ವತಂತ್ರ್ಯವಾಗಿ ಹಕ್ಕಿಯಂತೆ ಹಾರಾಡಬಹುದು. ಇದು ರಿಲೇಷನ್‌ಶಿಪ್‌ನಲ್ಲಿ ಇರುವಾಗ ಸಾಧ್ಯವಾಗಿರೋಲ್ಲ. 
  • ನಿಜವಾದ ಪ್ರೀತಿ ಯಾವುದು? ಎಂಬುದು ಬ್ರೇಕಪ್ ತಿಳಿಸು ಕೊಡುತ್ತದೆ. ಜೊತೆಗೆ ಜೀವನದಲ್ಲಿ ಮುಖ್ಯ ಪಾಠ ಕಲಿಸಿಕೊಡಲು ಇದು ಸಹಕರಿಸುತ್ತದೆ. 
  • ವೈಯಕ್ತಿಕ ಬೆಳವಣಿಗೆಗೆ, ಹೊಸ ಗುರಿಗಳನ್ನು ತಲುಪಲು ನಿಮಗೆ ಪ್ರೇರಣೆಯಾಗುತ್ತದೆ.