ಸುರ ಸುಂದರಿಯನ್ನು ಕಂಡರೆ ಸಾಕು, ಎಪ್ಪಾ! ಏನು ಬ್ಯೂಟಿಯಂದು ಕಣ್ಣೂ ಮುಚ್ಚದೆ ನೋಡುತ್ತ, ಕನಸಿ ಲೋಕಕ್ಕೆ ಹೋಗಿ, ಮದುವೆ, ಮಕ್ಕಳು, ಮುಂಜಿ... ಎಂದೆಲ್ಲಾ ಸಂಸಾರ ಕಟ್ಟಿ ಬಿಡುತ್ತೆ ಪುರುಷ ಜೀವ.ಆದರವಳು ನಿಮ್ಮವಳಾಗಲು ತಕ್ಕವಳೇ, ಎಂದು ತಿಳಿಯುವುದು ಸುಲಭವಲ್ಲ. ಈ ವಿಷ್ಯದಲ್ಲಿ ಸ್ನೇಹಿತರ ಸಲಹೆಯೂ ವರ್ಕ್‌ಔಟ್ ಆಗುವುದು ಅಷ್ಟಕ್ಕಷ್ಟೆ. ಅಕಸ್ಮಾತ್ ಯಶಸ್ಸು ನಿಮ್ಮದಾದರೂ, ನೈಜ ಬಣ್ಣ ತಿಳಿದರೆ ಹೈರಾಣಾಗುತ್ತೀರಿ. ಜೀವನದಲ್ಲಿ ಹುಡುಗಿ ವಿಷಯದಲ್ಲಿ ಮೋಸ ಹೋಗಬಾರದೆಂದರೆ ಇಲ್ಲಿವೆ ಟಿಪ್ಸ್, ಸಿಂಪ್ಲಿ ಫಾಲೋ ಮಾಡಿ....
- ಕಂಟ್ರೋಲ್ ಮಾಡುವವಳಾದರೆ ಆಕೆಯೊಂದಿಗೆ ಬದುಕೋದು ಕಷ್ಟ ಕಷ್ಟ.
- ಹಣವೇ ಜೀವನ ಎನ್ನುವವಳ ಸಹವಾಸವೇ ಬೇಡ.
- ಸದಾ ಹುಡುಗರ ಬಗ್ಗೆ ಮಾತಾಡುವುದು, ಅವರೊಂದಿಗೆ ಕಾಲ ಕಳೆಯುವವಳನ್ನು ದೂರವಿಟ್ಟರೆ ಬೆಸ್ಟ್. ಇಂಥವರು ನಿಮ್ಮ ಮೇಲೆ ಕಾಳಜಿ ವಹಿಸೋದು ಸುಳ್ಳು.
- ತಮ್ಮವರನ್ನು ಕೀಳೆಂದು ನೋಡಿ, ಬಡವ-ಬಲ್ಲಿದರೆಂದು ಬಯಾಸ್ಡ್ ಆಗಿರೋರಿಂದ ದೂರವುಳಿಯುವುದೇ ಶ್ರೇಷ್ಠ.
- ಉಭಯ ಕುಟುಂಬಗಳನ್ನು ದೂಷಿಸಿ, ಮತ್ತೊಬ್ಬರನ್ನು ದ್ವೇಷಿಸುವವಳ ಹತ್ತಿರ ಸುಳಿಯೋದೂ ತಪ್ಪು.
- ದುರಾಸೆ ಮತ್ತು ಅಸೂಯೆಯ ಪರಮಾವಧಿ ಹೊಂದಿರುವವಳು ಬೇಡವೆ ಬೇಡ.
- 'ಸ್ತ್ರೀವಾದಿ'ಯಾದರೆ ಓಕೆ. ಆದರೆ, ಸ್ತ್ರೀವ್ಯಾದಿಯಾಗಿದ್ದು, ಸದಾ ಗಂಡು ಕೀಳೆಂಬ ಭಾವನೆಯಿದ್ದವಳನ್ನು ವರಿಸಿದರೆ, ಬಾಳೋದು ಕಷ್ಟ.
Add Asianetnews Kannada as a Preferred Source

