• ಊಟದ ನಂತರ ನೀರು ಸೇವಿಸುವುದು ಉತ್ತಮ. ಆದರೆ ಊಟ ಆದ ಕೂಡಲೇ 10 ನಿಮಿಷ ಗ್ಯಾಪ್ ಕೊಟ್ಟರೆ ಒಳಿತು. ಅದರಲ್ಲಿಯೂ ತಣ್ಣೀರು ಕುಡಿದರೆ ಆಹಾರ ಜೀರ್ಣವಾಗಲು ಸಮಯ ಕೇಳುತ್ತದೆ. ವೈದ್ಯರ ಸಲಹೆ ಪ್ರಕಾರ ಊಟದ ನಂತರ ಬೆಚ್ಚನೆ ನೀರು ಕುಡಿಯಬೇಕು.
  • ಊಟದ ನಂತರ ದೇಹ ದಂಡಿಸುವ ಕೆಲಸ ಮಾಡಬಾರದು. ಇದರಿಂದ ರಕ್ತದೂತ್ತಡ ಹೆಚ್ಚಾಗಿ ವಾಂತಿ, ಭೇದಿ ಹಾಗೂ ಕೆಮ್ಮು ಬರುತ್ತದೆ.
  • ಸಾಮಾನ್ಯವಾಗಿ ಹಲವರಿಗೆ ಊಟವಾದ ಕೂಡಲೇ ಕಾಫಿ, ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಹಾಲಿನಂಶ ಇರುವ ದ್ರವ ಆಹಾರವನ್ನು ಊಟದ ನಂತರ ವರ್ಜಿಸಿದರೆ ಒಳಿತು. ಗ್ರೀನ್ ಅಥವಾ ಹರ್ಬಲ್ ಟೀ, ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
  • ಹೊಟ್ಟೆ ಭರ್ತಿ ತಿಂದಾಗ, ಧರಿಸಿಟ ಪ್ಯಾಂಟ್ ಅಥವಾ ಬೆಲ್ಟನ್ನು ಲೂಸ್ ಮಾಡೋದು ಕಾಮನ್. ಆದರೆ ಹೀಗ್ ಮಾಡಿದರೆ ಕಿಬ್ಬೊಟ್ಟೆ ನೋವು ಬರುತ್ತದೆ.
  • ಧೂಮಪಾನವೇ ಆರೋಗ್ಯಕ್ಕೆ ಹಾನಿಕರ. ಇನ್ನು ಊಟದ ನಂತರ ಮಾಡಿದರಂತೂ ಅಪಾಯ ಕಟ್ಟಿಟ್ಟ ಬುತ್ತಿ.
  • ಹೊಟ್ಟೆ ತುಂಬಿದರೆ ನಿದ್ದೆ ಗ್ಯಾರಂಟಿ. ಆದರೆ ಹೊಟ್ಟೆ ಬಿರಿ ತಿಂದರೆ ಅಥವಾ ತಿಂದ ಕೂಡಲೇ ಮಲಗಿದರೆ ಹೃದಯ ಸಂಬಂಧಿ ಕಾಯಿಲೆ, ಗೊರಕೆ ಹಾಗೂ ಹೊಟ್ಟೆ ಮುಂದೆ ಬರೋದು ಗ್ಯಾರಂಟಿ.
  • ಕೆಲವೊಮ್ಮೆ ಊಟದ ನಂತರ ಸ್ನಾನ ಮಾಡುವುದಿದೆ. ಹೀಗೆ ಮಾಡುವುದರಿಂದ ದೇಹದ ತಾಪಮಾನ ಹಾಗೂ ರಕ್ತ ಸಂಚಾರವ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.