ಈ 6 ರುಚಿಕರ ತಿಂಡಿಗಳನ್ನು ತಿಂದರೆ ಖುಷಿಯ ಜೊತೆ ದೇಹದ ತೂಕವೂ ಇಳಿಯುತ್ತದೆ

First Published 11, Jan 2018, 4:26 PM IST
6 yummy snacks that will help you lose weight
Highlights

ತಿಂಡಿಗಳನ್ನು ತಿಂದರೆ ಖುಷಿಯ ಜೊತೆ ದೇಹದ ತೂಕವೂ ಇಳಿಯುತ್ತದೆ

1) ಡಾರ್ಕ್ ಚಾಕೊಲೇಟ್: ಸ್ವಾದಿಷ್ಟ ಆಹ್ಲಾದಕರ ಈ ಚಾಕೋಲೇಟ್'ಗಳು ನಿಮ್ಮ ಬಾಯಿ ಚಪ್ಪರಿಕೆಗೆ ರುಚಿಯನ್ನು ನೀಡುತ್ತದೆ. ಪೌಷ್ಟಿಕಾಂಶ ಇರುವ ಸಾರಾಂಶ ಈ ಚಾಕೋಲೇಟ್'ನಲ್ಲಿ ಇರುವ ಕಾರಣ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಹೆಚ್ಚು ತಿನ್ನದೆ ನಿತ್ಯವೂ ಒಂದೆರಡೂ ಮುರುಕುಗಳನ್ನು ತಿನ್ನಿ

2) ಪಿಸ್ತಾಗಳು: ನಿಮ್ಮ ಆರೋಗ್ಯಕ್ಕೆ ಪಿಸ್ತಗಳು ಹೆಚ್ಚು ಅನುಕೂಲಕರ. ನಿಮ್ಮ ದೇಹದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಪಿಸ್ತಾಗಳು ಕಡಿಮೆ ಮಾಡುತ್ತವೆ. ವೈದ್ಯಕೀಯ ಅಧ್ಯಯನದ ಪ್ರಕಾರ ಪಿಸ್ತಾ ದೈಹಿಕ ಬೆಳವಣಿಗೆಗೆ ಅನುಕೂಲಕಾರಿ. ಅನಾರೋಗ್ಯ ಉಂಟು ಮಾಡುವ ಜಂಕ್ ಫುಡ್'ಗಳನ್ನು ಸೇವಿ-ಸುವ ಬದಲು ನಿತ್ಯ ಸ್ವಲ್ಪ ಪಿಸ್ತಾಗಳನ್ನು ಸೇವಿಸಿ.

3) ಬೇಯಿಸಿದ ಗಜ್ಜರಿ: ಒಂದಿಷ್ಟು ಉಪ್ಪು, ಖಾರದೊಂದಿಗೆ ಬೇಯಿಸಿದ ಗುಜ್ಜರಿ ಕಾಳುಗಳನ್ನು ಸೇವಿಸಿದರೆ ನಾಲಿಗೆಗೂ ರುಚಿ ಆರೋಗ್ಯಕ್ಕೂ ಉಪಯುಕ್ತ. ಆಲಿವ್ ಎಣ್ಣೆಯಲ್ಲಿ ಕರಿದು ಸೇವಿಸಿದರೂ ದೇಹದ ಕೊಬ್ಬು ಹೆಚ್ಚಾಗುವುದಿಲ್ಲ. ತೂಕ ಇಳಿಕೆಗೂ ಈ ಪದಾರ್ಥ ಹೆಚ್ಚು ಪ್ರಯೋಜನ ಉಂಟು ಮಾಡುತ್ತದೆ.

4) ಓಟ್ಸ್: ಹೆಚ್ಚು ಪೌಷ್ಟಿಕಾಂಶವಿರುವ ಕಾರಣ ವೈದ್ಯರೂ ಕೂಡ ಓಟ್ಸ್ ಪದಾರ್ಥಗಳನ್ನು ಸೇವನೆ ಮಾಡಲು ಸಲಹೆ ನೀಡುತ್ತಾರೆ. ಇದು ರುಚಿಕರವೂ ಹೌದು ಆರೋಗ್ಯಕ್ಕೆ ಅನುಕೂಲ. ನೀವು ಆಗಾಗ 50 ಗ್ರಾಮ್'ಗಳಷ್ಟು ತಿಂದರೆ ದೇಹದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಕರಗಿಸುತ್ತದೆ.

5) ಕಡಿಮೆ ಕೊಬ್ಬಿರುವ ಚೀಸ್ : ಕಡಿಮೆ ಪ್ರಮಾಣದ ಕೊಬ್ಬಿನ ಅಂಶವಿರುವ ಕೂಡ ಬಹುತೇಕರಿಗೆ ಅಚ್ಚುಮೆಚ್ಚಿನ ತಿಂಡಿ. ಚೀಸ್'ನಲ್ಲಿ ಪೌಷ್ಟಿಕಾಂಶಗಳು ಹೆಚ್ಚಿರುತ್ತವೆ. ಇದು ನಿಮ್ಮ ದೇಹದ ಆರೋಗ್ಯಕಾರಿ ಚಟುವಟಿಕೆಗಳಿಗೆ ಪ್ರಯೋಜನಕಾರಿ.

6) ಹಣ್ಣು ಮಿಶ್ರಿತ ಮೊಸರು: ಹಣ್ಣು ಮಿಶ್ರಿತ ಮೊಸರು ರುಚಿಕರ ತಿಂಡಿಗಳಲ್ಲಿ ಒಂದು ಊಟದ ಮಧ್ಯೆ ಹಾಗೂ ಊಟದ ನಂತರ ನಾಲ್ಕೈದು ಚಮಚಗಳಷ್ಟು ಹಣ್ಣು ಮಿಶ್ರಿತ ಮೊಸರನ್ನು ಸೇವಿಸಿದರೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

loader