ಮಲೇರಿಯಾದ ಬಗ್ಗೆ ಇರುವ 6 ತಪ್ಪು ಕಲ್ಪನೆಗಳಿವು....
ಕೇವಲ ಮಳೆಯ ಮಲೆನಾಡಿಗೆ ಸೀಮಿತವಾಗಿದ್ದ ಮಲೇರಿಯಾ ಇದೀಗ ಎಲ್ಲೆಡೆಗೆ ಸ್ಪ್ರೆಡ್ ಆಗಿದೆ. ನೀರು ನಿಂತರೆ ಸಾಕು, ಸೊಳ್ಳೆ ಸೃಷ್ಟಿಯಾಗಿ, ಮಲೇರಿಯಾ ಸೇರಿ ಚಿತ್ರ ವಿಚಿತ್ರ ಜ್ವರ ಹರಡುತ್ತದೆ. ಅಷ್ಟಕ್ಕೂ ಮಲೇರಿಯಾದ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು?
ಸೊಳ್ಳೆ ತನ್ನೊಂದಿಗೆ ಮಲೇರಿಯಾವನ್ನು ಹೊತ್ತು ಬರುತ್ತದೆ. ನಿಂತ ನೀರನ್ನ ಕಂಡರೆ ಸಾಕು, ಸೊಳ್ಳೆಗಳಿಗೆ ಸ್ವರ್ಗ. ಅತ್ತ ನಿದ್ರೆಯೂ ಮಾಡಲು ಬಿಡದೇ, ಇತ್ತ ಮಲೇರಿಯಾ, ಡೆಂಗ್ಯೂನಂಥ ರೋಗಗಳನ್ನು ಹೊತ್ತು ತರುವ ಸೊಳ್ಳೆ ಕಾಟದಿಂದ ಮನುಷ್ಯ ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ.
ಇಂಥ ಸೊಳ್ಳೆ ಕಚ್ಚಿದ 18 ದಿನಗಳ ನಂತರ ಬರೋ ಜ್ವರ ಬಿಡಲು ತಿಂಗಳಗಟ್ಟಲೆ ತೆಗೆದುಕೊಳ್ಳುತ್ತದೆ. ಅಲ್ಲದೇ ಈ ಮಲೇರಿಯಾ ಹರಡುವ ಸೊಳ್ಳೆ ಬಗ್ಗೆ ಇರೋ ಕೆಲವು ಮಿಥ್‌ಗಳು ಇಲ್ಲಿವೆ....
* ಮಿಥ್ಯ: ಮಲೇರಿಯಾ ಸೊಳ್ಳೆ ರಾತ್ರಿ ಮಾತ್ರ ಕಚ್ಚುವುದು.
ಸತ್ಯ: ಸಂಶೋಧನೆಯೊಂದು ಇದು ಸುಳ್ಳೆಂದು ಸಾಬೀತು ಪಡಿಸಿದೆ. ಏಕೆಂದರೆ ಸೊಳ್ಳೆಗಳು ಎಲ್ಲ ಸಮಯದಲ್ಲಿಯೂ ಚಟುವಟಿಕೆಯಿಂದ ಇರುತ್ತದೆ.
* ಮಿಥ್ಯ: ಮಲೇರಿಯಾ ಒಮ್ಮೆ ಕಾಡಿದರೆ ಜೀವಮಾನ ಪೂರ್ತಿ ಕಾಡುತ್ತದೆ.
ಸತ್ಯ: ಈ ಮಾತಿಗೆ ಯಾವುದೇ ದಾಖಲೆಯೂ ಇಲ್ಲ. ಟ್ರಾಪಿಕಲ್ ಪ್ರದೇಶ ಅಥವಾ ಹೆಚ್ಚು ಮಳೆಯಾಗುವ ಪ್ರದೇಶಗಳ ಮಕ್ಕಳಿಗೆ ವರ್ಷಕ್ಕೊಮ್ಮೆಯಾದರೂ ಜ್ವರ ಅದರಲ್ಲಿಯೂ ಮಲೇರಿಯಾ ಬರುತ್ತದೆ. ಬಿಟ್ಟೂ ಹೋಗುತ್ತದೆ. ಇದಕ್ಕೆ ಸೂಕ್ತ ಚುಚ್ಚುಮದ್ದನ್ನೂ ಕಂಡು ಹಿಡಿಯಲಾಗಿದೆ.
* ಮಿಥ್ಯ: ಬೆಳ್ಳುಳಿಯಿಂದ ಮಲೇರಿಯಾ ದೂರ.
ಸತ್ಯ: ಹೆಚ್ಚು ವಾಸನೆ ಬರುವಂಥ ಪದಾರ್ಥಗಳನ್ನ ಸೇವಿಸಿದರೆ ಸೊಳ್ಳೆ ದೂರವಾಗುತ್ತದೆ ಎನ್ನುವ ನಂಬಿಕೆ ಇದ್ದು, ಕೆಲವರು ಇದನ್ನು ಪಾಲಿಸುತ್ತಾರೆ. ಆದರೆ, ಸೊಳ್ಳೆ ಕಾಟದಿಂದ ದೂರವಿರಲು ಮೈ ತುಂಬಾ ಬಟ್ಟೆ ತೊಟ್ಟು ಮಲಗುವುದು ಹಾಗೂ ಸೊಳ್ಳೆ ಪರದೆ ಬಳಸುವುದು ಒಳಿತು. ಅಲ್ಲದೇ, ಸೊಳ್ಳೆಯೇ ಉತ್ಪತ್ತಿಯಾಗದಂತೆ ಕ್ರಮ ಕೈಗೊಂಡರೆೊಳಿತು.
* ಮಿಥ್ಯ: ರಕ್ತ ಹೀರಿದ ನಂತರ ಸಾಯುತ್ತೆ ಸೊಳ್ಳೆ.
ಸತ್ಯ: ಸಾಮಾನ್ಯವಾಗಿ ಮೊಟ್ಟೆ ಇಡುವ ಮುನ್ನ ಸೊಳ್ಳೆ ಮನುಷ್ಯರ ರಕ್ತ ಸೇವಿಸಿಯೇ 50 ರಿಂದ 200 ಮೊಟ್ಟಿಯಿಡುತ್ತವೆ. ನಂತರ ಎರಡ್ಮೂರು ವಾರಗಳ ಕಾಲ ಜೀವಿಸಿ ಸಾಯುತ್ತವೆ.
* ಮಿಥ್ಯ: ಸೊಳ್ಳೆ ಮನುಷ್ಯನನ್ನು ಮಾತ್ರ ಕಚ್ಚುತ್ತದೆ.
ಸತ್ಯ: ಸೊಳ್ಳೆ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಕಚ್ಚುತ್ತವೆ. ಅಗತ್ಯದಷ್ಟು ರಕ್ತ ಹೀರುತ್ತವೆ. ಇದರಿಂದ ಮಲೇರಿಯಾ ಮಾತ್ರವಲ್ಲದೇ, ಬೇರೆ ಕಾಯಿಲೆಯೂ ಬರುತ್ತವೆ.
* ಮಿಥ್ಯ: ಮಲೇರಿಯಾ ಯಾವ ದೊಡ್ಡ ತೊಂದರೆಯನ್ನೂ ಉಂಟು ಮಾಡುವುದಿಲ್ಲ.
ಸತ್ಯ: ಕೆಲವೊಮ್ಮೆ ಜ್ವರ ಕಡಿಮೆಯಾಗದಿದ್ದರೆ, ಅದು ದೇಹದ ಪ್ಲಾಸ್ಮೊಡಿಯಂಗೆ ಸೊಂಕು ತಂದು, ಅಂಗ ವೈಫಲ್ಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.
ಅದಕ್ಕೆ ಸೊಳ್ಳೆ ಹಾಗೂ ಜ್ವರವನ್ನು ಯಾವತ್ತೂ ಇಗ್ನೋರ್ ಮಾಡಬೇಡಿ.