ಮನೆಯ ಶೇ.50ರಷ್ಟು ಧೂಳು ನಮ್ಮ ಮೃತ ಚರ್ಮದ್ದು...!?

ನಿಮ್ಮ ಸ್ಕಿನ್ ಬಗ್ಗೆ ನಿಮಗೆ ಏನು ಗೊತ್ತಿದೆ. ನಾವು ಇಲ್ಲಿ ಹೇಳ್ತಾ ಇರೋ ಯಾವ ವಿಷ್ಯನೂ ನಿಮಗೆ ತಿಳಿದಿರಲು ಸಾಧ್ಯವಿಲ್ಲ. ಆಯ್ಲಿ ಸ್ಕಿನ್, ಡ್ರೈ ಸ್ಕಿನ್ ಅಂತ ಬೇಜಾರು ಮಾಡಿಕೊಳ್ಳೋರು, ಓದಿ ಈ ಸುದ್ದಿಯನ್ನು...

6 interesting facts about skin

ನ್ ಕೇರ್ ಮಾಡುವ ಮೊದಲು ನಿಮ್ಮ ಸ್ಕಿನ್ ಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ನಿಮಗೆ ತಿಳಿದಿರಬೇಕು. ಸ್ಕಿನ್‌ನಲ್ಲಿ ಏನಿದೆ ಅಂಥ ವಿಶೇಷತೆ? ಅದ್ಯಾವ ರೀತಿ ಕೆಲಸ ಮಾಡುತ್ತದೆ? 

6 interesting facts about skin

- ಇದನ್ನ ಕೇಳಿ ನಿಮಗೆ ಶಾಕ್ ಆಗಬಹುದು. ಪ್ರತಿ ನಿಮಿಷದಲ್ಲಿ 30 ಸಾವಿರ ಡೆಡ್ ಸ್ಕಿನ್ ದೇಹದಿಂದ ಹೊರ ಬೀಳುತ್ತದೆ. ಪ್ರತಿ 28 ದಿನದಲ್ಲಿ ನಮ್ಮ ತ್ವಚೆ ಪೂರ್ತಿಯಾಗಿ ಹೊಸದಾಗುತ್ತದೆ. 

- ದೇಹದಲ್ಲಿರುವ ಎಲ್ಲ ಧೂಳು -ಮಣ್ಣು ಉಂಟಾಗುವುದು ಡೆಡ್ ಸ್ಕಿನ್ ಕಾರಣದಿಂದ. ಅಧ್ಯಯನದಲ್ಲಿ ತಿಳಿಸಿರುವಂತೆ ಮನೆಯಲ್ಲಿರುವ ಧೂಳಿನ ಶೇ 50ರಷ್ಟು ಭಾಗ ಮೃತ ತ್ವಚೆಯಿಂದ ಉಂಟಾಗುತ್ತದೆ. 

- ಚರ್ಮ ನಮ್ಮ ದೇಹದ ಅತ್ಯಂತ ದೊಡ್ಡ ಜ್ಞಾನೇಂದ್ರಿಯ. ಸಾಮಾನ್ಯ ಮನುಷ್ಯನ ದೇಹದಲ್ಲಿ ನಾಲ್ಕು ಕೆಜಿ ಚರ್ಮ ಇರುತ್ತದೆ. 

ನಿಮ್ಮದು ಡ್ರೈಸ್ಕಿನ್ ಆಗಿದ್ದಲ್ಲಿ ಈ ಆಹಾರಗಳಿಂದ ದೂರವಿರಿ..

- ಚರ್ಮಕ್ಕೆ ಬಣ್ಣ ಅದರಲ್ಲಿರುವ ಮೆಲನಿನ್ ತತ್ವದಿಂದ ಬರುತ್ತದೆ. ಫಿಯೋಮೆಲನಿನ್ ತ್ವಚೆಯ ಬಣ್ಣ ಕೆಂಪಿನಿಂದ ಹಳದಿ ಬಣ್ಣವಾಗುತ್ತದೆ. ಇಯುಮೆಲನಿನ್ ಕಪ್ಪು ತ್ವಚೆಗೆ ಕಾರಣ.

- ಆಯ್ಲಿ ಸ್ಕಿನ್ ಹೊಂದಿರುವವರಲ್ಲಿ ಪಿಂಪಲ್ ಸಮಸ್ಯೆ ಬರೋದು ಸಾಮಾನ್ಯ. ಇದಕ್ಕೆ ಬೇಸರ ಬೇಡ.  ಡ್ರೈ ಸ್ಕಿನ್‌ನವರಿಗೆ ಆಯ್ಲಿ ಸ್ಕಿನ್‌ಗಿಂತ ಬಹು ಬೇಗ ವಯಸ್ಸಾಗುವಿಕೆಯ ಲಕ್ಷಣ ಕಾಣಿಸಿಕೊಳ್ಳುತ್ತದೆ. 

- ಹೆಚ್ಚು ಸ್ಟ್ರೆಸ್ ಇದ್ದರೆ ಸ್ಕಿನ್ ಟೆಕ್ಸ್ಚರ್ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಸ್ಕಿನ್ ತೆಳ್ಳಗೆ ಆಗುತ್ತಾ ಬರುತ್ತದೆ. ಆದುದರಿಂದ ಸಾಧ್ಯವಾದಷ್ಟು ಸ್ಟ್ರೆಸ್ ದೂರ ಮಾಡಿ. 

Latest Videos
Follow Us:
Download App:
  • android
  • ios