ಸ್ಲೀವ್‌ಲೆಸ್ ಡ್ರೆಸ್ ಅಥವಾ ಬ್ಲೌಸ್ ಹಾಕಿ ಕೊಳ್ಳುವುದಾದರೆ ಕಂಕುಳಿನ ಸೌಂದರ್ಯದ ಕಡೆಗೂ ಗಮನ ಹರಿಸಬೇಕು. ಕೂದಲು ತೆಗೆದಿದ್ದರೆ ಸಾಲದು, ಕಪ್ಪಾಗಿ ಕಾಣದಂತೆಯೂ ಎಚ್ಚರವಹಿಸಬೇಕು. ಇದಕ್ಕೆ ಮನೆ ಮದ್ದೇನು?

ಬ್ಯೂಟಿ ಪಾರ್ಲರ್ ಹೋಗಲು ಸಮಯವಿಲ್ಲದೆ ಮನೆಯಲ್ಲಿಯೇ ಶೇವ್ ಮಾಡುವ ಮಂದಿಗೆ ಉಂಟಾಗುವ ಸಮಸ್ಯಗೆ ಮನೆಯಲ್ಲಿಯೇ ಇದೆ ಪರಿಹಾರ. ಸದಾ ಶೇವ್ ಮಾಡುವರಿಗೆ ಕಂಕಳ ಕೆಳಗೆ ಕಪ್ಪಾಗುತ್ತದೆ. ಕಪ್ಪನ್ನು ಸರಿ ಪಡಿಸಲು ಮಾಡೋ ಹರ ಸಾಹಸ ಒಂದೆರಡಲ್ಲ. ಯಾರಿಗೂ ಹೇಳಲಾಗದೆ, ಏನೂ ಮಾಡಲಾಗದೇ ಸ್ಲೀವ್‌ಲೆಸ್ ಡ್ರೆಸ್ ಹಾಕಿ ಕೊಳ್ಳುವುದನ್ನೇ ನಿಲ್ಲಿಸಿಬಿಡುತ್ತಾರೆ ಮಂದಿ. ಇದರ ಬದಲು ಮನೆಯಲ್ಲಿಯೇ ಪದಾರ್ಥಗಳಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್...

ನಿಂಬೆ ರೆಸ

ಇದು ನೖಸರ್ಗಿಕ ಬ್ಲೀಚಿಂಗ್ ಏಜೆಂಟ್. ಆದುದರಿಂದ ಸುಲಭ ರೀತಿಯಲ್ಲಿ ಸಮಸ್ಯೆಯನ್ನು ನಿವಾರಿಸುತ್ತದೆ. ನಿಂಬೆ ರಸವನ್ನು ಸ್ನಾನ ಮಾಡುವ ಮುನ್ನ ಕಪ್ಪಾದ ಜಾಗಕ್ಕೆ 2-3 ನಿಮಿಷ ಉಜ್ಜಬೇಕು. ಇದನ್ನು 7-10 ದಿನಗಳ ಕಾಲ ಮಾಡಿದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಆಲೂಗಡ್ಡೆ ರಸ

ಆಲೂಗಡ್ಡೆ ಸ್ಲೈಸ್ ಅಥವಾ ರಸ ಮಾಡಿ ಕಪ್ಪಾದ ಜಾಗಕ್ಕೆ 10-15ನಿಮಿಷಗಳ ಕಾಲ ಹಚ್ಚಿ, ಉಜ್ಜಿದರೆ ತುರಿಕೆ ಮತ್ತು ಕಪ್ಪು ಮಾಯವಾಗುತ್ತದೆ. ಇದನ್ನು ದಿನಕ್ಕೆರಡು ಸಲ ಮಾಡಬೇಕು. 

ಸೇಬು ಸೈಡರ್ ವಿನೆಗರ್

ಇದರಲ್ಲಿ ಅಲ್ಪ ಪ್ರಾಣದ ಆ್ಯಸಿಡ್ ಇದ್ದು, ಸತ್ತ ಚರ್ಮವನ್ನು ತೆಗೆದು ಹಾಕುತ್ತದೆ. ಎರಡು ಚಮಚ ಸೇಬು ಸೈಡರ್ ವಿನೆಗರ್ ಮತ್ತು ಬೇಕಿಂಗ್ ಸೋಡ್ ಮಿಶ್ರಣ ಮಾಡಿ, ಕಪ್ಪಾದ ಜಾಗಕ್ಕೆ ಹಚ್ಚಿ, 10 ನಿಮಿಷಗಳ ಕಾಲ ಬಿಡಬೇಕು. ಇದನ್ನೂ ವಾರಕ್ಕೆ 3 ಸಲ ಮಾಡಿದರೆ ಒಳ್ಳೆ ಫಲಿತಾಂಶ ನಿಮ್ಮದಾಗುತ್ತದೆ.

ಆಲಿವ್ ಎಣ್ಣೆ

ಒಂದು ಚಮಚ ಆಲಿವ್ ಎಣ್ಣೆ ಮತ್ತು ಬ್ರೌನ್ ಸಕ್ಕರೆ ಸೇರಿಸಿ, ಕಪ್ಪಾದ ಜಾಗಕ್ಕೆ 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದನ್ನು ವಾರಕ್ಕೆ ಎರಡು ಸಲ ಪ್ರಯೋಗ ಮಾಡಬೇಕು. 

ಅಲೋ ವೆರಾ

ಮಾರುಕಟ್ಟಿಯಲ್ಲಿ ಲಭ್ಯವಿರುವ ಜೆಲ್ ಅಥವಾ ನೈಸರ್ಗಿಕ ಅಲೋವೆರಾ ಜೆಲ್ ಬಳಸಬಹುದು. ಕಪ್ಪಾದ ಜಾಗಕ್ಕೆ ಹಚ್ಚಿ, 15 ನಿಮಿಷಗಳ ನಂತರ ಶುದ್ಧ ಮಾಡಿಕೊಳ್ಳಬೇಕು. ಇದನ್ನು ಯಾವಾಗ ಬೇಕಾದರೂ ಬಳಸಬಹುದು.