ಕಿಟಕಿ ಪರದೆ ಮನೆ, ಮನಸ್ಸಿನ ಕತೆ ಹೇಳುತ್ತೆ!

ಮನೆಯ ವಾತಾವರಣ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ ಅಂತಾರೆ. ಹಾಗೆ ಆರೋಗ್ಯಕರ ಮನಸ್ಸೂ ಸಹ ಮನೆಯ ವಾತಾವರಣವನ್ನು ಪ್ರತಿನಿಧಿಸುತ್ತೆ. ನಮ್ಮ ಮನಸ್ಥಿತಿಗನುಗುಣವಾಗಿ ಕರ್ಟನ್‌ಗಳ ಡೆಕೊರೇಶನ್‌ ವಿಭಿನ್ನ ರೂಪ ತಾಳುತ್ತಿವೆ. ಮನೆಗೆ ಎಂಟ್ರಿಯಾಗುತ್ತಿದ್ದಂತೆ ಶಾಂತ ಸ್ವಭಾವ, ಆನಂದ ಮೂಡಿಸುವ ಕಿಟಕಿ ಪರದೆಗಳು ನಮ್ಮ ಸಂತೋಷ ಹೆಚ್ಚಿಸುತ್ತವೆ. ಮನೆಯ ಅಂದಚೆಂದ ಹೆಚ್ಚಿಸುವ ಕಿಟಕಿ ಪರದೆಗಳನ್ನು ಮನೆಯಲ್ಲೇ ತಯಾರಿಸಬಹುದು. ಗೋಡೆಗೆ ವಿರುದ್ಧ ಬಣ್ಣದ ಕರ್ಟನ್‌, ರಾರ‍ಯಂಡಮ್‌ ಕಲರ್‌, ಹಳೇ ಬಟ್ಟೆಗಳಿಂದ ಹೆಣೆದು ತಯಾರಿಸಿದ ಕರ್ಟನ್‌ಗಳು, ಸಿಂಪಲ್‌ ಡಿಸೈನ್‌, ಉಲನ್‌ನಿಂದ ಮಾಡಿದ ಕರ್ಟನ್‌ಗಳು ಹೀಗೆ ಹಲವು ರೀತಿಯಲ್ಲಿ ಕಿಟಕಿ ಪರದೆ ತಯಾರಿಸಿ ಮನೆಯನ್ನು ಸಿಂಗರಿಸಬಹುದು.

5 Tips to choose right curtains and drapes for good mood at home

ಲಿವಿಂಗ್‌ ರೂಮ್‌ಗೆ ಯಾವ ಪರದೆ ಹಾಕಿದ್ದೀರಿ

ಮನೆಯ ಲಿವಿಂಗ್‌ ರೂಮ್‌ ಸಿಂಪಲ್‌ ಆಗಿದ್ರೇ ಚೆಂದ. ಹಾಲ್‌ಅನ್ನು ಕಡಿಮೆ ವಸ್ತುಗಳಿಂದ ಆಕರ್ಷಕವಾಗಿ ಅಲಂಕರಿಸಿ. ಗೋಡೆಯ ಬಣ್ಣ ಒಂದು ಕಡೆ ಡಾರ್ಕ್ ಕಲರ್‌ನಲ್ಲಿ, ಇನ್ನುಳಿದ ಕಡೆ ಲೈಟ್‌ ಕಲರ್‌ನಲ್ಲಿದ್ದರೆ ಮನೆಯ ಲುಕ್‌ ಚೆನ್ನಾಗಿರುತ್ತೆ. ಬೆಳಕು ಚೆಲ್ಲುವ ಕಿಟಕಿಗೆ ಸಿಂಪಲ್‌ ಡಿಸೈನ್‌ನ ತಿಳಿ ಬಣ್ಣದ ಕರ್ಟನ್‌ ತುಂಬ ಸುಂದರವಾಗಿ ಕಾಣುತ್ತೆ. ಉದಾಹರಣೆಗೆ ತಿಳಿ ಗುಲಾಬಿ, ತಿಳಿ ಆಕಾಶ ನೀಲಿ, ಡಿಸ್ಟಂಪರ್‌ ಕಲರ್‌, ಕ್ರೀಮ್‌ ಕಲರ್‌, ರೆಟ್ರೋ ಡಿಸೈನ್‌, ಬ್ಲಾಕ್‌ ಆ್ಯಂಡ್‌ ವೈಟ್‌ ಸ್ಟೈಫ್ಸ್‌, ಗ್ರೇ ಕಲರ್‌ ಹೀಗೆ ಲೈಟ್‌ ಕಲರ್‌ನಲ್ಲಿರಲಿ. ಸೂರ್ಯನ ಬೆಳಕು ಈ ಪರದೆಗಳಿಂದ ಮನೆಯೊಳಗೆ ಇಣುಕಿದರೆ ಮನಸ್ಸಿಗೂ ಖುಷಿ. ಇಂಥ ಕರ್ಟನ್‌ಗಳು ಮನೆಮಂದಿ ಹಾಗೂ ಬಂದ ಅತಿಥಿಗಳನ್ನು ಆಕರ್ಷಿಸುವ ಜೊತೆಗೆ ಉಲ್ಲಾಸ, ಪಾಸಿಟಿವಿಟಿ ಹೆಚ್ಚಿಸುತ್ತೆ. ಖುಷಿ ನೀಡುವ ಜೊತೆಗೆ ಮನೆಯೂ ಬ್ರೈಟ್‌ ಆಗಿ ಕಾಣುವಂತೆ ಮಾಡುತ್ತೆ. ಹಾಲ್‌ನ ಮೂಲೆಯಲ್ಲಿ ಮನೆಯೊಳಗೆ ಬೆಳೆಯುವ ಶೋ ಗಿಡಗಳನ್ನು ಇಟ್ಟರೆ ಇನ್ನೂ ಚೆಂದ ಕಾಣುತ್ತೆ.

ಸೆಮಿ ಟ್ರಾನ್ಸಪರೆಂಟ್‌ ಕರ್ಟನ್‌

ಸೆಮಿ ಟ್ರಾನ್ಸಪರೆಂಟ್‌, ಉಲನ್‌, ವೇಸ್ಟ್‌ ಬಟ್ಟೆಗಳಿಂದ ಹೆಣೆದವು ಹೀಗೆ ಹಲವು ರೀತಿಯ ಕರ್ಟನ್‌ಗಳು ಹಾಲ್‌ನಿಂದ ಇತರೆಡೆಗೆ ಸಂಪರ್ಕಿಸುವ ಕಡೆ ಸೂಕ್ತ. ಉದಾಹರಣೆಗೆ, ಹಾಲ್‌ನಿಂದ ಡೈನಿಂಗ್‌ ಹಾಲ್‌ಗೆ ಹೋಗುವ ಮಧ್ಯೆ ಒಂದು ಕರ್ಟನ್‌ ಹಾಕುವಷ್ಟುಜಾಗ ಇರುತ್ತೆ. ಅಲ್ಲಿ ಈ ರೀತಿಯ ಕರ್ಟನ್‌ ಹಾಕಬಹುದು. ಈ ಜಾಗದಲ್ಲಿ ಇಂತದೇ ಬಣ್ಣದಲ್ಲಿ ಇರಬೇಕೆಂದೇನಿಲ್ಲ. ಬಣ್ಣ ಬಣ್ಣದ ಸೀರೆಗಳನ್ನು ಒಟ್ಟುಗೂಡಿಸಿ, ಹಳೆಯ ಬಣ್ಣದ ದುಪ್ಪಟ್ಟಗಳು ಸೇರಿಸಿ ನೇತುಹಾಕಬಹುದು. ಹೀಗೆ ಯಾವುದೇ ರೀತಿಯಲ್ಲಿರಲಿ ಒಟ್ಟಿನಲ್ಲಿ ಸೆಮಿ ಟ್ರಾನ್ಸಪರೆಂಟ್‌ ಕರ್ಟನ್‌ ಚೆಂದ ಕಾಣುತ್ತೆ. ಬಣ್ಣ ಬಣ್ಣಗಳ ಉಲನ್‌ನಿಂದ ತಯಾರಿಸಿದ ಕರ್ಟನ್‌ ಸಹ ಅಂದವಾಗಿರುತ್ತೆ.

ಗೋಡೆ ಮೇಲೆ ಮಕ್ಕಳ ಚಿತ್ತಾರ, ಹೆಚ್ಚುತ್ತೆ ಆಯವ್ಯಯ...!

ರೂಂಗೆ ಕ್ಯೂಟ್‌ ಕರ್ಟನ್‌

ರೂಂ ಎಂಬುದು ನಮ್ಮದೇ ಸ್ವಾತಂತ್ರ್ಯ. ಅದನ್ನು ಬಹಳ ಅಂದವಾಗಿ, ಚೆಂದವಾಗಿಟ್ಟುಕೊಳ್ಳಲು ಎಲ್ಲರೂ ಬಯಸುತ್ತಾರೆ. ಗಾಳಿ ಬೆಳಕು ಚೆನ್ನಾಗಿರಲು ಒಂದರಿಂದ ಮೂರು ಕಿಟಕಿಗಳು ಸಾಮಾನ್ಯವಾಗಿ ರೂಂನಲ್ಲಿ ಇರುತ್ತೆ. ಗೋಡೆ ಬಣ್ಣ, ಅದಕ್ಕೆ ಹೊಂದುವಂತೆ ಕರ್ಟನ್‌ಗಳು ಬಹು ಮುಖ್ಯ ಪಾತ್ರವಹಿಸುತ್ತೆ. ಮನಸ್ಸಿನ ಖಾಯಿಲೆಗಳನ್ನೂ ದೂರ ಮಾಡುವ ಶಕ್ತಿ ಇರುತ್ತೆ. ಸುಂದರ ವಾತಾವರಣ ಸೃಷ್ಟಿಸಲು ಹಳೆಯ ಸೀರೆಗಳಿಂದ ನೇತು ಬಿಟ್ಟಕರ್ಟನ್‌, ಬಣ್ಣ ಬಣ್ಣಗಳ ವೇಲ್‌ಗಳನ್ನು ಒಂದಕ್ಕೊಂದು ಹೊಲೆದು ನೇತು ಹಾಕುವುದು, ಹಳೇ ಬಟ್ಟೆಗಳಿಂದ ಜಡೆಯಂತೆ ಹೆಣೆದ ಕರ್ಟನ್‌, ಹರಿದ ಸೀರೆಯ ಅಂಚಿಗೆ ನೆರಿಗೆಯಂತೆ ಹೊಲೆದ ಕರ್ಟನ್‌ಗಳು ಚೆಂದ ಕಾಣಿಸುತ್ತೆ. ರೂಂನಲ್ಲಿ ಗಾಢ ಬಣ್ಣದ ಕರ್ಟನ್‌ ಒಂದು ಕಡೆಯಾದರೆ, ಬೆಳಕೂ ಪ್ರವೇಶಿಸಲು ಲೈಟ್‌ ಮಿಕ್ಸಡ್‌ ಕಲರ್‌ನ, ದುಪ್ಪಟ್ಟದಷ್ಟುತೆಳ್ಳಗಿನ ಕರ್ಟನ್‌ಗಳು ರೂಮ್‌ನ ಅಂದ ಹೆಚ್ಚಿಸುತ್ತದೆ. ಜಿಗ್‌ ಜಾಗ್‌, ಅಲೆ ಅಲೆಯಂತಿರುವ, ಚೆಕ್ಸ್‌, ರೌಂಡ್‌, ಡಾಟ್‌, ಸಣ್ಣ ಹೂಗಳಿರುವ ಕರ್ಟನ್‌ ಅಂದ ಹೆಚ್ಚಿಸುತ್ತದೆ.

ವಿಶೇಷವಾಗಿರಲಿ ಮಕ್ಕಳ ರೂಂ

ಮಕ್ಕಳ ರೂಂ ಯಾವಾಗಲೂ ಬ್ರೈಟ್‌ ಆಗಿ ಇರಬೇಕು. ಪ್ರಖರವಾಗಿದ್ದಷ್ಟು ಮಕ್ಕಳಲ್ಲಿ ಒಳ್ಳೆಯ ಮನಸ್ಥಿತಿ, ಸದ್ವಿಚಾರಗಳು ಹೆಚ್ಚುತ್ತವೆ. ಇವು ಮಕ್ಕಳು ಲವಲವಿಕೆಯಿಂದಿರಲು ಚುರುಕಾಗಿರುವಂತೆ ಪಾಸಿಟಿವ್‌ ಎನರ್ಜಿ ಮೂಡಿಸುತ್ತವೆ. ಬೇಬಿ ಪಿಂಕ್‌, ತಿಳಿ ನೀಲಿ ಹೀಗೆ ಲೈಟ್‌ ಕಲರ್‌ನ ಕರ್ಟನ್‌ ಚೆಂದವಾಗಿ ಕಾಣುತ್ತೆ. ಇಂತಹ ಕರ್ಟನ್‌ಗಳ ಮೇಲೆ ಮಕ್ಕಳಿಗೆ ಇಷ್ಟವಾಗುವ ಕಾರ್ಟೂನ್‌, ಪ್ರಿಟ್ಸ್‌, ಕಾಮಿಡಿ ಆರ್ಟ್‌, ಪ್ರಾಣಿ ಪಕ್ಷಿಗಳು ಹೀಗೆ ಹಲವು ಚಿತ್ರಗಳು ಇದ್ದರೆ ಚೆಂದ. ಕರ್ಟನ್‌ ಬಿಟ್ಟು ಗೋಡೆಯ ಮೇಲೆ ಶೋಗೆ ಕಲರ್‌ ದುಪ್ಪಟ್ಟಗಳ ತೋರಣವನ್ನೂ ಹಾಕಬಹುದು.

ಪರದೆಗೆ ತಕ್ಕಂಥ ಬೆಳಕಿಂಡಿ

ಮನೆಯ ಕಿಟಕಿ, ಬಾಗಿಲ ಪರದೆಗಳಿಗೆ ಲೈಟಿಂಗ್‌ ಪೂರಕವಾಗಿರಲಿ.

* ಹಾಲ್‌ನಲ್ಲಿ ವೇಸ್ಟ್‌ ಗಾಜಿನ ಬಾಟೆಲ್‌ಗಳು, ಕಲರ್‌ ಗಾಜಿನ ಬಾಟೆಲ್‌ಗಳು, ಪೇಪರ್‌ನಿಂದ ತಯಾರಿಸಿದ ಲೈಟ್‌ಗಳು, ವೇಸ್ಟ್‌ ಬಳೆಗಳಿಂದ ತಯಾರಿಸಿದ ಲ್ಯಾಂಪ್‌ ಲೈಟಿಂಗ್ಸ್‌ ಗಳನ್ನು ಕರ್ಟನ್‌ನ ಅಕ್ಕ ಪಕ್ಕದಲ್ಲಿ ನೇತು ಹಾಕಿದರೆ ಚೆಂದ ಕಾಣುತ್ತೆ. ಲೈಟ್‌ ಹಾಕದಿದ್ದರೂ ಕರ್ಟನ್‌ನ ಸೈಡ್‌ಗೆ ಅಳವಡಿಸಿದ ಈ ಜೋತು ಬೀಳುವ ಕ್ರಾಫ್ಟ್‌ ವರ್ಕ್ನ ಲೈಟಿಂಗ್ಸ್‌ನಿಂದ ಬೆಳಕು ಮೂಡಿ ಚೆಂದ ಕಾಣುತ್ತೆ.

ಮತ್ತೊಬ್ಬರ ಪೆನ್, ಟವೆಲ್ ಬಳಕೆ ಹಿಂದಿದೆ ವಾಸ್ತು ಶಾಸ್ತ್ರ

* ಹಾಲ್‌ ಹಾಗೂ ರೂಮ್‌ನಲ್ಲಿ, ಬಿಳಿ ಹಾಗೂ ಚಿನ್ನದ ಬಣ್ಣದ ಲೈಟಿಂಗ್ಸ್‌ ಚೆಂದ ಕಾಣುತ್ತೆ. ಇದು ಮನೆಯ ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುವ ಲೈಟಿಂಗ್ಸ್‌.

* ಕರ್ಟನ್‌ ಅಳವಡಿಸಿದ ಕಂಬಿಗಳ ಮೇಲೆ ಸಾಮಾನ್ಯವಾಗಿ ಖಾಲಿ ಇರುತ್ತೆ. ಆ ಜಾಗವನ್ನು ಪೇಪರ್‌ ಅಥವಾ ಗಾಜಿನ ಕಲರ್‌ ಬಾಟಲ್‌ಗಳಿಂದ ಸಿಂಗರಿಸಿದರೂ ಸಾಕು. ಅದು ಬೆಡ್‌ ಲೈಟ್‌ನಂತೆ ಕಾಣುವುದರ ಜೊತೆಗೆ ಡಿಮ್‌ ಆಗಿರುವುದರಿಂದ ಕತ್ತಲಲ್ಲೂ ಮನೆಯು ಸುಂದರವಾಗಿ ಕಾಣಿಸುತ್ತೆ.

* ವೇಸ್ಟ್‌ ಗಾಜಿನ ಬಳೆ, ಅದೂ ಒಡೆದಿದ್ದರೂ ಪರವಾಗಿಲ್ಲ, ಮಿಕ್ಸಡ್‌ ಕಲರ್‌ನ ಗಾಜಿನ ಬಳೆಗಳನ್ನು ಒಂದಕ್ಕೊಂದು ಅಂಟಿಸಿ ಲ್ಯಾಂಪ್‌ನಂತೆ ಮಾಡಬಹುದು. ಇವುಗಳನ್ನು ಸಣ್ಣ ಬಲ್‌್ಬ, ಟೇಬಲ್‌ ಲ್ಯಾಂಪ್‌ನಂತೆಯೋ ರೂಮ್‌ನಲ್ಲಿ ಇಡಬಹುದು. ಇಲ್ಲದಿದ್ದರೆ ಈ ರೀತಿಯ ಗಾಜಿನ ಬಳೆಗಳಿಂದ ಮಾಡಿದ ಲೈಟಿಂಗ್ಸ್‌ ಅನ್ನು ರೂಂನ ಕಿಟಕಿ, ಗೋಡೆಯ ಮೂಲೆಗಳಲ್ಲಿ ಇಟ್ಟರೂ ಕರ್ಟನ್‌ಗೆ ತಕ್ಕಂತೆ ಚೆಂದ ಕಾಣಿಸುತ್ತೆ. ಲೈಟಿಂಗ್ಸ್‌ ಸಹ ಮನಸ್ಸಿಗೆ ಸಂತೋಷ ನೀಡುವ ವಸ್ತುವಾಗಿದೆ.

* ನೀವು ಎಲ್ಲೆಲ್ಲಿ ಕರ್ಟನ್‌ ಹಾಕಿರುತ್ತೀರೋ ಅಲ್ಲೆಲ್ಲಾ ಕರ್ಟನ್‌ನ ಎರಡೂ ಬದಿ ಇಲ್ಲವೇ, ಕರ್ಟನ್‌ನ ಕಂಬಿಯ ಮೇಲೆ ಲೈಟ್‌ ಹಾಕಿದರೂ ಚೆಂದ ಕಾಣುತ್ತದೆ. ಜೋತು ಬಿದ್ದ ಲೈಟಿಂಗ್ಸ್‌, 3 ಡಿ ಲೈಟಿಂಗ್ಸ್‌, ಪುಟಾಣಿ ಇಳಿಬಿಟ್ಟ ಲೈಟಿಂಗ್ಸ್‌ ಹೀಗೆ. ಇವು ಕರ್ಟನ್‌ ಅನ್ನು ಎದ್ದು ಕಾಣುವಂತೆ ಮಾಡುತ್ತೆ ಜೊತೆಗೆ ಅಂದ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಹೀಗೆ ಅಳವಡಿಸುವ ಲೈಟಿಂಗ್ಸ್‌ಗಳು ಗೋಲ್ಡನ್‌ ಬಣ್ಣದಲ್ಲಿ ಇದ್ದರೆ ಚೆಂದ.

Latest Videos
Follow Us:
Download App:
  • android
  • ios