ಗೋಡೆ ಮೇಲೆ ಮಕ್ಕಳ ಚಿತ್ತಾರ, ಹೆಚ್ಚುತ್ತೆ ಆಯವ್ಯಯ...!

ಗೊತ್ತಿಲ್ಲದೇ ಮಾಡುವ ಕೆಲವು ಕೆಲಸಗಳು ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅಂಥ ಸಮಸ್ಯೆಗಳೇನು? ನಮ್ಮಿಂದಾಗುವ ಆ ತಪ್ಪುಗಳೇನು ತಿಳಿಯಲು ಮುಂದೆ ಓದಿ..

4 Mistakes to avoid while decorating home for positive energy

ಸಂತೋಷವಾಗಿರುವ ಮನೆಯಲ್ಲಿ ಅಚಾನಕ್ ಧನ ಹಾನಿಯಾದರೆ, ಮನೆಯ ಯಾವುದೇ ಸದಸ್ಯರಿಗೆ ರೋಗ ಕಾಣಿಸಿಕೊಂಡರೆ, ಇದರಿಂದ ಮನೆಯ ಎಲ್ಲ ಸದಸ್ಯರಿಗೂ ಟೆನ್ಶನ್ ಕಾಡುತ್ತದೆ. ಇದಕ್ಕೆ ಕಾರಣ ವಾಸ್ತು ದೋಷ. ವಾಸ್ತು ಶಾಸ್ತ್ರದ ಅನುಸಾರ ನಾವು ತಿಳಿಯದೇ ಏನಾದರೂ ತಪ್ಪು ಮಾಡಿದರೆ ಇದರಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಆದುದರಿಂದ ಎಲ್ಲಾ ವಿಷಯಗಳ ಕಡೆಗೂ ಗಮನ ಹರಿಸಬೇಕು. 

- ಮನೆಯಲ್ಲಿ ಯಾವ ರೂಮಿನಲ್ಲಿ ಹಣ ಅಥವಾ ಚಿನ್ನ ಇಡುತ್ತೀರಿ, ಅಲ್ಲಿ ಅಪ್ಪಿ ತಪ್ಪಿಯೂ ಪೊರಕೆ ಇಡಬೇಡಿ. ಇಟ್ಟರೆ ಮನೆಯಲ್ಲಿ ಧನ ಹಾನಿಯಾಗುತ್ತದೆ. ಅಲ್ಲದೆ ಮನೆಯವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 

ನೆಗಟಿವ್ ಶಕ್ತಿ ಗುದ್ದೋಡಿಸುತ್ತೆ ಚಂದನ, ಲೋಬಾನ!

- ವಾಸ್ತು ಶಾಸ್ತ್ರದ ಅನುಸಾರ ಟಾಯ್ಲೆಟ್ ಬಾಗಿಲು ಯಾವಾಗಲೂ ಕ್ಲೋಸ್ ಆಗಿರಬೇಕು. ಬಾಗಿಲು ಹಾಕುವ ಸಮಯದಲ್ಲಿ ಶಬ್ಧ ಬಾರದಂತೆ ನೋಡಿಕೊಳ್ಳಿ. ಶಬ್ಧವಾದರೆ ಮನೆಯವರ ಉದ್ಯೋಗದ ಮೇಲೂ ಪರಿಣಾಮ ಬೀರುತ್ತದೆ. 

-ಬೆಡ್ ರೂಮಿನಲ್ಲಿ ದೇವರ ಫೋಟೋ ಹಾಕಬೇಡಿ. ಇನ್ನು ಕೆಲವರು ಮನೆಯಲ್ಲಿ ಹನುಮಂತನ ಮೂರ್ತಿ ಇಡುತ್ತಾರೆ. ಹೀಗೆ ಮಾಡಿದರೆ ಸಮಸ್ಯೆ ಜಾಸ್ತಿ. 

ವಾಸ್ತು ನಿಯಮದ ಪ್ರಕಾರ ಮನೆಯ ಪೂಜಾ ಮಂದಿರ ಹೇಗಿರಬೇಕು?

- ಕೆಲವರ ಮನೆ ಗೋಡೆಯಲ್ಲಿ ಪೆನ್ ಅಥವಾ ಪೆನ್ಸಿಲ್‌ನಿಂದ ಏನಾದರೂ ಬರೆದಿರುತ್ತದೆ. ಮಕ್ಕಳು ಗೋಡೆ ಸಿಕ್ಕಿದರೆ ಸಾಕು ಏನಾದರೂ ಗೀಚುತ್ತಿರುತ್ತಾರೆ. ಇದರಿಂದ ಮನೆಯಲ್ಲಿ ಖರ್ಚು ಹೆಚ್ಚುತ್ತದೆ. 

Latest Videos
Follow Us:
Download App:
  • android
  • ios