ಬೀಟ್ ರೂಟ್ ಬಗ್ಗೆ ಹೊಸದಾಗಿ ಹೇಳುವ ಅಗತ್ಯ ಇಲ್ಲ. ಇದನ್ನು ಹಸಿಯಾಗಿ ತಿಂದರೂ, ಬೇರೆ ಬೇರೆ ರೀತಿಯಲ್ಲೂ ತಿಂದರೂ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಇದು ಶರೀರದಲ್ಲಿ ರಕ್ತವನ್ನು ಹೆಚ್ಚಿಸುವುದರೊಂದಿಗೆ ಗರ್ಭಿಣಿಯರ ಆರೋಗ್ಯದ ದೃಷ್ಟಿಯಿಂದಲೂ ಸಹಕಾರಿ. ವೈದ್ಯರು ತಿಳಿಸುವಂತೆ ಇದರ ಸೇವನೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ಹೆಚ್ಚಿನ ಪ್ರಯೋಜನಗಳಿವೆ. 

ಬೀಟ್‌ರೂಟ್ ಚಹಾ: ಮೊದಲಿಗೆ ಬೀಟ್ ರೂಟ್ ಸಿಪ್ಪೆ ತೆಗೆದು ಚೆನ್ನಾಗಿ ಕ್ಲೀನ್ ಮಾಡಿ ಅದನ್ನು ಒಂದು ಬೌಲ್‌‌ನಲ್ಲಿ ನೀರು ಹಾಕಿ ನೆನೆಸಿಡಿ. ಈಗ ಅದಕ್ಕೆ ಸ್ವಲ್ಪ ಶುಂಠಿ ಹಾಕಿ ಕುದಿಸಿ. ಅದನ್ನು ಸೋಸಿ ಅದಕ್ಕೆ ಬೇಕಾದಷ್ಟು ಜೇನು, ನಿಂಬೆ ರಸ, ಪುದೀನಾ ಅಥವಾ ತುಳಸಿ ಹಾಕಿ. ಈಗ ಬೀಟ್ ರೂಟ್ ಚಹಾ ತಯಾರಿ. 

ಇದರಿಂದ ಏನೆಲ್ಲಾ ಪ್ರಯೋಜನಗಳಿವೆ : 

  • ಪ್ರೆಗ್ನೆನ್ಸಿ ಸಮಯದಲ್ಲಿ ಬೀಟ್‌ರೂಟ್ ಚಹಾ ಸೇವಿಸಿದರೆ ತಾಯಿ-ಮಗುವಿನ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಅಲ್ಲದೇ ಕೆಂಪು ರಕ್ತ ಕಣ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. 
  • ಇದರಲ್ಲಿರುವ ಫಾಲಿಕ್ ಆ್ಯಸಿಡ್ ಭ್ರೂಣ ವಿಕಾಸಕ್ಕೆ ಸಹಕರಿಸುತ್ತದೆ. ಮಗುವಿಗೆ ಹೆಚ್ಚಿನ ಪೋಷಕಾಂಶ ನೀಡುತ್ತದೆ. 
  • ಪ್ರೆಗ್ನೆನ್ಸಿ ಸಮಯದಲ್ಲಿ ಆರೋಗ್ಯದಿಂದ ಇರಲು ರೋಗ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
  • ಸುಸ್ತು, ಬಸವಳಿಯುವ ಸಮಸ್ಯೆ ಇದ್ದವರಿಗೆ ನೆರವಾಗುವ ಜೊತೆಗೆ, ದೇಹದಲ್ಲಿ ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ. 
  • ಬೀಟ್ ರೂಟ್ ಚಹಾ ಗರ್ಭಿಣಿ ಮಹಿಳೆ ಹಾಗೂ ಮಗು ದೈಹಿಕ ಹಾಗೂ ಮಾನಸಿಕವಾಗಿ ಬೆಳೆಯಲು ಸಹಕರಿಸುತ್ತದೆ.