Asianet Suvarna News Asianet Suvarna News

ಮೂಡ್ ಬದಲಿಸುತ್ತೆ ಆಂಗಿಕ ಭಾಷೆ, ನೀವೂ ಮನಃಶಾಸ್ತ್ರಜ್ಞರಾಗಿ

ದೇಹ ಭಾಷೆ, ಎಮೋಷನಲ್ ವೀಕ್ನೆಸ್, ಟೈಮಿಂಗ್, ನೋಡುವ ದೃಷ್ಟಿ ಇವೆಲ್ಲವೂ ಇನ್ನೊಬ್ಬರ ಮೇಲೆ ಪ್ರಭಾವ ಬೀರುವಲ್ಲಿ ಸಹಾಯಕ. ಹೇಗೆ ಅಂತ ತಿಳ್ಕೊಳಿ.

4 Ways To Psychologically Manipulate Someone
Author
Bengaluru, First Published Jul 24, 2019, 5:59 PM IST

ಸೈಕಾಲಜಿಯನ್ನು ನಿಮ್ಮ ಲಾಭಕ್ಕೆ ಹೇಗೆ ಬಳಸಬಹುದೆಂದು ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕಾಗಿ ನಿಮಗೇನು ಸೈಕಾಲಜಿಯಲ್ಲಿ ಡಿಗ್ರಿ ಬೇಡ, ಮೈಂಡ್ ರೀಡಿಂಗ್ ಮಾಡೋಕೆ ಬರಬೇಕೆಂದು ಕೂಡಾ ಇಲ್ಲ. ಸ್ವಲ್ಪ ಕಾಮನ್ ಸೆನ್ಸ್ ಬಳಸಿದರೆ ನಮ್ಮ ಸಹೋದ್ಯೋಗಿಗಳು, ಬಾಸ್, ಗೆಳೆಯರು ಎಲ್ಲರೊಂದಿಗಿನ ಸಂವಾದವನ್ನು ನಮಗೆ ಬೇಕೆಂದಂತೆ ತಿರುಗಿಸಿಕೊಳ್ಳಬಹುದು. ಹಾಗಂತ ದುರುದ್ದೇಶದ ಬಳಕೆಗೆ ಅಲ್ಲ. ಯಾರನ್ನಾದರೂ ರಜೆ ತೆಗೆದುಕೊಳ್ಳುವಂತೆ ಒಪ್ಪಿಸಲು, ಪ್ರಮೋಶನ್ ಪಡೆಯಲು ಮುಂತಾದ  ವಿಷಯಕ್ಕಾಗಿ ಸಂದರ್ಭಗಳನ್ನು ಸರಿಯಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಸಿಂಪಲ್ ಬೇಸಿಕ್ ಸೈಕಾಲಜಿ ಗೊತ್ತಿದ್ದರೂ ಜಯಿಸಬಹುದು. ಇಲ್ಲಿ ಅಂಥ ಕೆಲವು ಸಿಂಪಲ್ ಸೈಕಾಲಜಿಕಲ್ ವಿಷಯಗಳನ್ನು ನೀಡಲಾಗಿದೆ. 

1. ನಮ್ಮ ಲಾಭಕ್ಕೆ ದೇಹ ಭಾಷೆ ಬಳಕೆ
ನಮ್ಮ ಸಂವಹನದಲ್ಲಿ ಶೇ.90ರಷ್ಟು ಭಾಗ ಮಾತಿನ ಹೊರತಾದದ್ದು ಎಂಬುದನ್ನು ನೀವೂ ಕೇಳಿರಬಹುದು. ಬಾಡಿ ಲಾಂಗ್ವೇಜ್ ಮಾತಿನಲ್ಲಿ ಹೇಳುವುದಕ್ಕಿಂತ  ಹತ್ತು ಹಲವನ್ನು ಹೇಳಿಬಿಡುತ್ತದೆ. ದೈನಂದಿನ ಮಾತುಕತೆಯಲ್ಲಿ ನಮ್ಮ ಬಾಡಿ ಲಾಂಗ್ವೇಜ್‌ನ ಪಾತ್ರ ಬಹಳ ದೊಡ್ಡದು. ಸುತ್ತಲಿನವರ  ಮೇಲೆ ಬಹಳಷ್ಟು ಪ್ರಭಾವ ಬೀರುವ ತಾಕತ್ತು ಆಂಗಿಕ  ಭಾಷೆಗಿದೆ. ಕೆಲವೊಮ್ಮೆ ಮಾತೇ  ಆಡದೆ ನಮ್ಮ  ಇಷ್ಟಕಷ್ಟಗಳನ್ನು ಎದುರಿನವರಿಗೆ ಬಾಡಿ ಲಾಂಗ್ವೇಜ್ ಮೂಲಕವೇ ತಲುಪಿಸಿಬಿಡಬಹುದು. ನೀವು ಕೈ ಕಟ್ಟಿಕೊಂಡು ನೆಲ ನೋಡುತ್ತಾ ಪ್ರಮೋಶನ್ ಕೇಳಿದರೆ, ಬಾಯಿ ಬಿಟ್ಟು ಕೇಳಿದ್ದಕ್ಕಿಂತಲೂ ದೇಹಭಾಷೆಯತ್ತಲೇ ನಿಮ್ಮ ಬಾಸ್‌ನ ಗಮನ ಹೆಚ್ಚಾಗಿ ಹೋಗುತ್ತದೆ. ಖಂಡಿತಾ ನಿಮಗೆ ಪ್ರಮೋಶನ್ ಸಿಗಲಾರದು. ನಿಮ್ಮ ಬಾಡಿ ಲಾಂಗ್ವೇಜ್ ಉತ್ತಮಗೊಳಿಸಿಕೊಳ್ಳುವುದು ಎಷ್ಟು ಮುಖ್ಯವೋ, ಮತ್ತೊಬ್ಬರ ದೇಹಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಕೂಡಾ ಅಷ್ಟೇ ಅಗತ್ಯ. ಇನ್ನೊಬ್ಬರು ನಿಮ್ಮ ಮಾತುಗಳನ್ನು ನಿಜವಾಗಿಯೂ ಒಪ್ಪುತ್ತಿದ್ದಾರೆಯೇ, ನೀವು ಹೇಳುವುದನ್ನು ಗಮನವಿಟ್ಟು ಕೇಳುತ್ತಿದ್ದಾರೆಯೇ, ನೀವೊಬ್ಬ ಮೂರ್ಖ ಎಂದು ಒಳಗೊಳಗೇ ಬೈದುಕೊಳ್ಳುತ್ತಿದ್ದಾರೆಯೇ ಎಂದು ಕೂಡಾ ಅರ್ಥ ಮಾಡಿಕೊಳ್ಳಬಹುದು.  ಹೆಚ್ಚು ಹೆಚ್ಚು ಬಾಡಿ ಲಾಂಗ್ವೇಜ್ ಬಳಕೆಯು ಜನರು ನಿಮ್ಮೆಡೆ ಹೆಚ್ಚು ಆಕರ್ಷಿತರಾಗಲು, ಒಪ್ಪಿಕೊಳ್ಳಲು ಕಾರಣವಾಗುತ್ತದೆ.  

ಜೀವನದ ಜಂಜಾಟಕ್ಕೆ ಸಂಗೀತವೇ ಮದ್ದು

ಕೆಲ ಆಸಕ್ತಿಕರ ದೇಹಭಾಷೆಗಳು
- ಅಂಗೈ ತೆರೆದು ಮಾತನಾಡುವುದು ನಂಬಿಕೆಯನ್ನು ಸೂಚಿಸುತ್ತದೆ.
- ಅಂಗೈ ಕೆಳಮುಖವಾಗಿ ಶೇಕ್ ಹ್ಯಾಂಡ್ ಮಾಡಿದರೆ ಅದು ಡಾಮಿನೆನ್ಸ್‌ನ್ನೂ, ಮೇಲ್ಮುಖ ಅಂಗೈನಿಂದ ಶೇಕ್ ಹ್ಯಾಂಡ್ ಮಾಡಿದರೆ ಅದು ಸಬ್‌ಮಿಸಿವ್‌ನೆಸ್ಸನ್ನೂ ಸೂಚಿಸುತ್ತದೆ. 
- ಗುಂಪಿನಲ್ಲಿ ಜೋರಾಗಿ ನಗುವಾಗ ನಿಮ್ಮ ಅತಿ ನಂಬುಗೆಯ ವ್ಯಕ್ತಿಯೊಡನೆ ಮೊದಲು ಐ ಕಾಂಟ್ಯಾಕ್ಟ್ ಸಾಧಿಸುತ್ತೀರಿ.
ಇಂಥ ಹತ್ತು ಹಲವು ದೇಹಭಾಷೆಯ ಟ್ರಿಕ್‌ಗಳನ್ನು ಅರಿತು, ಅವನ್ನು ನಿಮ್ಮ ದೈನಂದಿನ ಜೀವನದಲ್ಲಿ ಬಳಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

2. ಟೈಮಿಂಗ್ ಮತ್ತು ಅವಕಾಶ
ಚಿರತೆ ಎಷ್ಟು ಲೆಕ್ಕಾಚಾರದ ಪರಿಣಾಮಕಾರಿ ಬೇಟೆಗಾರ ಎಂದು ನಿಮಗೂ ಗೊತ್ತು. ತಲೆಮಾರುಗಳಿಂದ ಅದಕ್ಕೆ ಅತ್ಯಂತ ಪಕ್ಕಾ ಟೈಮಿಂಗ್ ಹಿಡಿಯುವುದು ಹೇಗೆಂದು ಹರಿದುಬಂದಿದೆ. ಯಾವಾಗ ಬೇಟೆ ಮೇಲೆ ಹಾರಬೇಕು, ಎಲ್ಲಿ ಹಿಡಿಯಬೇಕು ಎಂಬುದೆಲ್ಲ ಅದಕ್ಕೆ ಕರಗತ. ಹಾಗೆಯೇ ನೀವು ಕೂಡಾ ಯಾವಾಗ ಏನು ಮಾಡಿದರೆ ಕೆಲಸ ಆಗುತ್ತದೆ ಎಂಬುದನ್ನು ಕಂಡುಕೊಳ್ಳಬೇಕು. ನಾವಿದನ್ನು ಸಾಮಾನ್ಯವಾಗಿ ಬಹಳ ಸಣ್ಣ ವಯಸ್ಸಿನಿಂದಲೇ ಕಲಿತುಕೊಂಡು ಬರುತ್ತೇವೆ. ಉದಾಹರಣೆಗೆ ಅಪ್ಪ ಕೆಟ್ಟ ಮೂಡ್‌ನಲ್ಲಿದ್ದರೆ ಈ ಬಾರಿಯ ಬರ್ತ್‌ಡೇಗೆ ನಮಗೇನು ಬೇಕೆಂದು ಅಪ್ಪಿತಪ್ಪಿಯೂ ಕೇಳುವುದಿಲ್ಲ. ಅವರು ಮುದ್ದು ಮಾಡುವ ಹೊತ್ತಿನಲ್ಲಿ ನಮ್ಮ ಬೇಡಿಕೆ ಇಟ್ಟು ಸಾಧಿಸುತ್ತೇವೆ. ಅಮ್ಮನನ್ನು ಹೊಗಳಿ ಬೇಕಾದ್ದನ್ನು ಮಾಡಿಸಿಕೊಂಡು ತಿನ್ನುವ ಅಭ್ಯಾಸವೂ ನಮಗೆ ರೂಢಿಗತ. ಹೀಗೆ ಕಣ್ಣು ಸದಾ ಗೂ ಟೈಮಿಂಗ್ ಅವಕಾಶಕ್ಕಾಗಿ ಹುಡುಕಾಡುತ್ತಲೇ ಇರಬೇಕು. ನಿಮ್ಮ ಬಾಸ್ ಬಳಿ ಏನೋ ಕೇಳಬೇಕೆಂದರೆ ಸುಯ್ ಎಂದು ಹೋಗಿ ಕೇಳಿಬಿಡಬೇಡಿ. ವಾರಗಳ ಕಾಲ ಕಾದರೂ ಸರಿ, ಸರಿಯಾದ ಅವಕಾಶ ದೊರೆತಾಗ, ಬಾಸ್ ಒಳ್ಳೆ ಮೂಡ್‌ನಲ್ಲಿದ್ದಾಗ ನಿಮ್ಮ ಕೋರಿಕೆ ಇಡಿ. ಒಳ್ಳೆಯ ಮೂಡ್ನಲ್ಲಿರುವಾಗ ಯಾರಿಗಾದರೂ ಯಾವುದಾದರೂ ವಿಷಯ ಮಂಡಿಸಿದರೆ ಅರ್ಧ ಕೆಲಸ ಆದಂತೆಯೇ. 

3. ನೋಡುವ ವಿಧಾನ ಬದಲಿಸಿಕೊಳ್ಳಿ
ಹಿಂದಿನ ರಾತ್ರಿ ನಿದ್ದೆಯಾಗಿರದಿದ್ದರೂ, ನಿದ್ದೆ ಚೆನ್ನಾಗಿ ಆಯ್ತು ಎಂದು ನಿಮಗೆ ನೀವೇ ಹೇಳಿಕೊಂಡರೆ ಇಡೀ ದಿನ ಫ್ರೆಶ್ ಆಗಿರುವಿರಿ. ಇನ್ನು ಯಾರಿಗಾದರೂ ಯಾಕೆ ಡಲ್ ಆಗಿದ್ದೀರಾ ಎಂದು ನೀವು ಸೇರಿದಂತೆ ನಾಲ್ವರು ಪ್ಲ್ಯಾನ್ ಮಾಡಿ ಕೇಳಿ ನೋಡಿ. ಮೂರ್ನಾಲ್ಕು ಗಂಟೆ ಕಳೆವ ಹೊತ್ತಿಗೆ ಅವರು ನಿಜವಾಗಿಯೂ ಡಲ್ ಆಗಿಬಿಡುತ್ತಾರೆ! ಪಾಸಿಟಿವ್ ಆಗಿ ಕೇಳಬೇಕೆಂದರೆ ಏನು ತುಂಬಾ ಖುಷಿಯಾಗಿದ್ದೀರಾ ಎಂದು ಕೇಳಬಹುದು. ಇಂಥ ಸಿಂಪಲ್ ಸೈಕಲಾಜಿಕಲ್ ಟ್ರಿಕ್‌ಗಳನ್ನು ಕಲಿತುಕೊಂಡರೆ ದಿನವನ್ನು ಸುಲಭವಾಗಿ ನಿಭಾಯಿಸಬಹುದು. ಗ್ಲಾಸೊಂದನ್ನು ಅರ್ಧ ತುಂಬಿದೆ ಎಂದುಕೊಂಡರೆ ಪಾಸಿಟಿವ್, ಅರ್ಧ ಖಾಲಿಯಾಗಿದೆ ಎಂದರೆ ನೆಗೆಟಿವ್. ಯಾವುದೇ ವಿಷಯವನ್ನು ಪಾಸಿಟಿವ್ ಹಾಗೂ ನೆಗೆಟಿವ್ ಆಗಿ ನೋಡುವುದು ಇಷ್ಟೇ ಸುಲಭ. ಹೀಗಾಗಿ, ಎಲ್ಲವನ್ನೂ ನೋಡುವ ವಿಧಾನ ಬದಲಿಸಿಕೊಳ್ಳಿ. ಒಂದೇ ವಿಷಯಕ್ಕೆ ಇಬ್ಬರ ಅಭಿಪ್ರಾಯಗಳು ಬೇರಿದ್ದಾಗ, ನೀವು ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ರೀತಿ, ಧ್ವನಿ, ಆತ್ಮವಿಶ್ವಾಸ, ವಿಷಯ, ಕಾರಣಗಳನ್ನಿಟ್ಟು ಮಾತನಾಡುವ ವಿಧಾನ ಹಾಗೂ ಹೇಳುವುದರಲ್ಲಡಗಿದ ಭಾವ ಎಲ್ಲವೂ ಸರಿಯಾಗಿ ಸ್ಟ್ರೈಕ್ ಆದರೆ, ಎದುರಿನವನ ಅಭಿಪ್ರಾಯವನ್ನು ಕ್ಷಣಾರ್ಧದಲ್ಲಿ ಬದಲಿಸಬಹುದು. ಒಬ್ಬರನ್ನು ಪರಿಸರಕ್ಕೆ ಒಳ್ಳೆಯದೆಂದು ಪೇಪರ್ ಬಳಕೆ ಕಡಿಮೆ ಮಾಡಿ ಎಂದರೆ ಕೇಳದಿರಬಹುದು. ಆದರೆ, ಕಡಿಮೆ ಪೇಪರ್ ಬಳಕೆಯಿಂದ ಕೆಲಸ ಕಡಿಮೆಯಾಗುತ್ತದೆ. ಉಳಿದ ಸಮಯದಲ್ಲಿ ಒಂದು ಕಾಫಿ ಕುಡಿದು ಬರಬಹುದು- ಹೀಗೆ ಅವರ ಲಾಭಕ್ಕೆ ತಕ್ಕಂತೆ ಮಾತನಾಡಿದರೆ ಅವರು ಪೇಪರ್ ಬಳಕೆ ಕಡಿಮೆ ಮಾಡುವ ಸಾಧ್ಯತೆ ಹೆಚ್ಚು. 

ಸಲಿಂಗಿಗಿಳ ಮದುವೆ ಫೋಟೋ ವೈರಲ್

4. ಇನ್ನೊಬ್ಬರ ಬಗ್ಗೆ ನಿಮಗಿರುವ ವಿಷಯಗಳನ್ನು ಬಳಸಿಕೊಳ್ಳಿ
ವ್ಯಕ್ತಿಯ ಸೈಕಾಲಜಿಕಲ್ ಅಗತ್ಯಗಳೇನಿವೆ ನೋಡಿ, ಅವನ್ನು ನೀವು ಹೇಳುವಂತೆ ಅವರು ಕೇಳುವಂತೆ ಮಾಡಲು ಬಳಸಿಕೊಳ್ಳಬಹುದು. ಯಾರು ಯಾವ ವಿಷಯದಲ್ಲಿ ಎಮೋಷನಲಿ ವೀಕ್ ಎಂದು ತಿಳಿದುಕೊಂಡರೆ ಅವರ ಬಳಿ ನಿಮ್ಮ ಕೆಲಸವಾಗಬೇಕೆಂದರೆ ಈ ವೀಕ್‌ನೆಸ್ ಬಳಸಿಕೊಳ್ಳಬಹುದು. 

4 Ways To Psychologically Manipulate Someone

Follow Us:
Download App:
  • android
  • ios