ತ್ವಚೆಯ ಸೌಂದರ್ಯಕ್ಕೇ ಕುತ್ತು ತರೋ ಆಹಾರಗಳಿವು...

ಮನೆಯಲ್ಲಿ ಏನಾದರೂ ತಿನ್ನೋವಾಗ ನಾವು ಮೊದಲಿಗೆ ನೋಡೋದು ಅದು ಟೇಸ್ಟ್ ಇದೆಯಾ ಎಂದು? ನಂತರ ಅದು ಆರೋಗ್ಯಕ್ಕೆ ಉತ್ತಮವಾಗಿದೆಯೇ ಎಂದು ನೋಡುತ್ತೇವೆ. ನಾವು ಮಾಡೋದು ತಪ್ಪಲ್ವಾ? ಇದರಿಂದ ತ್ವಚೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದೂ ನೆನಪಿನಲ್ಲಿಟ್ಟುಕೊಳ್ಳಬೇಕು. 

4 food that effect your skin

ಮನೆಯಲ್ಲಿ ಅಮ್ಮ ಏನಾದರೂ ಅಡುಗೆ ಮಾಡಿ, ಅದು ಘಂ ಎಂದು ಸ್ಮೆಲ್ ಬಂದರೆ ಸಾಕು, ಹಿಂದೆ ಮುಂದೆ ನೋಡದೇ ತಿಂದು ಬಿಡುತ್ತೇವೆ. ಪ್ರತಿದಿನ ನಾವು ಏನೇನೋ ತಿನ್ನುತ್ತೇವೆ. ಇವುಗಳಲ್ಲಿ ನಮ್ಮ ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಆಹಾರವೂ ಇರುತ್ತವೆ. ಇವುಗಳ ಸೇವನೆಯಿಂದ ತ್ವಚೆ ಕಳೆಗುಂದಬಹುದು. ಈಗಾಗಲೇ ಅಂತಹ ಆಹಾರಗಳನ್ನು ಪ್ರತಿದಿನ ಸೇವಿಸಿರಬಹುದು. ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಆ ಆಹಾರ ಸೇವನೆಯಿಂದ ದೂರವಿರಿ.. 

ವೈಟ್ ಬ್ರೆಡ್

ದೋಸೆ, ಇಡ್ಲಿ ಮಾಡ್ಲಿಕ್ಕೆ ಹಿಟ್ಟಿಲ್ಲ, ಚಪಾತಿ ಮಾಡುವಷ್ಟು ಪುರುಸೊತ್ತು ಇಲ್ಲವೆಂದರೆ ತಿನ್ನೋದು ಬ್ರೆಡ್. ಇದನ್ನು ಯಥೇಚ್ಛವಾಗಿ ಸೇವಿಸಿದರೆ ಇನ್ಸುಲಿನ್ ಲೆವೆಲ್ ಹೆಚ್ಚುವುದಲ್ಲದೇ, ತ್ವಚೆಯ ಆಯಿಲ್ ಪ್ರೊಡಕ್ಷನ್ ಹೆಚ್ಚುತ್ತದೆ. ಹೀಗಾದಲ್ಲಿ ಮುಖದ ಫೇರ್‌ನೆಸ್ ಕಡಿಮೆಯಾಗುತ್ತದೆ. 

ಮುದ್ದು ಮುದ್ದಾದ ಮುಖಕ್ಕೆ ಬೇಕು ಓಟ್ಸ್ !

ಕಾಫಿ

ಕಾಫಿಯಲ್ಲಿರುವ ಕೆಫೆನ್ ಅಂಶ ಸ್ಟ್ರೆಸ್ ಹಾರ್ಮೋನ್ ಲೆವೆಲ್ ಹೆಚ್ಚಿಸುತ್ತದೆ. ಇದರಿಂದ ಸ್ಕಿನ್ ಡ್ಯಾಮೇಜ್ ಆಗುವುದರೊಂದಿಗೆ ಸ್ಕಿನ್ ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

ಸ್ಪೈಸಿ ಆಹಾರ

ಹೆಚ್ಚು ಸ್ಪೈಸಿ ಆಹಾರ ಸೇವಿಸಿದರೆ ದೇಹದ ಟೆಂಪರೇಚರ್ ಹೆಚ್ಚುತ್ತದೆ. ಇದರಿಂದ ಬ್ಲಡ್ ವೆಸೆಲ್ಸ್ ಹರಡುವ ಕಾರಣ ಕಾಂಪ್ಲೆಕ್ಷನ್ ಡಾರ್ಕ್ ಆಗುತ್ತದೆ. 

ಈರುಳ್ಳಿ ರಸದಲ್ಲಿ ಅಡಗಿದೆ ಸ್ಕಿನ್ ಮತ್ತು ಕೂದಲಿನ ಆರೋಗ್ಯದ ಗುಟ್ಟು !

ಕರಿದ ಆಹಾರಗಳು

ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಿದರೆ ಶರೀರದಲ್ಲಿ ಫ್ಯಾಟ್ ಹೆಚ್ಚುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಸ್ಕಿನ್‌ಗೆ ಬೇಕಾದಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗೋದಿಲ್ಲ. ಇದರಿಂದಾಗಿ ಸ್ಕಿನ್ ಡಾರ್ಕ್ ಆಗುತ್ತದೆ. 

Latest Videos
Follow Us:
Download App:
  • android
  • ios