ವಿಸ್ಕಿ ಪ್ರಿಯರಿಗೆ ಪ್ರತಿಯೊಂದು ಬಾಟಲಿಯೂ ಒಂದೊಂದು ವಿಭಿನ್ನ ಅನುಭವ ನೀಡುತ್ತದೆ. ಅದರಲ್ಲೂ ಪ್ರಶಸ್ತಿ ಪಡೆದ ಪ್ರೀಮಿಯಂ ಬ್ಲೆಂಡೆಡ್ ಸ್ಕಾಚ್ ವಿಸ್ಕಿಗಳಿಗೆ ವಿಶೇಷ ಬೇಡಿಕೆ ಇರುತ್ತದೆ.
Whisky: ವಿಸ್ಕಿ ಪ್ರಿಯರಿಗೆ ಪ್ರತಿಯೊಂದು ಬಾಟಲಿಯೂ ಒಂದೊಂದು ವಿಭಿನ್ನ ಅನುಭವ ನೀಡುತ್ತದೆ. ಅದರಲ್ಲೂ ಪ್ರಶಸ್ತಿ ಪಡೆದ ಪ್ರೀಮಿಯಂ ಬ್ಲೆಂಡೆಡ್ ಸ್ಕಾಚ್ ವಿಸ್ಕಿಗಳಿಗೆ ವಿಶೇಷ ಬೇಡಿಕೆ ಇರುತ್ತದೆ. 2026ರಲ್ಲಿ ಹಲವು ಬ್ಲೆಂಡೆಡ್ ಸ್ಕಾಚ್ ವಿಸ್ಕಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.
ಇತ್ತೀಚಿನ ವರದಿಯ ಪ್ರಕಾರ, Chivas Regal 25 Year Old, Royal Salute 21 Year Old, Wildmoor Black Mountain 40 Year Old, Ballantine's 21 Year Old ಮತ್ತು White Heather 21 Year Old ವಿಸ್ಕಿಗಳು 2026ರ IWSC ಪ್ರಶಸ್ತಿಗಳಲ್ಲಿ ಗುರುತಿಸಿಕೊಂಡಿವೆ. ಇವುಗಳ ಬೆಲೆ, ಆಲ್ಕೋಹಾಲ್ ಪ್ರಮಾಣ ಮತ್ತು ರುಚಿಯಲ್ಲೂ ಸಾಕಷ್ಟು ವ್ಯತ್ಯಾಸವಿದೆ.
Chivas Regal 25 Year Old
ಪಟ್ಟಿಯಲ್ಲಿರುವ ಪ್ರಮುಖ ಬಾಟಲಿಗಳಲ್ಲಿ Chivas Regal 25 Year Old ಕೂಡ ಒಂದು. ಇದರ ಬೆಲೆ ಭಾರತದಲ್ಲಿ ಅಂದಾಜು ₹37,000 ಎಂದು ವರದಿಯಾಗಿದೆ. 2026ರ IWSCನಲ್ಲಿ ಇದು Spirit Gold ಪ್ರಶಸ್ತಿಯೊಂದಿಗೆ 97 ಅಂಕಗಳನ್ನು ಪಡೆದಿದೆ. ಇದರ ABV ಶೇ. 40ರಷ್ಟಿದೆ. ರುಚಿಯ ವಿಚಾರಕ್ಕೆ ಬಂದರೆ, ಹಣ್ಣುಗಳು, ಒಣದ್ರಾಕ್ಷಿ ಮತ್ತು ಸೇಬಿನ ಸುಗಂಧದ ಜೊತೆಗೆ ಕ್ರೀಮಿ ಪೊರಿಡ್ಜ್, ಓಕ್, ಟಾಫಿ ಮತ್ತು ಸೌಮ್ಯ ಮಸಾಲೆಯ ನೋಟ್ಸ್ ಸಿಗುತ್ತವೆ.
Royal Salute 21 Year Old The Signature Blend
Royal Salute 21 Year Old The Signature Blend ಮತ್ತೊಂದು ಪ್ರೀಮಿಯಂ ಬ್ಲೆಂಡೆಡ್ ಸ್ಕಾಚ್. ಭಾರತದಲ್ಲಿ ಇದರ ಅಂದಾಜು ಬೆಲೆ ₹19,500ರಿಂದ ₹24,350ರವರೆಗೆ ಇದೆ. 2026ರ IWSCನಲ್ಲಿ Spirit Gold ಪ್ರಶಸ್ತಿಯೊಂದಿಗೆ 96 ಅಂಕ ಗಳಿಸಿದೆ. ಇದರ ABV ಶೇ. 40. ಇದರಲ್ಲಿ ಒಣಹಣ್ಣುಗಳು, ಮ್ಯಾಂಡರಿನ್, ಕ್ಯಾರಮೆಲ್, ಕಂದು ಸಕ್ಕರೆಯ ಸಿಹಿ ನೋಟ್ಸ್ ಮತ್ತು ಡಾರ್ಕ್ ಚಾಕೊಲೇಟ್‌ನ ರುಚಿ ಕಾಣಿಸಿಕೊಳ್ಳುತ್ತದೆ.
Wildmoor Black Mountain 40 Year Old
40 ವರ್ಷ ಹಳೆಯ ವಿಸ್ಕಿ ಎಂಬ ಕಾರಣಕ್ಕೆ Wildmoor Black Mountain 40 Year Old ವಿಶೇಷ ಗಮನ ಸೆಳೆಯುತ್ತದೆ. ಇದರ ಭಾರತದಲ್ಲಿನ ಅಂದಾಜು ಬೆಲೆ ಬರೋಬ್ಬರಿ ₹1 ಲಕ್ಷದಿಂದ ₹1.10 ಲಕ್ಷದವರೆಗೆ ಇದೆ. 2026ರ IWSCನಲ್ಲಿ ಇದು Spirit Gold ಪ್ರಶಸ್ತಿಯೊಂದಿಗೆ 96 ಅಂಕಗಳನ್ನು ಪಡೆದಿದೆ. ಇದರ ABV ಶೇ. 46. ಇದರ ರುಚಿಯಲ್ಲಿ ರಮ್‌ನಲ್ಲಿ ನೆನೆಸಿದ ಒಣದ್ರಾಕ್ಷಿ ಮತ್ತು ಡಾರ್ಕ್ ಚಾಕೊಲೇಟ್‌ನ ನೋಟ್ಸ್ ಕಂಡುಬರುತ್ತವೆ. ಕೊನೆಯಲ್ಲಿ ಸಿಹಿಯಾದ ದೀರ್ಘ ಫಿನಿಶ್ ಸಿಗುತ್ತದೆ ಎಂದು ವರದಿ ತಿಳಿಸಿದೆ.
Ballantine's 21 Year Old
Ballantine's 21 Year Old ಪ್ರೀಮಿಯಂ ಬ್ಲೆಂಡೆಡ್ ವಿಸ್ಕಿಗಳ ಪೈಕಿ ಮತ್ತೊಂದು ಹೆಸರು. ಭಾರತದಲ್ಲಿ ಇದರ ಅಂದಾಜು ಬೆಲೆ ₹14,800ರಿಂದ ₹20,000ರವರೆಗೆ ಇದೆ. ಇದರ ABV ಶೇ. 40. ಜೇನು, ಹಣ್ಣಾದ ಸೇಬು ಮತ್ತು ಹೂವಿನ ನೋಟ್ಸ್ ಜೊತೆಗೆ ಸೌಮ್ಯ ಓಕ್ ಮಸಾಲೆ ಹಾಗೂ ಸ್ಮೂತ್ ಮಾಲ್ಟ್ ಫಿನಿಶ್ ಇದರ ಪ್ರಮುಖ ರುಚಿ ವೈಶಿಷ್ಟ್ಯಗಳಾಗಿವೆ.
White Heather 21 Year Old
ಪಟ್ಟಿಯಲ್ಲಿರುವ ಮತ್ತೊಂದು ಗಮನಾರ್ಹ ವಿಸ್ಕಿ White Heather 21 Year Old. ಭಾರತದಲ್ಲಿ ಇದರ ಅಂದಾಜು ಬೆಲೆ ₹14,000ರಿಂದ ₹16,000ರವರೆಗೆ ಇದೆ. 2026ರ IWSCನಲ್ಲಿ ಇದು Spirit Gold ಪ್ರಶಸ್ತಿಯೊಂದಿಗೆ 95 ಅಂಕಗಳನ್ನು ಗಳಿಸಿದೆ. ಇದರ ABV ಶೇ. 48. ಇದರ ರುಚಿಯಲ್ಲಿ ಆರ್ಚರ್ಡ್ ಹಣ್ಣುಗಳು, ಕ್ರೀಮ್ ಕ್ಯಾರಮೆಲ್, ಜಿಂಜರ್‌ಬ್ರೆಡ್, ಶಾರ್ಟ್‌ಬ್ರೆಡ್ ಮತ್ತು ಸೌಮ್ಯ ಮಸಾಲೆಯ ನೋಟ್ಸ್ ಕಾಣಿಸುತ್ತವೆ. ಕೊನೆಯಲ್ಲಿ ಸ್ವಲ್ಪ ಪೀಟ್ ಸ್ಮೋಕ್ ಅನುಭವವೂ ಸಿಗುತ್ತದೆ.
₹14 ಸಾವಿರದಿಂದ ₹1.10 ಲಕ್ಷದವರೆಗೆ ಬೆಲೆ!
ಈ ಐದು ಬ್ಲೆಂಡೆಡ್ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ ದೊಡ್ಡ ವ್ಯತ್ಯಾಸವಿದೆ. Ballantine's 21 Year Old ಮತ್ತು White Heather 21 Year Old ಸುಮಾರು ₹14 ಸಾವಿರದ ಆಸುಪಾಸಿನಿಂದ ಆರಂಭವಾದರೆ, Wildmoor Black Mountain 40 Year Old ಬೆಲೆ ₹1 ಲಕ್ಷಕ್ಕೂ ಹೆಚ್ಚಾಗಿದೆ.
ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿನ ವಿಸ್ಕಿ ಬೆಲೆಗಳು ರಾಜ್ಯದ ತೆರಿಗೆ, ನಗರ, ಮಾರಾಟಗಾರ, ಬಾಟಲಿಯ ಗಾತ್ರ, ಲಭ್ಯತೆ ಮತ್ತು ಆಮದು ಸುಂಕದ ಆಧಾರದ ಮೇಲೆ ಬದಲಾಗಬಹುದು. ಮೇಲಿನವು ವರದಿಯಲ್ಲಿ ನೀಡಿರುವ ಅಂದಾಜು ಚಿಲ್ಲರೆ ಬೆಲೆಗಳು ಮಾತ್ರ.
