Asianet Suvarna News Asianet Suvarna News

ಈ ಮನೆಯೌಷಧಿ ಅಸ್ತಮಾಕ್ಕೂ ಸುಲಭ ಮದ್ದು....

ಚಳಿ ಎಂದ ಕೂಡಲೇ ಶೀತ, ಕೆಮ್ಮು ಎಲ್ಲರನ್ನೂ ಕಾಡುವುದು ಸಹಜ. ಅದರಲ್ಲಿಯೂ ಮಕ್ಕಳನ್ನು ಬಿಡುವುದೇ ಇಲ್ಲ. ಆದರೆ, ಔಷಧಿ ತೆಗೆದುಕೊಂಡರೆ ನಿದ್ರೆ ಮಾಡಬೇಕು, ಸೈಡ್ ಎಫೆಕ್ಟ್ ಕಟ್ಟಿಟ್ಟ ಬುತ್ತಿ. ಮನೆಯಲ್ಲಿಯೇ ಸಿಗೋ ಈ ಔಷಧಿ ಬೆಸ್ಟ್. ಟ್ರೈ ಮಾಡಿ...

16 home remedies for cough and cold
Author
Bengaluru, First Published Dec 12, 2018, 12:08 PM IST

ಈಗಂತೂ ಚಳಿಗಾಲ. ಶೀತ, ಕಫ ಕಾಡೋದು ಕಾಮನ್. ಮಕ್ಕಳನ್ನಂತೂ ಬಿಡುವುದೇ ಇಲ್ಲ. ಸುಖಾಸುಮ್ಮನೆ ವಿಪರೀತ ಮಾತ್ರೆ ತೆಗೆದುಕೊಂಡು, ಸೈಡ್ ಎಫೆಕ್ಟ್ಸ್ ಹೆಚ್ಚಿಸಿ ಕೊಳ್ಳೋ ಬದಲು ಈ ಮನೆ ಮದ್ದು ಟ್ರೈ ಮಾಡಿ....

- ಹಸಿ ಶುಂಠಿ ರಸ ಮತ್ತು ವೀಳ್ಯದೆಲೆ ರಸದೊಂದಿಗೆ ‌ಜೇನುತುಪ್ಪ ಬೆರೆಸಿ ಸೇವಿಸಬೇಕು. 
- ದೊಡ್ಡ ಪತ್ರೆ, ತುಳಸಿ ಎಲೆ ಮತ್ತು ವೀಳ್ಯದೆಲೆ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಬಹದು.
- ಬೆಳ್ಳುಳ್ಳಿ ಅರೆದು ರಸ ಸೇವಿಸುವುದರಿಂದ ಕೆಮ್ಮು ಮತ್ತು ನೆಗಡಿ ನಿವಾರಣೆಯಾಗುತ್ತದೆ. 
-ತುಳಸಿ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮೂರು ದಿನಗಳ ಕಾಲ ಮಕ್ಕಳಿಗೆ ಕುಡಿಸಿ. 

16 home remedies for cough and cold
- ಜೇನುತುಪ್ಪವನ್ನು ನಿಯಮಿತವಾಗಿ ಪ್ರತಿನಿತ್ಯವೂ ಸೇವಿಸುವುದರಿಂದಲೂ ಕಫ ನಿವಾರಣೆಯಾಗುತ್ತದೆ.
- ಸಕ್ಕರೆ, ಜೇನುತುಪ್ಪದೊಂದಿಗೆ ಬಾಳೆಹಣ್ಣು ಸೇವಿಸುವುದರಿಂದ ಎದೆನೋವು ಮತ್ತು ಕಫ ಕಡಿಮೆಯಾಗುತ್ತದೆ. 
- ದಿನಕ್ಕೊಂದು ಸೇಬನ್ನು 44 ದಿನಗಳು ಸೇವಿಸಿದರೆ ಕಫಕ್ಕೆ ಬೈ ಹೇಳುತ್ತೆ. 

ಅಡುಗೆ ಮಾಡುವಾಗಲೇ ಫ್ಯಾಟ್ ಕರಗಿಸಲು ಟಿಪ್ಸ್

- ಬಿಸಿ ಹಸುವಿನ ಹಾಲಿಗೆ ಚಿಟಿಕೆ ಕಾಳುಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದಲೂ ನೆಗಡಿ ವಾಸಿಯಾಗುತ್ತದೆ.
- ಬಿಸಿ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನ ಪುಡಿ ಮತ್ತು ಎರಡು ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕುದಿಸಬೇಕು. ಇದನ್ನು ಮೂರು ದಿನ ಊಟದ ನಂತರ ಸೇವಿಸಿದರೆ ತಂಡಿಗೆ ಒಳ್ಳೆಯ ಔಷಧಿ. 
- ಮೆಣಸಿನ ಕಾಳನ್ನು ನುಣ್ಣಗೆ ಪುಡಿ ಮಾಡಿ, ಓಮಿನಕಾಳು ಹಾಗೂ ಉಪ್ಪಿನೊಂದಿಗೆ ಬಾಯಲ್ಲಿಟ್ಟುಕೊಂಡು ರಸ ನುಂಗಿದರೆ, ಮ್ಮಿಲ್ಲವಾಗುತ್ತದೆ. 
- ಮೆಣಸನ್ನು  ಹುರಿದು ನುಣ್ಣಗೆ ಪುಡಿ ಮಾಡಿ, ಕಾಲು ಚಮಚ ಪುಡಿಯನ್ನು ಜೇನು ತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.
- ಒಂದು ಬಟ್ಟಲು ನೀರಿಗೆ ಅರ್ಧ ಟೀ ಚಮಚ ದಾಲ್ಚಿನಿ ಚೂರ್ಣ ಮತ್ತು ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಕುದಿಸಬೇಕು. ಇದನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸಿದರೆ ಶೀತ ನಿವಾರಣೆಯಾಗುತ್ತದೆ. 
- ಸ್ನಾನದ ನೀರಿಗೆ ಒಂದೆರಡು ಹನಿ ನೀಲಗಿರಿ ಎಣ್ಣೆ ಬೆರೆಸಿ, ಸ್ನಾನ ಮಾಡಿದರೆ ತಂಡಿ ಶಮನವಾಗುತ್ತದೆ. 

ಮುಟ್ಟಿನ ಹೊಟ್ಟೆ ನೋವಿಗೆ ಶುಂಠಿ ಬೆಸ್ಟ್ ಮದ್ದು

- ನಿತ್ಯ ಕುಡಿಯುವ ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ‌ಕುಡಿಯಿರಿ. 
- ಆಹಾರದಲ್ಲಿ ಹೆಚ್ಚು ಶುಂಠಿ ಹಾಗೂ ಮೆಣಸು ಬಳಸಿ.
- ನೀರಿನೊಂದಿಗೆ ಮೆಂತ್ಯೆಕಾಳು ಬೇಯಿಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಶುಂಠಿ ರಸ ಸೇರಿಸಿ ದಿನಕ್ಕೊಮ್ಮೆ ಸೇವಿಸಿದರೂ ಅಸ್ತಮಾವೂ ನಿಯಂತ್ರಣಕ್ಕೆ ಬರುತ್ತದೆ. 

ಸಣ್ಣ ಪುಟ್ಟ ರೋಗಗಳಿಗೆ ಮನೆ ಮದ್ದು ಮಾಡಿ
 

Follow Us:
Download App:
  • android
  • ios