ತಿಂದ ಮೇಲಲ್ಲ, ಅಡುಗೆ ಮಾಡೋವಾಗ್ಲೇ ಫ್ಯಾಟ್ ಕರಗಿಸಿ..! ಇಲ್ಲಿವೆ ಉಪಯುಕ್ತ ಟಿಪ್ಸ್
ಹಳೆಯ ರೆಸಿಪಿಗಳಲ್ಲೇ ಕೆಲವೊಂದು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡು ಫ್ಯಾಟ್ ಅಂಶ ಇಳಿಸಿ ಅಡುಗೆ ಮಾಡಬಹುದು. ಹೇಗೆ..? ಇಲ್ಲಿ ನೋಡಿ
ನೀವು ತೂಕ ಇಳಿಸಿಕೊಳ್ಳೋಕೆ ಕೊಬ್ಬಿನಂಶ ಕಡಿಮೆ ಇರೋ ಆಹಾರ ಸೇವಿಸ್ತಾ ಇದ್ದೀರಾ..? ಈ ಬಗ್ಗೆ ಡಯೆಟ್ ಮಾಡ್ತಿದ್ದೀರಾ..? ಹಾಗಾದ್ರೆ ನೀವು ಆಹಾರ ಮಾತ್ರವಲ್ಲ, ಅಡುಗೆ ಮಾಡೋ ವಿಧಾನದ ಬಗ್ಗೆಯೂ ಗಮನ ಹರಿಸಬೇಕಾದ್ದು ಅಗತ್ಯ.
ನಾವು ಆಹಾರ ಮಾಡುವ ವಿಧಾನ ಫ್ಯಾಟ್ ಅಂಶವನ್ನೂ ನಿರ್ಧರಿಸುತ್ತದೆ. ಆಹಾರ ತಯಾರಿಸುವ ವಿಧಾನ ಬದಲಾಯಿಸಿದಾಗ ಅದರ ರುಚಿ, ನಿಮ್ಮ ಟೇಸ್ಟ್ ಬದಲಾಯಿಸಬೇಕೆಂದಿಲ್ಲ.
ಹಳೆಯ ರೆಸಿಪಿಗಳಲ್ಲೇ ಕೆಲವೊಂದು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡು ಫ್ಯಾಟ್ ಅಂಶ ಇಳಿಸಿ ಅಡುಗೆ ಮಾಡಬಹುದು. ಆದಷ್ಟು ನಿಮ್ಮ ಆಹಾರದಲ್ಲಿ ಎಣ್ಣೆಯ ಬಳಕೆ ಕಡಿಮೆ ಮಾಡಿಕೊಂಡು ಮಾಡಬಹುದಾದ ಸರಳ ಅಡುಗೆಯತ್ತ ನೋಡಿ.
ಮಾಂಸವನ್ನು ನೆನೆಸುವುದು: ಮಾಂಸವನ್ನು ನೆನೆಸುವುದರಿಂದ ಮಸಲ್ಸ್ ಬ್ರೇಕ್ ಆಗಿ ತುಂಬಾ ಎಳೆಯಾಗಿ ಸಿಗುತ್ತದೆ. ಇದರಿಂದ ಪ್ರತಿ ಬೈಟ್‌ಗೂ ರುಚಿಯೂ ಸಿಗುತ್ತದೆ.
ಈರೀತಿ ಮಾಡುವುದರಿಂದ ಮಾಂಸಕ್ಕೆ ಎಣ್ಣೆ ಸೇರಿಸಬೇಕಿಲ್ಲ. ಎಣ್ಣೆ ಇಲ್ಲದೆ ಮಾಂಸ ಸಾಫ್ಟ್ ಆಗಿ, ಜ್ಯೂಸಿಯಾಗಿರುತ್ತದೆ
ನೀವು ಮಾಂಸವನ್ನು ಗ್ರಿಲ್ ಅಥವಾ ಬೇಯಿಸೋದಾದ್ರೂ ಈ ಮೆಥಡ್ ಉತ್ತಮ.
ಬ್ರಾಯಿಲಿಂಗ್: ಫಿಶ್ ಫ್ರೈ ಮಾಡುವ ಬದಲು ಬ್ರಾಯಿಲ್ ಮಾಡಿ. ನೇರವಾಗಿ ಬೆಂಕಿಗೆ ತಾಗಿಸುವ ಮೂಲಕ ಅಥವಾ ಗ್ರಿಲ್ ಮಾಡೋದನ್ನು ಬ್ರಾಯಿಲಿಂಗ್ ಎನ್ನುತ್ತಾರೆ.
ಮೀನಿನಲ್ಲಿ ಫ್ಯಾಟ್ ಹೆಚ್ಚಿರುತ್ತದೆ. ಆದರೆ ಈ ಫ್ಯಾಟ್ ಆರೋಗ್ಯಕ್ಕೆ ಉತ್ತಮ. ಈ ಫ್ಯಾಟ್‌ಗಳು ನಮ್ಮ ದೇಹದಲ್ಲಿ ತಯಾರಾಗದ ಕಾರಣ ಇದನ್ನು ಮೀನಿನಿಂದಲೇ ಪಡೆಯಬೇಕು. ಆದರೆ ಮೀನನ್ನು ಫ್ರೈ ಮಾಡಬೇಡಿ.
ಮೀನನ್ನು ನೆನೆಸಿ ಸಾಫ್ಟ್ ಆಗಿಸಿ. ನಂತರ ಕುದಿಯುವ ಸಾರಿಗೋ, ಪಾಕಕ್ಕೋ ಹಾಕಿ. ಇದು ಬೇಗನೆ ಬೇಯುತ್ತದೆ. ಈ ರೀತಿ ಮಾಡುವುದರಿಂದ ಅನಗತ್ಯ ಫ್ಯಾಟ್ ನಮ್ಮ ದೇಹ ಸೇರದು.
ಕದಡುವುದು: ಇದು ತರಕಾರಿ ಮತ್ತು ಮಾಂಸಾಹಾರ ತಟ್ಟನೆ ಬೇಯಿಸಲು ಸೂಕ್ತ ವಿಧಾನ. ಇದಕ್ಕಾಗಿ ಕನೋಲಾ ಅಥವಾ ಅಲಿವ್ ಆಯಿಲ್ ಬಳಸಬಹುದು. ಒಂದು ಟೇಬಲ್ ಸ್ಪೂನ್ ಆಯಿಲ್ ಅಷ್ಟೇ ಸಾಕು.
ತೆಳ್ಳನೆ ಉದ್ದಕ್ಕೆ ಮತ್ತು ಕ್ಯೂಬ್ ಆಕಾರದಲ್ಲಿ ಕಟ್ ಮಾಡಿದರೆ ಬಹಳ ಬೇಗನೆ ಬೇಯುತ್ತದೆ. ಎಣ್ಣೆ ಫ್ಯಾಟ್ ಬೇಗನೆ ಹೆಚ್ಚಿಸುತ್ತದೆ. ಬಹಳ ಮಿತವಾಗಿ ಬಳಸಿ.
ಸ್ಟೀಮಿಂಗ್: ತರಕಾರಿ ಹಾಗೂ ಅಕ್ಕಿ ಸ್ಟೀಮಿಂಗ್‌ನಲ್ಲಿ ಸುಲಭವಾಗಿ ಬೇಯುತ್ತದೆ. ಇದಕ್ಕೆ ರೈಸ್ ಕುಕ್ಕರ್ ಬಳಸಬಹುದು. ಬಾಂಬೂ ಸ್ಟೀಮರ್ ಕೂಡಾ ಬಳಸಬಹುದು
ಸ್ಟೀಮಿಂಗ್ ಮೂಲಕ ಆಹಾರ ಪದಾರ್ಥದಲ್ಲಿರುವ ಪ್ರೊಟೀನ್ ನಷ್ಟವಾಗುವುದಿಲ್ಲ. ಇದರಿಂದ ತರಕಾರಿಗಳ ನೈಸರ್ಗಿಕ ರುಚಿ ಸಿಗುತ್ತದೆ.
ಸ್ಟಿರ್ ಫ್ರೈಯಿಂಗ್: ಸ್ಟಿರ್ ಮಾಡುತ್ತಾ ಮಾಂಸವನ್ನು ಸುಲಭವಾಗಿ ಬೇಯಿಸಬಹುದು. ಇದಕ್ಕೆ ಅತ್ಯಂತ ಕಡಿಮೆ ಎಣ್ಣೆ ಸಾಕು.
ಎಣ್ಣೆ ಬಿಸಿ ಮಾಡಿ ಇಡೀ ಪಾತ್ರೆಗೆ ತಾಗುವಂತೆ ಮಾಡಿ. ಹಾಗಾಗಿ ಎಲ್ಲ ಕಡೆ ಎಣ್ಣೆಯೂ ತಾಗುತ್ತದೆ, ಕಡಿಮೆ ಎಣ್ಣೆಯೂ ಸಾಕು.
ಗ್ರಿಲ್ಲಿಂಗ್: ಇದು ಆಹಾರಕ್ಕೆ ವಿಶೇಷ ರುಚಿ ಕೊಡುತ್ತದೆ. ಇದಕ್ಕೆ ಎಣ್ಣೆ ಸೇರಿಸಬೇಕಾದ ಅಗತ್ಯವಿಲ್ಲ. ಮತ್ತು ರುಚಿಯೂ ಕೆಡುವುದಿಲ್ಲ.
ತರಕಾರಿ ಅಥವಾ ಮಾಂಸವನ್ನು ಗ್ರಿಲ್ ಮಾಡಿ ಸೇವಿಸುವ ಬಹಳಷ್ಟು ರೆಸಿಪಿಗಳಿವೆ. ಗ್ರಿಲ್ ಹಚ್ಚಿ ತರಕಾರಿ/ಮಾಂಸ ಬೇಯಿಸಿ ಆರೋಗ್ಯಕರ ಮೀಲ್ ತಯಾರಿಸಿ.