ಬದಲಾದ ಜೀವನ ಶೈಲಿ, ತಿನ್ನೋ ಆಹಾರ ಹೀಗೆ ಹತ್ತು ಹಲವು ಕಾರಣಗಳಿಂದ ತಲೆ ನೋವು ಮನುಷ್ಯನನ್ನು ಬೆಂಬಡದೇ ಕಾಡುತ್ತದೆ. ಅದೂ ಇದು ಎಂಬ ಮಾತ್ರೆ ತೆಗೆದುಕೊಂಡರೆ ಕ್ಷಣ ಮಾತ್ರಕ್ಕೆ ಮಾತ್ರ ರೀಲೀಫ್ ಆದಂತಾಗುತ್ತದೆ. ಆದರೆ, ಮತ್ತೆ ಕಾಡುತ್ತೆ ನೋವು. ಮಾತ್ರೆ ತೆಗೆದುಕೊಳ್ಳುವ ಮುನ್ನು ಈ ಸಿಂಪಲ್ ಮನೆ ಮದ್ದನ್ನು ಟ್ರೈ ಮಾಡಿ..

ಬೇರೆ ಬೇರೆ ಮನೆ ಮದ್ದುಗಳಿಗೆ ಇಲ್ಲಿ ಕ್ಲಿಕ್ ಮಾಡಿ

- ಸೇಬು ಹಣ್ಣಿಗೆ ತುಸು ಉಪ್ಪು ಹಾಕಿ ಸೇವಿಸಿದರೆ, ತಲೆನೋವು ನಿವಾರಣೆಯಾಗುತ್ತದೆ.
- ಮೂಗಿಗೆ 5-6 ಹನಿ ಬಾದಾಮಿ ಎಣ್ಣೆ ಬಿಟ್ಟು ಕೊಂಡರೂ, ತಲೆನೋವಿಗೆ ಹೇಳಬಹುದು ಗುಡ್ ಬೈ. 
- ಪ್ರತಿದಿನ ನೆಲ್ಲಿಕಾಯಿ ಶರಬತ್ತು ಕುಡಿಯುವುದರಿಂದಲೂ ಪಿತ್ತ ಶಮನವಾಗಿ, ತಲೆ ತಿರುಗುವುದು, ತಲೆ ನೋವು ಮಾಯವಾಗುತ್ತದೆ. 
- ತಲೆ ನೋವಿಗೆ ಮಾತ್ರವಲ್ಲ 10-15 ಒಣ ದ್ರಾಕ್ಷಿ ತಿಂದು, ಹಾಲು ಕುಡಿದರೆ ಲೈಂಗಿಕ ಶಕ್ತಿಯನ್ನೂ ವೃದ್ಧಿಸುತ್ತದೆ. 
- ನಿಂಬೆಹಣ್ಣಿನ ಸಿಪ್ಪೆ ಪೇಸ್ಟನ್ನು ಹಣೆಗೆ ಹಚ್ಚಿದರೆ, ತಲೆನೋವಿಗೆ ಬೆಸ್ಟ್. 
- ತೆಂಗಿನ ಎಣ್ಣೆಯೊಂದಿಗೆ ಇಂಗು ಮಿಕ್ಸ್ ಮಾಡಿ ಹಚ್ಚಿದರೂ ನಡೆಯುತ್ತೆ. 
- ಕೊತ್ತಂಬರಿ ಹಾಗೂ ಬೆಲ್ಲದ ಪುಡಿಯನ್ನು ನೀರಿಗೆ ಬೆರಸಿ, ಸೇವಿಸಿದರೂ ಒಳ್ಳೆಯದು. 
-  ದಾಲ್ಚಿನಿ ಪುಡಿ ಪೇಸ್ಟ್ ಅರೆ ತಲೆ ನೋವಿಗೆ ರಾಮಬಾಣ. 
- ಹಣೆಗೆ ನೀಲಗಿರಿ ಎಣ್ಣೆಯ ಮಸಾಜ್ ಮಾಡಿದರೆ ತಲೆನೋವು ನಿವಾರಣೆಯಾಗುತ್ತದೆ. 
- ಹಳೆ ಹುಣಸೆಹಣ್ಣಿನ ರಸದೊಂದಿಗೆ ಬೆಲ್ಲ ಸೇರಿಸಿ, ಖಾಲಿ ಹೊಟ್ಟೆಯಲ್ಲಿ ಕುಡಿದರೆ ಪಿತ್ತಕ್ಕೆ ಒಳ್ಳೆ ಮದ್ದು. ಪಿತ್ತದಿಂದ ಕಾಡೋ ತಲೆನೋವಿಗೆ ಇದು ಹೇಳಿ ಮಾಡಿಸಿದ ಔಷಧಿ. 
-ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ ತಿಳಿಯನ್ನು ದಿನಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ತದಿಂದ ಬರುವ ನೋವು ನಿವಾರಣೆಯಾಗುತ್ತದೆ.
- ಕೋಕಂ, ಮುರುಗ ಹಣ್ಣಿನ ಜ್ಯೂಸ್ ಅಥವಾ ಸಾರು ಸಹ ಪಿತ್ತಕ್ಕೆ ದಿವ್ಯೌಷಧ. 

ಸಿಗರೇಟ್ ಬಿಡಲು ಇಲ್ಲಿದೆ ಮನೆ ಮದ್ದು