ಎಲ್ಲ ಕಾಯಿಲೆಗೂ ಅಜ್ಜಿ ಹೇಳಿದ ಮದ್ದನ್ನೊಮ್ಮೆ ಟ್ರೈ ಮಾಡಿ...

ಏನಾದರೂ ಅರೋಗ್ಯ ಸಮಸ್ಯೆ ಬಂದ ಕೂಡಲೇ ವೈದ್ಯರ ಬಳಿ ಓಡಿ ಹೋಗುತ್ತೀರಿ. ಆದರೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿಯೇ ಮದ್ದು ಇದೆ ಅನ್ನೋದನ್ನು ಮರೀಬೇಡಿ. ಅಂತಹ ಹಿತ್ತಲ ಮದ್ದಿನ ಬಗ್ಗೆ ಒಂದಿಷ್ಟು ಮಾಹಿತಿ... 
 

11 Natural home remedies for better health

ಹಿಂದೊಂದು ಕಾಲವಿತ್ತು... ಮನೆಯಲ್ಲಿ ಯಾರಿಗೆ ಏನೇ ಸಮಸ್ಯೆ ಬರಲಿ, ಹಿತ್ತಲಲ್ಲಿ ಇರೋ ಮದ್ದಿನ ಗಿಡಗಳನ್ನು ಬಳಸಿ ಔಷಧಿಯಾಗಿ ಬಳಸುತ್ತಿದ್ದರು. ಇದರಿಂದ ರೋಗಗಳೂ ಬೇಗನೆ ಗುಣವಾಗುತ್ತಿದ್ದವು. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ, ಏನೇ ಸಮಸ್ಯೆ ಬಂದರೂ ವೈದ್ಯರ ಬಳಿ ಹೋಗ್ತಾರೆ. ನೀವು ಹಾಗೆ ಮಾಡೋ ಬದಲು ಸಣ್ಣ ಪುಟ್ಟ ಸಮಸ್ಯೆಗಳನ್ನು ಮನೆಯಲ್ಲಿಯೇ ಹೀಗೇ ನಿವಾರಿಸಿ. 

ಋತುಸ್ರಾವದ ನೋವು 

ನಿಂಬೆ ರಸವನ್ನು ಕೋಲ್ಡ್‌ ನೀರಿನಲ್ಲಿ ಬೆರೆಸಿ ಪ್ರತಿ ದಿನ ಸೇವಿಸಿ. ಇದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಇಲ್ಲವೇ ಮೊಸರಿಗೆ ಇಂಗು ಬೆರೆಸಿ ಸೇವಿಸಿದರೂ ನೋವು ಶಮನವಾಗುತ್ತದೆ.

ಅನುಭವಿಸುವವರಿಗೇ ಗೊತ್ತು ವೈರಲ್ ಫೀವರ್ ಸಂಕಟ, ಅದಕ್ಕೂ ಇದೆ ಮದ್ದು!

ಹೈ ಬಿಪಿ 

ಪ್ರತಿ ದಿನವೂ ನೆಲ್ಲಿಕಾಯಿ ಪುಡಿಯನ್ನು ಹಾಲಿಗೆ ಹಾಕಿ ಕುಡಿಯಿರಿ. ಇದರಿಂದ ಅಧಿಕ ರಕ್ತದ ಒತ್ತಡ ಕಡಿಮೆಯಾಗುತ್ತದೆ.  

ತಲೆನೋವು 

ಸಿಪ್ಪೆ ಸುಲಿದ ಆ್ಯಪಲ್‌ ಕತ್ತರಿಸಿ ಅದಕ್ಕೆ ಉಪ್ಪು ಬೆರೆಸಿ ಬೆಳಗ್ಗೆ ಎದ್ದ ಕೂಡಲೇ ಸೇವಿಸಿ. 

ಕೆಮ್ಮು 

ವಿಪರೀತ ಕೆಮ್ಮಿದ್ದರೆ ನೀರಿಗೆ ಬೆಳ್ಳುಳ್ಳಿ ಗುದ್ದಿ ಹಾಕಿ ಅದನ್ನು ಚೆನ್ನಾಗಿ ಕುದಿಸಿ. ಸ್ವಲ್ಪ ಸ್ವಲ್ಪವಾಗಿ ಬಿಸಿ ನೀರು ಸೇವಿಸಿ. ಕೆಮ್ಮು ಮಾಯವಾಗುತ್ತದೆ. 

ಒಡೆದ ಪಾದ ಮುಖದ ಅಂದಕ್ಕೆ ದೃಷ್ಟಿ ಬೊಟ್ಟು...!

ಉಸಿರಾಟದಲ್ಲಿ ದುರ್ಗಂಧ 

ಈ ಸಮಸ್ಯೆ ಕಾಡಿದರೆ ಆಯಿಲ್ ಪುಲ್ಲಿಂಗ್ ಮಾಡಿ. ಇದರಿಂದ ಬಾಯಿ ಸಮಸ್ಯೆಯೂ ನಿವಾರಣೆಯಾಗುತ್ತದೆ. 

ಗ್ಯಾಸ್ಟ್ರಿಕ್‌ 

ಬೇಕಿಂಗ್ ಸೋಡಾ ಮತ್ತು ಚಿಟಿಕೆ ಉಪ್ಪು ಬೆರೆಸಿ ನೀರು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. 

ಗಾಯ

ಬಿದ್ದು ಗಾಯವಾದರೆ ಕೂಡಲೇ ಅರಿಶಿನ ಪುಡಿ ಹಾಕಿ. ಇದರಿಂದ ರಕ್ತ ಹರಿಯುವುದು ನಿಲ್ಲುತ್ತದೆ. ಅಲ್ಲದೇ ಗಾಯವೂ ಬೇಗ ನಿವಾರಣೆಯಾಗುತ್ತದೆ. 

ತಲೆಹೊಟ್ಟು 

ತೆಂಗಿನ ಎಣ್ಣೆ ಜೊತೆ ಕರ್ಪೂರ ಮಿಕ್ಸ್‌ ಮಾಡಿ ಬಿಸಿಮಾಡಿ ಅದನ್ನು ಪ್ರತಿದಿನ ಮಲಗುವ ಮುನ್ನ ತಲೆಗೆ ಹಚ್ಚಿ.

ಸೆನ್ಸಿಟಿವ್ ಹಲ್ಲಿನ ಸಮಸ್ಯೆಯೇ? ಇಲ್ಲಿದೆ ಮನೆ ಮದ್ದು

ಹಲ್ಲು ನೋವು 

ಈ ಸಮಸ್ಯೆ ಕಾಡಿದರೆ ಲವಂಗವನ್ನು ತೆಂಗಿನ ಎಣ್ಣೆ ಜೊತೆ ಬಿಸಿ ಮಾಡಿ, ಅದನ್ನು ಹತ್ತಿಯಲ್ಲಿ ಅದ್ದಿ ನೋವಾಗಿರುವ ಹಲ್ಲಿನ ಮೇಲಿಡಿ. ಇದರಿಂದ ನೋವು ನಿವಾರಣೆಯಾಗುತ್ತದೆ. 

ಗಂಟಲು ಕೆರೆತ 

ನೀರಿನಲ್ಲಿ 4-5 ತುಳಸಿ ಎಲೆ ಹಾಕಿ ಕುದಿಸಿ. ಅದು ಚೆನ್ನಾಗಿ ಬೆಂದು ನೀರು ಸ್ವಲ್ಪವಾದಾಗ ಅದನ್ನು ಸೇವಿಸಿ. 

ಬಾಯಿ ಹುಣ್ಣು 

ಬಾಳೆಹಣ್ಣನ್ನು ಜೇನು ತುಪ್ಪ ಬೆರೆಸಿ ಸೇವಿಸಿ. ಇದನ್ನು ಪ್ರತಿ ನಿತ್ಯ ಸೇವಿಸಿದರೆ ಅಥವಾ ಅದರ ಪೇಸ್ಟ್‌ ಹಚ್ಚಿದರೆ ಬಾಯಿ ಹುಣ್ಣು ಮರೆಯಾಗುತ್ತದೆ.
 

Latest Videos
Follow Us:
Download App:
  • android
  • ios