ವೈರಲ್ ಫೀವರ್ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುತ್ತದೆ. ಇದರಿಂದ ಜ್ವರ ಮೊದಲಾದ ಸಮಸ್ಯೆಯೂ ಕಾಣಿಸಿಕೊಳ್ಳುತ್ತವೆ. ಇದನ್ನು  ಆರಂಭದ ಹಂತದಲ್ಲೇ ತಿಳಿದುಕೊಂಡರೆ ಬೇಗ ಗುಣಪಡಿಸಬಹುದು. ಇದರ ಲಕ್ಷಣವೇನು? ಇದರಿಂದ ಹೇಗೆ ಬಚಾವಾಗೋದು? 

ವಿಪರೀತ ಬಿಸಿ, ನಡುಕ, ಸುಸ್ತು, ಗಂಟಲಲ್ಲಿ ಕೆರೆತ, ಕಣ್ಣು ಕೆಂಪಾಗುವುದು, ಕೆಮ್ಮು, ಗಂಟುಗಳ ನೋವು, ತ್ವಚೆಯ ಮೇಲೆ ಗುಳ್ಳೆಗಳು, ಸುಸ್ತು, ಮಾಂಸಖಂಡಗಳ ನೋವು, ನೆಗಡಿ, ತಲೆನೋವು ಇವೆಲ್ಲಾ ಕಾಣಿಸಿಕೊಂಡರೆ ಇದು ವೈರಲ್‌ ಫೀವರ್‌ ಲಕ್ಷಣ ಎಂಬುದು ನೀವು ತಿಳಿದುಕೊಳ್ಳಬೇಕು. ಆದರೆ ಈ ರೋಗ ಬಂದಾಗ ಭಯ ಪಡುವ ಅವಶ್ಯಕತೆ ಇಲ್ಲ. ಬದಲಾಗಿ ಡಾಕ್ಟರ್‌ ಬಳಿ ಹೋಗಬೇಕಾಗಿಯೂ ಇಲ್ಲ. ಮನೆಯಲ್ಲೇ ಸಿಗುವ ಔಷಧ ಸೇವಿಸಿ ಗುಣ ಮುಖರಾಗಬಹುದು.

ಬೇಕೆಂದಷ್ಟು ತಿಂದೂ ತೂಕ ಇಳಿಸುವ ಆಸೆಯೇ? ಹಾಗಿದ್ರೆ ಈ ಡಯಟ್ ಮಾಡಿ

ವೈರಲ್‌ ಫೀವರ್ ಗೆ ಮನೆ ಔಷಧಿಗಳಿವು.....

- ಬಿಸಿ ಮಾಡಿ ಆರಿಸಿದ ನೀರನ್ನು ಸರಿಯಾಗಿ ಸೇವಿಸುತ್ತಿರಿ.

- ತುಳಸಿ ಎಲೆಗಳನ್ನು ಜಜ್ಜಿ ನೀರಿಗೆ ಹಾಕಿ ಕುದಿ ಬರಿಸಿ ಬೆಳಗಿನ ಜಾವ ಸೇವಿಸಿ.

- ಆಹಾರದಲ್ಲಿ ಸ್ವಚ್ಛತೆ ಕಾಪಾಡಬೇಕು ಮತ್ತು ಬಿಸಿಯಾದ ತಾಜಾ ಆಹಾರ ಸೇವಿಸಬೇಕು.

ಶ್ವಾಸಕೋಶದಿಂದ ನಿಕೋಟಿನ್ ಹೊರಹಾಕಲು ಮನೆಯಲ್ಲೇ ಇದೆ ಮದ್ದು

- ಸಿಟ್ರಿಕ್‌ ಹಣ್ಣುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಆದುದರಿಂದ ಕಿತ್ತಳೆ, ನಿಂಬೆ ಹಣ್ಣಿನ ರಸ ಸೇವನೆ ಉತ್ತಮ.

- ಕೊತ್ತಂಬರಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಇರುತ್ತವೆ. ಇವು ಇಮ್ಯುನಿಟಿ ಸಿಸ್ಟಮ್ ಸರಿಯಾಗಿಸುತ್ತದೆ. ಇದಕ್ಕಾಗಿ ಒಂದು ಗ್ಲಾಸ್ ನೀರಿಗೆ ಕೊತ್ತಂಬರಿ ಹಾಕಿ ಕುದಿಸಿ. ಸೋಸಿ, ಅದಕ್ಕಷ್ಟೇ ಬೇಕಾದಷ್ಟು ಸಕ್ಕರೆ ಮತ್ತು ಹಾಲು ಸೇರಿಸಿ ಸೇವಿಸಿ. 

- ಮನೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

- ಶುಂಠಿ ಕಷಾಯವೂ ಅತ್ಯುತ್ತಮ. ಇದರಿಂದ ಗಂಟಲು ಕೆರೆತ, ಶೀತ ನಿವಾರಣೆಯಾಗುತ್ತದೆ.

- ಬೇಯಿಸಿದ ತರಕಾರಿಗಳನ್ನು ಸೇವಿಸಿ. ಕ್ಯಾರೆಟ್‌, ಕ್ಯಾಬೆಜ್‌, ಕಾಲಿಫ್ಲವರ್‌.... ಸೇವಿಸಿ

- ಗಂಜಿ ಸೇವಿಸಿ. ಜ್ವರ ಬಂದ ಸಮಯದಲ್ಲಿ ಬಾಯಿ ರುಚಿ ಇರುವುದಿಲ್ಲ. ಆದುದರಿಂದ ಗಂಜಿ ಉತ್ತಮ ಆಹಾರವಾಗಿದೆ.

ಮೈಗ್ರೇನ್‌ಗೆ ರಿಲೀಫ್ ನೀಡುತ್ತೆ ಕಾಫಿ!

- ಒಣ ದ್ರಾಕ್ಷಿಯಲ್ಲಿ ಆಂಟಿ ಆಕ್ಸಿಡೆಂಟ್‌ ಹೆಚ್ಚಾಗಿರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

- ಬಿಸಿ ಬಿಸಿ ತರಕಾರಿ ಸೂಪ್‌ ಸೇವಿಸಿ.