1. ನಿರಂತರ ಆಯಾಸ:

ಲುಕೇಮಿಯಾ, ಕರುಳು ಅಥವಾ ಹೊಟ್ಟೆಯ ಕ್ಯಾನ್ಸರ್ ಗೀಡಾದವರಿಗೆ ಹೆಚ್ಚಾಗಿ ನಿರಂತರ ಆಯಾಸ ಭಾದಿಡುತ್ತದೆ. ಇದು ಸಾಮಾನ್ಯ ಆಯಾಸಕ್ಕಿಂತಲೂ ಭಿನ್ನವಾಗಿರುತ್ತದೆ. ಸರಿಯಾಗಿ ನಿದ್ದೆ ಬಂದಿದ್ದರೂ ಈ ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ದೇಹದಲ್ಲಿ ರಕ್ತ ಕಡಿಮೆಯಾದರೂ ಆಯಾಸ ಕಾಣಿಸಿಕೊಳ್ಳುತ್ತದೆ.

2. ದೇಹದ ತೂಕದಲ್ಲಿ ಗಣನೀಯ ಇಳಿಕೆ:

ಕ್ಯಾನ್ಸರ್ ಇರುವವರ ದೇಹದ ತೂಕವು ಗಣನೀಯವಾಗಿ ಇಳಿಯಲಾರಂಭಿಸುತ್ತದೆ. ಒಂದು ವೇಳೆ ನೀವು ವ್ಯಾಯಾಮ, ಡಯಟ್ ಮಾಡದೇ ತೂಕ ಕಳೆದುಕೊಳ್ಳುತ್ತಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಒಂದೇ ಬಾರಿ 10 ಪೌಂಡ್‌ಗಿಂತಲೂ ಹೆಚ್ಚು ತೂಕ ಕಳೆದುಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

3. ಚರ್ಮ ಗಟ್ಟಿಯಾಗುವುದು ಅಥವಾ ಗಂಟುಗಳಾಗುವುದು:

ನಿಮ್ಮ ದೇಹವನ್ನು ಪ್ರತಿದಿನ ಪರೀಕ್ಷಿಸಿ. ಚರ್ಮ ಗಟ್ಟಿಯಾಗುವುದು ಅಥವಾ ಗಂಟುಗಳಾಗುವುದು ಕ್ಯಾನ್ಸರ್‌ನ ಲಕ್ಷಣವಾಗಿದೆ. ಗಂಟುಗಳು ಕಂಡು ಬಂದರೆ ಅವುಗಳ ಆಕಾರ ಬದಲಾಗುತ್ತಿದೆಯೇ ಎಂಬುವುದನ್ನು ಸೂಕ್ಷ್ಮವಾಗಿ ಗಮನಿಸಿ. ಯಾವುದೇ ಬದಲಾವಣೆಗಳು ಕಂಡು ಬಂದಲ್ಲಿ ತಡಮಾಡದೇ ವೈದ್ಯರ ಬಳಿ ತೆರಳಿ.

ಅಂಗಡೀಲಿ ಕೊಡುವ ರಸೀದಿಯಿಂದ ಕ್ಯಾನ್ಸರ್ ಬರಬಹುದು ಎಚ್ಚರ!

4. ನಿರಂತರ ನೋವು:

ಸಾಮಾನ್ಯವಾಗಿ ನೋವು ಎಲ್ಲಾ ರೀತಿಯ ಕಾಯಿಲೆಗಳಲ್ಲೂ ಕಾಣಿಸಿಕೊಳ್ಳುತ್ತದೆ, ಇದು ಕ್ಯಾನ್ಸರ್ ಕಾಯಿಲೆಗೀಡಾದವರಲ್ಲೂ ಕಂಡು ಬರುತ್ತದೆ. ಒಂದು ವೇಳೆ ನೋವು ಸಹಿಸಲು  ಅಸಾಧ್ಯವಾದರೆ, ಕಡಿಮೆಯಾಗದಿದ್ದಲ್ಲ ಅಥವಾ ಚಿಕಿತ್ಸೆ ಪಡೆದರೂ ಕಡಿಮೆಯಾಗದಿದ್ದಲ್ಲ ಎಚ್ಚರಿಕೆ ಎಂಬುವುದನ್ನು ಮರೆಯದಿರಿ. ದೇಹದ ಒಂದು ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡರೆ ಕ್ಯಾನ್ಸರ್ ಲಕ್ಷಣ ಎನ್ನಬಹುದು.
 
5. ಪದೇ ಪದೇ ಭಾದಿಸುವ ಜ್ವರ:

ಕ್ಯಾನ್ಸರ್ ನಿಂದ ಬಳಲುವ ಬಹುತೇಕ ಎಲ್ಲರಲ್ಲೂ ಪದೇ ಪದೇ ಜ್ವರ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ನಿಮ್ಮ ರೋಗನಿರೋಧಕ ಕಣಗಳಿಗೆ ಕ್ಯಾನ್ಸರ್ ಬಾಧಿಸಿದರೆ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಅಡ್ವಾನ್ಸ್ ಡ್ ಸ್ಟೇಜ್ ಕ್ಯಾನ್ಸರ್ ನಲ್ಲಿ ಜ್ವರ ಸಾಮಾನ್ಯವಾಗಿದ್ದರೂ, ರಕ್ತದ ಕ್ಯಾನ್ಸರ್‌ನ ಪ್ರಾಥಮಿಕ ಹಂತದಲ್ಲೂ ಜ್ವರ ಕಾಣಿಸಿಕೊಳ್ಳುತ್ತದೆ ಎಂಬುವುದು ಗಮನಾರ್ಹ. ಯಾವುದೇ ಸಂದರ್ಭದಲ್ಲೂ ಜ್ವರ ನಿಮ್ಮನ್ನು ಬಾಧಿಸುತ್ತಿದ್ದರೆ, ಇದಕ್ಕೆ ಕಾರಣವೇನು ಎಂದು ತಿಳಿಯುತ್ತಿಲ್ಲವೆಂದಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

6. ಚರ್ಮದಲ್ಲಿ ಬದಲಾವಣೆ:

ಚರ್ಮದ ಕ್ಯಾನ್ಸರ್ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ಇದನ್ನು ಶೀಘ್ರದಲ್ಲಿ ಪತ್ತೆ ಹಚ್ಚುವುದು ಕಷ್ಟಕರ. ಒಂದು ವೇಳೆ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆ, ಕಲೆ ಅಥವಾ ಮಚ್ಚೆಯ ಬಣ್ಣ, ಆಕಾರ ಬದಲಾದರೆ ಚರ್ಮದ ಕ್ಯಾನ್ಸರ್ ಲಕ್ಷಣವೆನ್ನಬಹುದು. ಚರ್ಮದಲ್ಲಾಗುವ ಬದಲಾವಣೆ ಇತರ ಕ್ಯಾನ್ಸರ್ ಲಕ್ಷಣಗಳೂ ಆಗಿರುತ್ತವೆ. ಹೀಗಾಗಿ ಚರ್ಮದಲ್ಲಾಗುವ ಬದಲಾವಣೆಯ ಮೇಲೆ ವಿಶೇಷ ಗಮನ ನೀಡಿ.

7.  ಮಲ/ಮೂತ್ರ ವಿಸರ್ಜನೆ ಬಾಧೆ: 

ಮಲ/ ಮೂತ್ರ ವಿಸರ್ಜನೆಗೆ ಕಷ್ಟವಾಗುತ್ತಿದೆ, ನೋವು ಅಥವಾ ಉರಿ ಕಾಣಿಸಿಕೊಂಡರೆ, ಅಜೀರ್ಣ ಇವೆಲ್ಲವೂ ಕ್ಯಾನ್ಸರ್ ಲಕ್ಷಣಗಳು ಎಂಬುವುದು ಮರೆಯದಿರಿ.

ಇದು ನಮ್ಮ ಡೈಲಿ ಫುಡ್, ಆದ್ರೆ ಬರುತ್ತೆ ಕ್ಯಾನ್ಸರ್!

8. ಒಣ ಕೆಮ್ಮು ಅಥವಾ ಕಫಯುಕ್ತ ಕೆಮ್ಮು:

ವಿರಳವಾಗಿ ಕಾಣಿಸಿಕೊಳ್ಳುವ ಕೆಮ್ಮು ಕಫ ಸಾಮಾನ್ಯ. ಆದರೆ ಪದೇ ಪದೇ ಈ ಸಮಸ್ಯೆ ಬಾಧಿಸುವುದು ಬಹಳ ಡೇಂಜರ್. ಎಲ್ಲವೂ ಕ್ಯಾನ್ಸರ್ ಲಕ್ಷಣ ಎನ್ನಲು ಸಾಧ್ಯವಿಲ್ಲ. ಆದರೆ ವೈದ್ಯರಲ್ಲಿ ತೋರಿಸುವುದು ಸೂಕ್ತ.

9. ಅಸಹಜ ರಕ್ತಸ್ರಾವ:

ಅಸಹಜ ರಕ್ತಸ್ರಾವ ಅತ್ಯಂತ ಮಾರಕ. ಕೆಮ್ಮುವಾಗ ರಕ್ತ, ಮೂತ್ರ ವಿಸರ್ಜನೆ ವೇಳೆ ರಕ್ತ ಸ್ರಾವ ನಿರ್ಲಕ್ಷಿಸುವುದು ಅಪಾಯಕಾರಿ. ಅಸಹಜ ಮುಟ್ಟು ಕೂಡಾ ಡೇಂಜರಸ್.

10. ಜೀರ್ಣ ಅಥವಾ ಆಹಾರ ಸೇವಿಸಲು ಸಮಸ್ಯೆ:

ನಿರಂತರವಾಗಿ ಅಜೀರ್ಣತೆ ಬಾಧಿಸುತ್ತಿದ್ದರೆ ಎಚ್ಚರ ವಹಿಸುವುದು ಉತ್ತಮ. ಸಾಮಾನ್ಯವಾಗಿ ಅಜೀರ್ಣತೆ ಕಾಡುತ್ತದೆ. ಆದರೆ ಈ ಕುರಿತಾಗಿ ಗಮನ ನೀಡಿದರೆ ಒಳ್ಳೆಯದು.

11. ಇತರ ಲಕ್ಷಣಗಳು:

ಕಾಲಿನ ಊತ ಕ್ಯಾನ್ಸರ್ ಚಿಕಿತ್ಸೆ ವೇಳೆ ಕಂಡು ಬರುತ್ತದೆ. ಆದರೆ ಯಾವುದೇ ಚಿಕಿತ್ಸೆ ಪಡೆಯದಿದ್ದಾಗಲೂ ಕಾಲಿನಲ್ಲಿ ಊತ ಕಾಣಿಸಿಕೊಂಡರೆ ವೈದ್ಯರ ಬಳಿ ತೋರಿಸಿಕೊಳ್ಳಿ.

ಈ ಮೇಲಿನ 11 ಲಕ್ಷಣಗಳು ಕ್ಯಾನ್ಸರ್ ಪೀಡಿತರಲ್ಲಷ್ಟೇ ಕಂಡು ಬರುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ ಕ್ಯಾನ್ಸರ್ ಇರುವ ಎಲ್ಲರಲ್ಲೂ ಇದು ಸಾಮಾನ್ಯ. ಹೀಗಾಗಿ ಈ ಕುರಿತು ಹೆಚ್ಚಿನ ಗಮನವಹಿಸಿ.