ಈ ದೇಶದಲ್ಲಿ ಅತಿಥಿಗೆ ಟೀ ಕೊಟ್ಟರೆ 'ಹೊರಡಿ' ಎಂದರ್ಥ!

 ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ |' ಎಂದು ಜಪಿಸಿ, ಊಟು ಮಾಡೋ ಪದ್ಧತಿ ಭಾರತೀಯರದ್ದು. ಬೇರೆ ದೇಶದಲ್ಲಿ ಯಾವ ಪದ್ಧತಿ ಇದೆ?

10 shocking food habits around the world

ಎಲೆ ಮುಂದೆ ಹೆಚ್ಚು ಹೊತ್ತು ಕೂರಬಾರದು. ತಿನ್ನುವಾಗ ಶಬ್ಧ ಮಾಡಬಾರದು, ತಟ್ಟೆಯಿಂದ ಅನ್ನ ಚೆಲ್ಲಬಾರದು...ಹತ್ತು ಹಲವು ಊಟಕ್ಕೆ ಸಂಬಂಧಿಸಿದ ನೀತಿ ನಿಯಮಗಳು ಭಾರತದಲ್ಲಿದೆ. ಆದರೆ, ನಮ್ಮ ದೇಶದಲ್ಲಿ ಮಾತ್ರವಲ್ಲ, ಬೇರೆ ದೇಶಗಳಲ್ಲಿಯೂ ಊಟಕ್ಕೆ ಸಂಬಂಧಿಸಿದಂತೆ ಹಲವು ರೀತಿ ರಿವಾಜುಗಳಿಗವೆ. ಏನವು? 

  • ಚೀನಾದಲ್ಲಿ ಊಟದ ನಂತರ ತೇಗುವುದರಿಂದ ಆಹಾರ ರುಚಿವಾಗಿತ್ತೆಂದರ್ಥ. 
  • ದಕ್ಷಿಣ ಕೊರಿಯಾದಲ್ಲಿ ಊಟದ ಮೊದಲ ತುತ್ತು ಮನೆಯ ಹಿರಿಯರು ಸೇವಿಸಿದ ನಂತರವೇ ಉಳಿದವರು ತಿನ್ನಬೇಕು. 
  • ಜಪಾನ್‌ನಲ್ಲಿ ಹೆಣದ ಮೂಳೆಗಳನ್ನು ಚಾಪ್ ಸ್ಟಿಕ್‌ನಿಂದ  ಸಾಗಿಸಲಾಗುತ್ತದೆ. ಆದುದರಿಂದ ಆಹಾರ ಸೇವಿಸುವಾಗ ಯಾವುದೇ ಪದಾರ್ಥವನ್ನು ಚಾಪ್‌ಸ್ಟಿಕ್‌ನಲ್ಲಿ ಕೊಡಬಾರದು. 
  • ಚೀನಾದಲ್ಲಿ ಮೀನು ತಿನ್ನುವಾಗ ಒಂದು ಭಾಗ ತಿಂದು ಮತ್ತೊಂದು ಭಾಗವನ್ನು ಬಿಡಬಾರದು. ಇದು ದುರಾದೃಷ್ಟವೆಂದು ನಂಬಲಾಗುತ್ತದೆ. ಮೀನಿನ ಒಂದು ಭಾಗ ತಿಂದ ನಂತರ, ಮೂಳೆ ತೆಗೆದು ಮತ್ತೊಂದು ಭಾಗವನ್ನೂ ತಿನ್ನಲೇ ಬೇಕು. 
  • ಇಲ್ಲಿ ಫೂರ್ಕ್ ಅ್ಯಂಡ್ ಸ್ಪೂನ್ ಬಳಸುವ ರೀತಿಯೇ ಬೇರೆ.  ಫೋರ್ಕನ್ನು ಡೈರೆಕ್ಟ್ ಆಗಿ ಬಾಯಲ್ಲಿಡುವುದು ಮ್ಯಾನರ್ಸ್ ಅಲ್ಲ. ಆಹಾರವನ್ನು ಸ್ಪೂನಿನಲ್ಲಿಡುವುದಕ್ಕೆ ಮಾತ್ರ ಫೋರ್ಕ್ ಬಳಸಬಹುದು ಅಷ್ಟೇ. 
  • ಊಟ ಆದ ಕೊಡಲೇ ಕಾಫಿ ಕೇಳುವುದು ಮಲೆನಾಡಿನಲ್ಲಂತೂ ಕಾಮನ್. ಆದರೆ, ಇಟಲಿಯಲ್ಲಿ ಇದು ನಿಷಿದ್ಧ. ಆರೋಗ್ಯಕ್ಕೆ ಒಳ್ಳೇದಲ್ಲ ಎಂಬ ಕಾರಣವಿರಬಹುದು.
  • ಉತ್ತರ ಕೊರಿಯಾದಲ್ಲಿ ಗ್ಲಾಸ್‌ಗೆ ಡ್ರಿಂಕ್ಸ್ ಅನ್ನು ತಾವೇ ಹಾಕಿ ಕೊಳ್ಳಬಾರದು. ಇನ್ನೊಬ್ಬರು ಸರ್ವ್ ಮಾಡೋವರೆಗೆ ಕಾಯಬೇಕು. 
  • ಟಾಂಜೇನಿಯಾದಲ್ಲಿ ಸಮಯಕ್ಕೆ ಸರಿಯಾಗಿ ಊಟಕ್ಕೆ ಹೋಗುವುದೇ ಅವಮಾನ. ಅದಕ್ಕೆ ಅತಿಥಿಗಳು 20 ನಿಮಿಷ ತಡವಾಗಿ ಆಗಮಿಸುತ್ತಾರೆ!
  • ದುಬೈನಲ್ಲಿ ಊಟವನ್ನು ಎಡಗೈಯಿಂದ ತಿನ್ನಲೇ ಬಾರದು. ಶೌಚಕ್ಕೆ ಬಳಸುವ ಕೈಯನ್ನು ಶೋಕಿಗೂ ಬಳಸಬಾರದೆಂಬುವುದು ಇವರ ನಿಯಮ.
  • ಖಝಕಿಸ್ಥಾನದಲ್ಲಿ ಮನೆಗೆ ಆಗಮಿಸಿದ ಅತಿಥಿಗಳಿಗೆ ಟೀ ಕೊಟ್ಟರೆ, ಅವರು ಮನೆಯಿಂದ ಹೊರಡಬೇಕೆಂಬ ಸೂಚನೆ.
Latest Videos
Follow Us:
Download App:
  • android
  • ios