ಶಿವಮೊಗ್ಗ: ಸಿಬಿಐ ಅಧಿಕಾರಿ ಎಂದು ಹೇಳಿ ವ್ಯಕ್ತಿಗೆ ಲಕ್ಷಾಂತರ ರೂ. ಮಕ್ಮಲ್‌ ಟೋಪಿ!

ವೃದ್ಧರೊಬ್ಬರಿಗೆ ವೀಡಿಯೋ ಕಾಲ್ ಮಾಡಿ, ಆಧಾರ್‌ಕಾಡ್ ೯ನ ಸಂಖ್ಯೆಯಿಂದ ದೊಡ್ಡ ಮೊತ್ತದ ಹಣದ ಅಕ್ರಮ ನಡೆದಿದಿದೆ. ಹಾಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಸೀಜ್ ಆಗಿದೆ ಎಂದು ಹೇಳಿ ಲಕ್ಷಾಂತರ ರು. ವಂಚಿಸಿದ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ ಸಿಇಎನ್ ಠಾಣೆ ಪೊಲೀಸರು
 

Two Arrested on Fraud Case in Shivamogga grg

ಶಿವಮೊಗ್ಗ(ನ.17):   ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ವೃದ್ಧರೊಬ್ಬರಿಗೆ ವೀಡಿಯೋ ಕಾಲ್ ಮಾಡಿ, ಆಧಾರ್‌ಕಾಡ್ ೯ನ ಸಂಖ್ಯೆಯಿಂದ ದೊಡ್ಡ ಮೊತ್ತದ ಹಣದ ಅಕ್ರಮ ನಡೆದಿದಿದೆ. ಹಾಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಸೀಜ್ ಆಗಿದೆ ಎಂದು ಹೇಳಿ ಲಕ್ಷಾಂತರ ರು. ವಂಚಿಸಿದ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಕಳೆದ ಸೌ 27ರಂದು ಗೋಪಾಳದ ಎಲ್.ಎಸ್ ಆನಂದ್ (72)ಗೆ ವೀಡಿಯೋ ಕಾಲ್ ಮಾಡಿ ಸಿಬಿಐ ಅಧಿಕಾರಿ ಎಂದು ಹೇಳಿ ನಿಮ್ಮ ಆಧಾರ್ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ದೂರು ದಾಖಲಾಗಿದೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿ ಆಗಿದೆ. ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ ಎಂದು ಹೆದರಿಸಿದ್ದಾನೆ. 

ಭಿಕ್ಷೆ ಬೇಡುವವಳಿಗೆ ಮಗು ಕೊಟ್ಟ ತಾಯಿ, ಕಂದಮ್ಮನ ಜೊತೆ ಅಪರಿಚಿತ ಮಹಿಳೆ ಪರಾರಿ!

ಬಳಿಕ ಇದರಿಂದ ಹೊರ ಬರಬೇಕಾದರೇ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕು ಎಂದು ತಿಳಿಸಿ ಎಲ್.ಎಸ್ ಆನಂದ್ ಅವರಿಂದ ಒಟ್ಟು ₹41 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ ರು. ಈ ಬಗ್ಗೆ ಶಿವಮೊಗ್ಗ ಸಿ ಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಸಿಇಎನ್ ಠಾಣೆಯ ಡಿವೈಎಸ್ಪಿ ಕೆ.ಡಿ. ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ, ಮಂಜುನಾಥ ನೇತೃತ್ವದಲ್ಲಿ 'ನಿಖಾ ತಂಡವನ್ನು ರಚಿಸಲಾಗಿತ್ತು. ತಂಡವು ಪ್ರಕರಣವನ್ನು ಭೇದಿಸಿ ನ.12ರಂದು ಪ್ರರಕಣದ ಆರೋಪಿಗಳಾದ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಹಮದ್ (45), ಅಭಿಶೇಕ್ ಕುಮಾರ್ ಶೇಟ್ ( 27), ಇವರನ್ನು ಬಂಧಿಸಿ ಒಟ್ಟು 23.89 ಲಕ್ಷ ವಶಕ್ಕೆ ಪಡೆದಿದೆ.

ಬೆಳಗಾವಿ: ವೇಶ್ಯಾವಾಟಿಕೆ ಆರೋಪ, ರಸ್ತೆಯಲ್ಲೇ ಮಹಿಳೆಯ ಬಟ್ಟೆ ಹರಿದು ಹಲ್ಲೆ

Latest Videos
Follow Us:
Download App:
  • android
  • ios