ಬೆಂಗಳೂರು(ಅ.12): ಈ ವಿಶ್ವದಲ್ಲಿ 700 ಕೋಟಿಗೂ ಅಧಿಕ ಜನರಿದ್ದಾರೆ. 700 ಕೋಟಿ ಜನ ಎಂದರೆ 700 ಕೋಟಿ ಮೆದುಳು ಆ್ಯಕ್ಟೀವ್ ಆಗಿದೆ ಎಂದರ್ಥ. 700 ಕೋಟಿ ಮೆದುಳು ಚುರುಕಾಗಿದೆ ಎಂದರೆ 700 ಕೋಟಿ ಭಿನ್ನ ವಿಚಾರಗಳು ಜೀವಂತವಾಗಿದೆ ಎಂದರ್ಥವಾಯಿತಲ್ಲ.

ವಿಶ್ವದ ಇಂದಿನ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳಿಗೆ ಮಾನವನ ಮೆದುಳಿನ ಕಾರ್ಯವೈಖರಿಯೇ ಪ್ರಮುಖ ಕಾರಣ ಎಂದರೆ ನಿಮಗೆ ಒಂದು ಕ್ಷಣ ಗೊಂದಲವಾಗಬಹುದು. ವ್ಯವಸ್ಥೆಯೊಂದರ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗಳನ್ನು ನಿರ್ಧರಿಸುವ ಕ್ಷಮತೆ ಕೇವಲ ಮನುಷ್ಯನಿಗೆ ಮಾತ್ರ ಇದೆ ತಾನೆ.

ಮನುಷ್ಯನಿಂದ ಮನುಷ್ಯನಿಗೆ ಇರುವ ಈ ಭಿನ್ನ ವಿಚಾರಗಳಿಗೆ ಮೆದುಳಿನ ಕಾರ್ಯಕ್ಷಮತೆಯೇ ಮೂಲ ಕಾರಣ. ವಿಶ್ವದಾದ್ಯಂತ ಪಸರಿಸಿರುವ ಹಿಂಸೆಗೆ ಧರ್ಮ ಕಾರಣವಲ್ಲ, ಒಂದು ನಿರ್ದಿಷ್ಟ ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡ ಮನುಷ್ಯನ ಮೆದುಳೇ ಕಾರಣ ಎನ್ನಬಹುದು. ಅಷ್ಟೇ ಅಲ್ಲ ಶಾಂತಿ, ಸಹಬಾಳ್ವೆ, ಸಹೋದರತ್ವ ಸಾರುವ ಮನಸ್ಸುಗಳಿಗೂ ಪ್ರೇರಕ ಶಕ್ತಿ ಈ ಮೆದುಳೇ ಎಂದರೆ ಅತಿಶೋಕ್ತಿಯೇನಲ್ಲ.

ಹಾಗೆ ನೋಡಿದರೆ ಮನುಷ್ಯನ ದೇಹ ರಚನೆಯಲ್ಲಿ ಅಷ್ಟೇನು ವ್ಯತ್ಯಾಸವಿಲ್ಲ. ಅದರಂತೆ ಮನುಷ್ಯನ ಮೆದುಳಿನ ರಚನೆಯಲ್ಲೂ ಅಷ್ಟೇನೂ ವ್ಯತ್ಯಾಸ ಕಾಣದು. ವಿಪರ್ಯಾಸವೆಂದರೆ ಇಡೀ ಭೂಮಂಡಲದ ಪ್ರಸ್ತುತ ಸ್ಥಿತಿಗತಿಗಳಿಗೆ ಪ್ರೇರಕ ಶಕ್ತಿಯಾಗಿರುವ ಮನುಷ್ಯನ ಈ ಮದುಳಿನ ಕುರಿತು ನಮಗೆ ಜ್ಞಾನ ಕಡಿಮೆಯೇ. ಹಾಗಾದರೆ ಮೆದುಳಿನ ಕುರಿತಾದ 10 ಇಂಟರೆಸ್ಟಿಂಗ್ ಅಂಶಗಳ ಮಾಹಿತಿ ಇಲ್ಲಿದೆ.

ನಿಮ್ಮ ಮೆದುಳು, ನಿಮ್ಮ ಶಕ್ತಿ:

1. ಮನುಷ್ಯನ ಮೆದುಳಿನ ಸರಾಸರಿ ತೂಕ 3 ಪೌಂಡ್ಸ್

2. ಮಾನವನ ದೇಹದ ಶೇ. 60 ರಷ್ಟು ಕೊಬ್ಬು ಮೆದುಳಿನಲ್ಲೇ ಶೇಖರಣೆಯಾಗಿರುತ್ತದೆ. ಹೀಗಾಗಿ ಮೆದುಳು ಮಾನವನ ದೇಹದ ಇತರ ಅಂಗಗಳಿಗಿಂತ ಹೆಚ್ಚಿನ ಕೊಬ್ಬು ಹೊಂದಿರುತ್ತದೆ.

3. ಮೆದುಳು ಸುಮಾರು 23 ವ್ಯಾಟ್ ನಷ್ಟು ವಿದ್ಯುತ್ ಉತ್ಪಾದಿಸುವ ಕ್ಷಮತೆ ಹೊಂದಿದೆ.

4. ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ಆಮ್ಲಜನಕ ಮತ್ತು ರಕ್ಷದ ಶೇ. 20 ರಷ್ಟನ್ನು ಮೆದುಳು ಒಂದೇ ಬಳಸಿಕೊಳ್ಳುತ್ತದೆ.

5. ಮೆದುಳಿಗೆ ರಕ್ತ ಚಲನೆ ನಿಂತ 8-10 ಸೆಕೆಂಡ್ ಗಳ ನಂತರ ಮೆದುಳು ನಿಷ್ಕ್ರೀಯವಾಗಲು ಪ್ರಾರಂಭಿಸುತ್ತದೆ.

6. ಮೆದುಳಿಗೆ ಆಮ್ಲಜನಕದ ಪೂರೈಕೆ ನಿಂತ 5-6 ನಿಮಿಷಗಳ ನಂತರ ಮೆದುಳು ನಿಷ್ಕ್ರೀಯವಾಗುತ್ತದೆ.

7. ಮೆದುಳಿನಲ್ಲಿರುವ ರಕ್ಷನಾಳಗಳು ಸರಿಸುಮಾರು 1 ಲಕ್ಷ ಮೈಲು ಉದ್ದ ಇರುತ್ತವೆ.

8. ಮೆದುಳಿನಲ್ಲಿ ಬರೋಬ್ಬರಿ 100 ಬಿಲಿಯ್ ನರಕೋಶಗಳು ಇರುತ್ತವೆ.

9. ಆರಂಭಿಕ ಗರ್ಭಾವಸ್ಥೆಯಲ್ಲಿ, ನರಕೋಶಗಳು ಪ್ರತಿ ನಿಮಿಷಕ್ಕೆ 250,000 ಅಪಾಯಕಾರಿ ಪ್ರಮಾಣದಲ್ಲಿ ಬೆಳೆಯುತ್ತವೆ.

10. ಮನುಷ್ಯನ ವಯಸ್ಸು ಹೆಚ್ಚಾದಂತೆ ಮದುಳು ಕೂಡ ತನ್ನ ಕ್ರಿಯಾಶೀಲತೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಇದೇ ಕಾರಣಕ್ಕೆ ಮನುಷ್ಯ ಹೊಸ ಸಂಗತಿಗಳನ್ನು ಗ್ರಹಿಸಲು ಅಶಕ್ತನಾಗುತ್ತಾನೆ. ಕಾರಣ ಮೆದುಳು ಈ ಹಿಂದೆ ಗ್ರಹಿಸಿದ ಸಂಗತಿಗಳನ್ನು ಅಳಿಸಿ ಹೊಸ ಸಂಗತಿಗಳನ್ನು ಗ್ರಹಿಸಲು ಅಶಕ್ತವಾಗಿರುತ್ತದೆ.

ನೋಡಿ ನಮ್ಮ ಮೆದುಳು ಎಷ್ಟೆಲ್ಲಾ ಕೆಲಸ ಮಾಡುತ್ತದೆ ಮತ್ತು ಈ ಕೆಲಸಗಳನ್ನು ಮಾಡಲು ಅದು ಏನೆಲ್ಲಾ ಅವಕಾಶಗಳನ್ನು ಬಳಿಸಿಕೊಳ್ಳುತ್ತದೆ. ಮನುಷ್ಯನಿಂದ ಮನುಷ್ಯನಿಗೆ ವಿಚಾರಧಾರೆಗಳಲ್ಲಿ ಭಿನ್ನತೆ ಸಾಮಾನ್ಯ ಸಂಗತಿಯಾದರೂ, ಮೆದುಳಿನ ಸರಿಯಾದ ಸದ್ಬಳಕೆಯಿಂದ ಈ ಭಿನ್ನತೆಯನ್ನು ಸಾಮ್ಯತೆಯನ್ನಾಗಿ ಪರಿವರ್ತಿಸಲು ಮನುಷ್ಯನಿಗೆ ಸಾಧ್ಯವಿದೆ ಎಂಬುದು ಅಷ್ಟೇ ಸತ್ಯ ಅಲ್ಲವೇ?.