ದಾಳಿಂಬೆ ಹಣ್ಣನ್ನು ಔಷಧವಾಗಿ ಸುಶ್ರುತನ ಕಾಲದಿಂದಲೂ ಬಳಸಲಾಗುತ್ತಿದೆ. ಇಂದಿಗೂ ಹಲವು ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ಇದು ಸಹಕಾರಿ. ಆದರೆ ಕೇವಲ ದಾಳಿಂಬೆ ಮಾತ್ರವಲ್ಲ, ಅದರ ಹೂವು ಮತ್ತು ಎಲೆಯಲ್ಲೂ ಉತ್ತಮ ಔಷಧೀಯ ಗುಣಗಳಿವೆ. ಅವುಗಳ ಸೇವನೆಯಿಂದ ಏನೆಲ್ಲಾ ಲಾಭ ಇವೆ ನೋಡಿ..

 

  • ದಾಳಿಂಬೆ ಎಲೆಯನ್ನು ನುಣ್ಣಗೆ ಅರೆದು, ಅದರಿಂದ ಅಂಗಾಂಗವನ್ನು ತಿಕ್ಕಿ ಸ್ನಾನ ಮಾಡುವುದರಿಂದ ಶರೀರ ಕಾಂತಿಯುತವಾಗುತ್ತದೆ.
  • ಎಲೆಗಳನ್ನು ಅರಿದು ಮೈಗೆ ಹಚ್ಚಿ ಸ್ನಾನ ಮಾಡಿದರೆ, ಬೆವರಿನ ವಾಸನೆಯಿಂದ ಮುಕ್ತವಾಗುತ್ತದೆ.
  • ಬಿಳಿ ಮುಟ್ಟಿನ ಸಮಸ್ಯೆ ಇರುವವರು ದಾಳಿಂಬೆ ಮೊಗ್ಗಿನ ಜೊತೆ ಕರಿಮೆಣಸಿನ ಪುಡಿ ಹಾಕಿ ನೀರಲ್ಲಿ ಕುದಿಸಿ, ಸೇವಿಸಬೇಕು.
  • ದಾಳಿಂಬೆ ಹೂವನ್ನು ಅರೆದು ಮಿಕ್ಸ್ ಮಾಡಿ ಜಜ್ಜಿ ಮುಖದ ಮೇಲೆ ಮೊಡವೆಗೆ ಹಚ್ಚಿದರೆ ಅದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.
  • ಮೂಗಿನಲ್ಲಿ ರಕ್ತ ಸ್ರಾವವಾಗುತ್ತಿದ್ದರೆ, ದಾಳಿಂಬೆ ಹೂವು ಮತ್ತು ಗರಿಕೆ ಹುಲ್ಲಿನ ರಸ ತೆಗೆದು ಮೂಗಿಗೆ ಹಾಕಬೇಕು. ಇದರಿಂದ ರಕ್ತಸ್ರಾವ ಶೀಘ್ರ ಗುಣಮುಖವಾಗುತ್ತದೆ.

  • ದಾಳಿಂಬೆ ಎಲೆಯ ಜ್ಯೂಸು ಮಾಡಿ ಮಲಗುವ ಮುನ್ನ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
  • ಜೊತೆಗೆ ಇದರ ಜ್ಯೂಸಿನಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ.
  • ದಾಳಿಂಬೆ ಹೂವಿಗೆ ಅರಿಶಿನ ಮತ್ತು ಅಮೃತ ಬಳ್ಳಿ ಸೇರಿಸಿ, ಕುದಿಸಿ ಸೇವಿಸಿದರೆ ಮಧುಮೇಹ ಸಮಸ್ಯೆ ನಿವಾರಣೆಯಾಗುತ್ತದೆ.
  • ಹೊಟ್ಟೆ ನೋವು ಅಥವಾ ಜಂತು ಹುಳದ ಸಮಸ್ಯೆಗೂ ಈ ರಸ ಒಳ್ಳೆ ಮದ್ದು.
  • ಕೆಮ್ಮು, ಗಂಟಲು ಕೆರೆತ ಮೊದಲಾದ ಸಮಸ್ಯೆಗೂ ಇದು ಸಹಕಾರಿ.