Asianet Suvarna News Asianet Suvarna News

ಬೆತ್ತಲೆ ಪೂಜೆಯಿಂದ ಬಡತನ ನಿವಾರಣೆ ಎಂಬ ಭ್ರಮೆ ತುಂಬಿ ಅಪ್ರಾಪ್ತ ಬಾಲಕನ ವಿಡಿಯೋ ಮಾಡಿ ವಿಕೃತಿ

Naked worship in Hubli: ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಬಡತನ ನಿವಾರಣೆಯಾಗುತ್ತದೆ ಎಂಬ ಸುಳ್ಳು ಹೇಳಿ ಬೆತ್ತಲೆ ಪೂಜೆ ಮಾಡಿಸಿದ ಘಟನೆ ನಡೆದಿದೆ. ತಂದೆ ಮನೆ ಕಟ್ಟಿಸಲು ಸಾಲ ಮಾಡಿದ್ದ, ಈ ಸಾಲ ತೀರಿಸಲು ಮಗ ಹುಬ್ಬಳ್ಳಿಗೆ ಬಂದು ಕೆಲಸ ಮಾಡುತ್ತಿದ್ದ. ಈತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಮೂವರು ಬೆತ್ತಲೆ ಪೂಜೆ ಮಾಡಿಸಿ ವಿಡಿಯೋ ಮಾಡಿದ್ದಾರೆ. 

minor boy tricked to do naked worship by elders in return to come over his poverty
Author
First Published Oct 3, 2022, 11:43 AM IST

ಕೊಪ್ಪಳ: ಮುಗ್ದತೆ, ಮೌಢ್ಯ, ಭಕ್ತಿ ಇವುಗಳನ್ನೇ ಬಂಡವಾಳ ಮಾಡಿಕೊಂಡು ಸಮಾಜವನ್ನು ವಂಚಿಸುವ ದೊಡ್ಡ ಸಮೂಹವೇ ಇದೆ. ಅದೇ ರೀತಿ ತಮ್ಮ ಖುಷಿಗಾಗಿ ಮುಗ್ಧ ಬಾಲಕನನ್ನು ಬೆತ್ತಲೆ ಪೂಜೆ ಮಾಡುವಂತೆ ಪುಸಲಾಯಿಸಿ, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬೆತ್ತಲೆ ಪೂಜೆ ಮಾಡಿದರೆ ಬಡತನ ನಿವಾರಣೆ ಆಗುತ್ತದೆ, ತಂದೆಯ ಸಾಲ ತೀರುತ್ತದೆ ಮತ್ತು ಹಣ ಕೈಸೇರುತ್ತದೆ ಎಂದು ನಂಬಿಸಿ ಹುಡುಗ ಬೆತ್ತಲೆ ಸೇವೆ ಮಾಡುವಂತೆ ಮಾಡಿದ್ದಾರೆ. ನಂತರ ಅದರ ವಿರಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಹರಿ ಬಿಡಲಾಗಿದೆ. ಈ ಬಗ್ಗೆ ಬಾಲಕನ ಪೋಷಕರು ಕೊಪ್ಪಳದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಇತ್ತೀಚೆಗಷ್ಟೆ 16 ವರ್ಷದ ಬಾಲಕನ ತಂದೆ ಕೊಪ್ಪಳದಲ್ಲಿ ಮನೆ ಕಟ್ಟಿಸಿದ್ದರು. ಮನೆ ಕಟ್ಟಿಸಲು ಸಾಲ ಮಾಡಿದ್ದರು. ಆ ಸಾಲವನ್ನು ತೀರಿಸುವ ಸಲುವಾಗಿ ಮಗ ಹುಬ್ಬಳ್ಳಿಗೆ ಬಂದು ಕೆಲಸ ಮಾಡುತ್ತಿದ್ದ. ದಿನಗೂಲಿ ನೌಕರನಾಗಿ ಸಾಧ್ಯವಾದಷ್ಟು ಸಂಪಾದಿಸಿ ಮನೆಯ ಸಾಲ ತೀರಿಸಲು ಶ್ರಮಿಸುತ್ತಿದ್ದ. ಬಾಲಕ ತನ್ನ ಕಷ್ಟವನ್ನು ಕೆಲವರ ಬಳಿ ಹೇಳಿಕೊಂಡಿದ್ದಾನೆ. ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾದರೆ ಮಾಡಬೇಕು, ಇಲ್ಲವಾದರೆ ಸುಮ್ಮನಿರಬೇಕು. ಆದರೆ ಈ ಆರೋಪಿಗಳಾದ ಶರಣಪ್ಪ, ಮರಿಗೌಡ ಮತ್ತು ಶರಣಪ್ಪ ತಳವಾರ್‌ ಎಂಬುವವರು ಬಾಲಕನ ಅಮಾಯಕತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಹಾಲುಂಡು ಹೋಗೆ ನಾಗಮ್ಮ.. ಮಹಿಳೆಯರ ಮೇಲೆ ಪ್ರತ್ಯಕ್ಷವಾಯ್ತಾ ನಾಗದೇವತೆ, ವಿಡಿಯೋ ವೈರಲ್‌?

ಅಪ್ಪನ್ನ ಸಾಲ ತೀರು ಬೇಕು, ಕೈ ತುಂಬಾ ಹಣ ಬೇಕು ಅಂದ್ರೆ ಬೆತ್ತಲೆ ಪೂಜೆ ಮಾಡು ಬೇಕು ಎಂದು ಆರೋಪಿಗಳು ಹೇಳಿದ್ದಾರೆ. ಬಡತನದ ಬೇಗೆಯಿಂದ ಬಳಲುತ್ತಿದ್ದ ಬಾಲಕನನ್ನು ಪುಸಲಾಯಿಸಿ ಪರಿಚಯಸ್ಥರೇ ವಂಚಿಸಿದ್ದಾರೆ. ಆರೋಪಿಗಳಿಗೆ ಇದು ತಮಾಷೆ ಆದರೆ ಅಮಾಯಕ ಬಾಲಕನಿಗೆ ಇದರಿಂದ ನರಕ ವೇದನೆಯಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಮಸ್ಯೆಗೆ ಪರಿಹಾರ ನೀಡುತ್ತೆವೆಂದು ಅಪ್ರಾಪ್ತ ಬಾಲಕನಿಗೆ ಬೆತ್ತಲೆ ಪೂಜೆ ಮಾಡಿಸಿದ್ದಾರೆ. ಪೂಜೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ವಿಕೃತಿ ಮೆರೆದಿದ್ದಾರೆ. ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ನಿವಾಸಿ 16 ವರ್ಷದ ನೊಂದ ಬಾಲಕ. 

ಶರಣಪ್ಪ,ಮರಿಗೌಡ, ಶರಣಪ್ಪ ತಳವರ್ ವಿಕೃತ ಮೆರೆದವರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ. ಬಾಲಕನ ತಂದೆ ಮನೆಕಟ್ಟಲು ಸಾಲ ಮಾಡಿದ್ದರು. ಸಾಲ ತೀರಿಸಲು ಹುಬ್ಬಳ್ಳಿಗೆ ಕೂಲಿ‌ ಕೆಲಸಕ್ಕೆ ತೆರಳಿದ್ದ ನೊಂದ ಬಾಲಕ. ಈ ವೇಳೆ ಬಾಲಕ ನಿಗೆ ಶರಣಪ್ಪ, ಮರಿಗೌಡ,ಶರಣಪ್ಪ ತಳವರ್ ಎಂಬುವವರ ಪರಿಚಯವಾಗಿತ್ತು. ನಿಮ್ಮ ಅಪ್ಪ ಮಾಡಿದ ಸಾಲ ತೀರ ಬೇಕು ಅಂದರೆ ಬೆತ್ತಲೆ ಪೂಜೆ ಮಾಡಬೇಕು. ಹಾಗೆ ಮಾಡುವುದರಿಂದ ದುಡ್ಡು ಬರುತ್ತದೆ ಮತ್ತೆ ಸಾಲ ಕೂಡ ತೀರುತ್ತದೆ ಎಂದು ಆರೋಪಿಗಳು ಬಾಲಕನಿಗೆ ಹೇಳಿದ್ದಾರೆ.

ಇದನ್ನೂ ಓದಿ: ಜೈಲಿನಿಂದಲೇ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಮುರುಘಾ ಶ್ರೀ ಅರ್ಜಿ 

ಬೆತ್ತಲೆ ಪೂಜೆ ಮಾಡಿದ್ರೆ ಬಡತನ ನಿವಾರಣೆ ಆಗುತ್ತೆ ಅಂತ ಬಾಲಕನನ್ನು ಪುಸಲಾಯಿಸಿದ ಶರಣಪ್ಪ ಮತ್ತು ತಂಡ. ಬಳಿಕ ರೂಮ್ ನಲ್ಲಿ ಬಾಲಕ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಪೂಜೆ ಮಾಡುವ ನಾಟಕ ಮಾಡಲಾಗಿದೆ. ಪೂಜೆಯ ವಿಡಿಯೋ ಮಾಡಿ ಫೇಸ್ ಬುಕ್, ವಾಟ್ಸ್ ಆಪ್, ಯೂಟ್ಯೂಬ್ ಗಳಲ್ಲಿ ವಿಡಿಯೋ ವೈರಲ್ ಮಾಡಿದ ಶರಣಪ್ಪ‌ ಮತ್ತು ತಂಡ. ಇದರಿಂದಾಗಿ ನೊಂದ ಬಾಲಕನ ಕುಟುಂಬದಿಂದ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ಧಾರೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ. 

Follow Us:
Download App:
  • android
  • ios