ಕೊಪ್ಪಳ, [ಅ.28]: ಜಿಲ್ಲೆಯಲ್ಲಿ  ಮಳೆ ಅವಾಂತರಕ್ಕೆ ಓರ್ವ ಮಗು ಸಾವನ್ನಪ್ಪಿದ್ದು, ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ತಡರಾತ್ರಿ ನಡೆದಿದೆ. ಜಿಲ್ಲೆಯ ಕಾರಟಗಿಯ 3 ನೇ ವಾರ್ಡ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. 

ದೀಪಾವಳಿ ಹಬ್ಬದ ಖುಷಿಯಲ್ಲಿದ್ದ ದುರುಗೇಶ ಲಕ್ಷ್ಮೀ ದಂಪತಿಗಳು ತಮ್ಮ 2 ವರ್ಷದ ಮೌನೇಶ ಹಾಗೂ ಅಣ್ಣನ ಮಗಳು ದೀಪಿಕಾ ಸೇರಿ ನಾಲ್ವರು ಜೋಪಡಿ ಮನೆಯಲ್ಲಿ ಮಲಗಿದ್ದರು. ಭಾನುವಾರ ರಾತ್ರಿ ಸುರಿದ ಮಳೆಗೆ ಮನೆಯ ಕಲ್ಲುಗೋಡೆ ಕುಸಿದು ಮೌನೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಅನುಷ್ಕಾ ಬಿಟ್ಟು ಕಾಜಲ್ ಕೈಹಿಡಿದ ನಟ; ಅ.28ರ ಟಾಪ್ 10 ಸುದ್ದಿ!

ಇನ್ನು ದುರುಗೇಶನ ತಲೆಗೆ ಗಾಯವಾಗಿದ್ದು, ಪತ್ನಿ ಲಕ್ಷ್ಮೀ ಎಂಟು ತಿಂಗಳ ಗರ್ಭಿಣಿಯಾಗಿದ್ದು ಈಕೆಗೂ ಕಲ್ಲು ಬಡಿದು ಗಾಯವಾಗಿದೆ. ದೀಪಿಕಾ ಕೂಡ ಸಣ್ಣಪುಟ್ಟ ಗಾಯವಾಗುದ್ದು ಮೂವರು ಸಾವಿನ ದವಡೆಯಿಂದ ಪಾರಾಗಿದ್ದಾರೆ. 

ಕಡುಬಡತನದಲ್ಲಿರುವ ದುರುಗೇಶನ ಕುಟುಂಬ ಮುದ್ದಾದ ಮಗನ ಜೊತೆ ದೀಪಾವಳಿ ಆಚರಿಸಿ ಮಲಗಿದವರಿಗೆ ಮಳೆರಾಯ ಜವರಾಯನಾಗಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಗನ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಘಟನಾ ಸ್ಥಳಕ್ಕೆ ಕಾರಟಗಿ ತಹಶಿಲ್ದಾರ್ ಕವಿತಾ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, 5 ಲಕ್ಷ ರೂಪಾಯಿ ಪರಿಹಾರ ನೀಡಿವುದಾಗಿ ಹೇಳಿದ್ದಾರೆ.