ಸ್ವಚ್ಛಭಾರತ ಅಭಿಯಾನ ಪಾದಯಾತ್ರೆಯಲ್ಲಿ ಬಯಲಾಯ್ತು BJP ಭಿನ್ನಮತ

ಟೇಕಲ್‌ನ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಶುಕ್ರವಾರ ಸಂಸದ ಎಸ್.ಮುನಿಸ್ವಾಮಿರವರು ಕೈಗೊಂಡ ಸ್ವಚ್ಛಭಾರತ ಅಭಿಯಾನ ಪಾದಯಾತ್ರೆ ಸಂದರ್ಭದಲ್ಲಿ ತಾಲೂಕಿನ ಬಿಜೆಪಿಯಲ್ಲಿ ಭಿನ್ನಮತ ಬಹಿರಂಗವಾಗಿದೆ. ಬಿಜೆಪಿ ತಾಲೂಕು ಪದಾಧಿಕಾರಿಗಳು, ಮಾಸ್ತಿ ಶಕ್ತಿ ಕೇಂದ್ರದ ಬಿಜೆಪಿ ಮುಖಂಡರು ಹಾಗೂ ಮೂಲ ಬಿಜೆಪಿಗರು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.

difference of opinion among bjp leaders in kolar

ಕೋಲಾರ(ಅ.13): ಟೇಕಲ್‌ನ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಶುಕ್ರವಾರ ಸಂಸದ ಎಸ್.ಮುನಿಸ್ವಾಮಿರವರು ಕೈಗೊಂಡ ಸ್ವಚ್ಛಭಾರತ ಅಭಿಯಾನ ಪಾದಯಾತ್ರೆ ಸಂದರ್ಭದಲ್ಲಿ ತಾಲೂಕಿನ ಬಿಜೆಪಿಯಲ್ಲಿ ಭಿನ್ನಮತ ಬಹಿರಂಗವಾಗಿದೆ.

ಬಿಜೆಪಿ ತಾಲೂಕು ಪದಾಧಿಕಾರಿಗಳು, ಮಾಸ್ತಿ ಶಕ್ತಿ ಕೇಂದ್ರದ ಬಿಜೆಪಿ ಮುಖಂಡರು ಹಾಗೂ ಮೂಲ ಬಿಜೆಪಿಗರು ಕಾರ್ಯಕ್ರಮದಿಂದ ದೂರ ಉಳಿಯುವ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಜೆಡಿಎಸ್ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಬೆಂಬಲಿ ಗರಿಗೆ ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಸಂಸದ ಮುನಿಸ್ವಾಮಿ ಮಣೆ ಹಾಕುತ್ತಿದ್ದಾರೆ ಎಂದು ಮೂಲ ಬಿಜೆಪಿಗರು ಆರೋಪಿಸಿದ್ದಾರೆ.

ಕೋಲಾರ: ಐಟಿ ಅಧಿಕಾರಿಗಳಿಂದ ಕ್ಯಾಷಿಯರ್‌ಗೆ ಕಪಾಳ ಮೋಕ್ಷ..!

ಬಿಜೆಪಿ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ಮಾಸ್ತಿ ಕ್ಷೇತ್ರದ ಜಿಪಂ ಸದಸ್ಯ ಎಚ್.ವಿ.ಶ್ರೀನಿವಾಸ್ ಮತ್ತು ಟೇಕಲ್‌ನ ಹುಣಸಿಕೋಟೆ ತಾ.ಪಂ.ಕ್ಷೇತ್ರದ ರಮೇಶ್‌ಗೌಡ ಭಾಗವಹಿಸುವ ಮೂಲಕ ಅಚ್ಚರಿಗೆ ಕಾರಣ ವಾದರು. ಬಹುತೇಕ ಈ ಕಾರ್ಯಕ್ರಮದಲ್ಲಿ ದಳದ ದಳಪತಿಗಳೆ ಕಾಣಿಸುತ್ತಿದ್ದರು.

ಕಾರ್ಯಕ್ರಮದಿಂದ ದೂರ ಉಳಿದವರು:

ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್.ಪ್ರಭಾಕರ್, ಹೂಡಿ ವಿಜಯಕುಮಾರ್, ತಾಲ್ಲೂಕು ಅಧ್ಯಕ್ಷ ಬಿ.ಆರ್.ವೆಂಕಟೇಶ್, ಪ್ರಧಾನಕಾರ್ಯ ದರ್ಶಿ ಕೆಸರಗೆರೆ ಗೋಪಾಲಗೌಡ, ರಾಮಸ್ವಾಮಿ, ಮಾಸ್ತಿ ಶಕ್ತಿ ಕೇಂದ್ರದ ಅಧ್ಯ ಕ್ಷ ಕೆ.ವಿ.ಗಿರಿ, ಜಿಲ್ಲಾ ಕಾರ್ಯದರ್ಶಿ ಸತೀಶ್‌ಅರಾಧ್ಯ, ಡಿ.ಕೆ.ಗೋಪಾಲ್, ತಾಲ್ಲೂಕು ರೈತ ಮೊರ್ಚಾ ಅಧ್ಯಕ್ಷ ವೆಂಕಟರಾಮೇಗೌಡ, ಅಶ್ವಥ ಇನ್ನೂ ಮುಂತಾದವರು ಸಭೆಯಿಂದ ದೂರು ಉಳಿದಿದ್ದರು. ಬಿಜೆಪಿಯಲ್ಲಿ ಬಣದ ರಾಜಕೀಯ ಪ್ರದರ್ಶನ ಆರಂಭವಾಗಿದ್ದು ಭಿನ್ನಮತ ಶಮನಕ್ಕೆ ಉಸ್ತುವಾರಿ ಶಿವಕುಮಾರ್ ಬೈಠಕ್ ನಡೆಸಲಿದ್ದಾರೆ ಎನ್ನಲಾಗಿದೆ.

ಕೋಲಾರ: ಮಾಲೂರಿನಲ್ಲಿ ದಿನಕ್ಕೊಬ್ಬ ತಹಸೀಲ್ದಾರ್..!

ಅಕ್ಟೋಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios