ಸಮ್ಮಿಶ್ರ ಸರ್ಕಾರವಿದ್ದಾಗ ಭಾಯ್-ಭಾಯ್ ಅಂತಿದ್ದ ಮುಖಂಡರೆಲ್ಲಾ ಈಲ ವಿಲನ್ ವಿಲನ್ ಎನ್ನುತ್ತಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬೆನ್ನಿಗೆ ಹೇಗೆ ಚೂರಿ ಹಾಕಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ಕೋಲಾರ(ಸೆ.23): ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಭಾಯಿ-ಭಾಯಿ ಎನ್ನುತ್ತಿದ್ದರು. ಆದರೀಗ ವಿಲನ್‌-ವಿಲನ್‌ ಎನ್ನುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿd ಅವರು, ಮಂಡ್ಯದಲ್ಲಿ ಹಿಂದೆ ಹೇಗೆ ಚುನಾವಣೆ ಮಾಡಿದರು ಎಂದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಜೆಡಿಎಸ್‌ನವರ ಬೆನ್ನಿಗೆ ಚೂರಿ ಹಾಕಿದನ್ನು ಜನ ನೋಡಿದ್ದಾರೆ ಎಂದು ಅಶೋಕ್‌ ದೂರಿದ್ದಾರೆ.

ಕಹಳೆಗೆ ಪಂಕ್ಚರ್‌ ಮಾಡಿದ್ದಾರೆ:

ಕಾಂಗ್ರೆಸ್‌ನಲ್ಲಿ ಹಳಬರು, ಹೊಸಬರು, ನೆನ್ನೆ ಬಂದವರು, ಹಿಂದೆ ಇದ್ದವರು ಎಂಬ ಗೊಂದಲಗಳು ಏರ್ಪಟ್ಟಿದ್ದು, ಮಾಜಿ ಡಿಸಿಎಂ ಪರಮೇಶ್ವರ್‌ ಅವರು ಪಕ್ಷದ ಸಭೆಗೆ ಹಾಜರಾಗಿಲ್ಲ. ಶನಿವಾರ ಹೊಸಕೋಟೆಯಲ್ಲಿ ಕಹಳೆ ಊದಿದಾಗ ಶಬ್ದವೇ ಬರಲಿಲ್ಲ. ಕಾರಣ ಪರಮೇಶ್ವರ್‌ ಅವರು ಕಹಳೆಗೆ ಪಂಕ್ಚರ್‌ ಮಾಡಿದ್ದಾರೆ ಎಂದು ಸಚಿವ ಆರ್‌. ಆಶೋಕ್‌ ವ್ಯಂಗ್ಯವಾಡಿದರು.

ನೆರೆ ಸಂತ್ರಸ್ತರಿಗೆ 5 ತಿಂಗಳ ಬಾಡಿಗೆ ಒಟ್ಟಿಗೆ ನೀಡಲು ನಿರ್ಧಾರ

ಕಹಳೆಯಲ್ಲ, ಪೀಪೀ ಊದೋ ಶಕ್ತಿಯೂ ಕಾಂಗ್ರೆಸ್‌ಗಿಲ್ಲ:

ರಾಷ್ಟ್ರಮಟ್ಟದಲ್ಲಿ ಪ್ರಬಲವಾದ ಹೈಕಮಾಂಡ್‌ ಇರುವ ಪಕ್ಷ ನಮ್ಮದಾಗಿದ್ದು, ನರೇಂದ್ರ ಮೋದಿಯವರಿಗೆ ಯಾರು ಎದುರಾಳಿಗಳೇ ಇಲ್ಲ. ಇದೇ ಕಾರಣದಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಜೀನಾಮೆ ನೀಡಿ ಹೋದರು. ಇದೀಗ ಕಾಂಗ್ರೆಸ್‌ ದಿಕ್ಕು- ದೆಸೆಯಿಲ್ಲ ಪಕ್ಷವಾಗಿದ್ದು, ರಣಕಹಳೆಯಲ್ಲ ಪೀಪಿ ಊದುವಂತಹ ಶಕ್ತಿಯೂ ಕಾಂಗ್ರೆಸ್‌ ನಾಯಕರಲ್ಲಿ ಇಲ್ಲವಾಗಿದೆ ಎಂದು ಕುಟುಕಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ