ಕೋಲಾರ(ನ.06): ಜಾತಿ ಪ್ರಮಾಣ ಪತ್ರ, ಆದಾಯ ಪತ್ರವಿಲ್ಲದೆ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿರುವ ಘಟೆ ಕೋಲಾರದಲ್ಲಿ ನಡೆದಿದೆ. ಜಾತಿ ಹಾಗೂ ಆದಾಯ ಪ್ರಮಾಣ ಪತ್ರವಿಲ್ಲದೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮನೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಶಾಲಾ‌ ಮಕ್ಕಳಿಗೆ ತಾಲೂಕು ಆಡಳಿತ ಜಾತಿ‌ ಮತ್ತು ಆದಾಯ ಪ್ರಮಾಣ ಪತ್ರ ನೀಡದ ಹಿನ್ನೆಲೆ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿಯುವಂತಾಗಿದೆ. ದಾಖಲೆಗಳು ಸಿಗದಿರುವುದರಿಂದ 53 ಜನ ವಿದ್ಯಾರ್ಥಿಗಳು ಶಾಲೆ‌ ಬಿಟ್ಟು ಮನೆಯಲ್ಲಿ ನಿಂತಿದ್ದಾರೆ.

ಕೊಡಗಿನ ಭೂಮಿಯೊಳಗೆ ನಿಗೂಢ ಸದ್ದು: ಬೆಚ್ಚಿದ ಜನತೆ

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಪಚ್ಚಗುಂಟ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಕಳೆದ 13 ದಿನಗಳಿಂದ ಮಕ್ಕಳು ಶಾಲೆಗೆ ಹೋಗಿಲ್ಲ.  ಅಲೆಮಾರಿ ಜನಾಂಗದ ಚೆನ್ನದಾಸರ್ ಉಪಜಾತಿ ಪ್ರಮಾಣ ಪತ್ರ ನೀಡದ ತಾಲೂಕು ಆಡಳಿತ ಬದಲಿಗೆ ಚೆನ್ನದಾಸರಿ ಜಾತಿ ಪ್ರಮಾಣ ಪತ್ರ ನೀಡುತ್ತಿದೆ.

ಚೆನ್ನದಾಸರ್ ಪರಿಶಿಷ್ಟ ಜಾತಿಗೆ ಸೇರಿದ್ರೆ ಚೆನ್ನದಾಸರಿ ಜನರಲ್ ಕ್ಯಾಟಗರಿಗೆ ಸೇರುತ್ತದೆ. ಜಾತಿ ಪ್ರಮಾಣ ಪತ್ರ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮುಂದೆ ಯಾವುದೇ ಸರ್ಕಾರಿ ಸವಲತ್ತು ಸಿಗುವುದಿಲ್ಲ. ಹಾಗಾಗಿ ಓದಿ ಏನು ಪ್ರಯೋಜನವೆಂದು ಮಕ್ಕಳು ಶಾಲೆ ತೊರೆದಿದ್ದಾರೆ.

ಕೋಲಾರ: ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ತೆಲುಗಿನ ಖ್ಯಾತ ನಟ