ಕೋಲಾರ: ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ತೆಲುಗಿನ ಖ್ಯಾತ ನಟ

ಸರ್ಕಾರ ರೈತರ, ಕಾರ್ಮಿಕರ ಸಮಸ್ಯೆ ಬಗೆಹರಿಸಲಿ: ಪವನ್‌ ಕಲ್ಯಾಣ್‌| ಕನ್ನಡದಲ್ಲೇ ಮಾತು ಆರಂಭಿಸಿದ ತೆಲುಗು ನಟ| ಮುಂದಿನ ಬಾರಿ ಕನ್ನಡದಲ್ಲೇ ಮಾತಾಡುವೆ ಎಂದು ಭರವಸೆ|ರೈತರ ಸಹಾಯಕ್ಕೆ ಬಾರದ ಸರ್ಕಾರಗಳಿಂದ ಪ್ರಯೋಜನವಿಲ್ಲ| ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕಾದರೆ ವ್ಯವಸಾಯದಿಂದ ಮಾತ್ರ ಸಾಧ್ಯ|

Telugu Actor Pawan Kalyan Said to Kannada Rajyotsava Greetings

ಕೋಲಾರ[ನ.4]: ಆಳುವ ಸರ್ಕಾರಗಳು ರೈತರ, ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಇರಬೇಕು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಯೋಚನೆ ಮಾಡುವ ಸರ್ಕಾರಗಳಿಗೆ ಬೆಂಬಲ ನೀಡಬೇಕು ಎಂದು ಖ್ಯಾತ ತೆಲುಗು ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್‌ ಕಲ್ಯಾಣ್‌ ಅವರು ತಿಳಿಸಿದ್ದಾರೆ.

ಭಾನುವಾರ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯ ಶ್ರೀರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲಸ್ವಾಮಿಯ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಹಾಯಕ್ಕೆ ಬಾರದ ಸರ್ಕಾರಗಳಿಂದ ಪ್ರಯೋಜನವಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕಾದರೆ ವ್ಯವಸಾಯದಿಂದ ಮಾತ್ರ ಸಾಧ್ಯ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಭಾಷಣ ಆರಂಭಿಸಿದ ಅವರು ಮುಂದಿನ ದಿನಗಳಲ್ಲಿ ಕನ್ನಡವನ್ನು ಕಲಿತು ಕರ್ನಾಟಕದಲ್ಲಿ ಭಾಷಣ ಮಾಡುವುದಾಗಿ ಭರವಸೆ ನೀಡಿದರು.

ಪವನ್‌ ಕಲ್ಯಾಣ್‌ ರವರ ಭಾಷಣಕ್ಕೆ ಮೊದಲು ರಮೇಶ್‌ ಕುಮಾರ್‌ ಹಾಗೂ ಗೋಪಾಲಗೌಡರು ಭಾಷಣ ಮಡಲು ಮುಂದಾದಾಗ ಪವನ್‌ ಕುಮಾರ್‌ ಅಭಿಮಾನಿಗಳು ಮೊದಲು ಪವನ್‌ಕ ಲ್ಯಾಣ್‌ ರವರೇ ಮಾತನಾಡಬೇಕೆಂದು ಗದ್ದಲ ಮಾಡಿದರು. ಆದ ಪವನ್‌ ಕಲ್ಯಾಣ್‌ ಅವರೇ ಮೈಕ್‌ ಹಿಡಿದು ದೇಶದ ಅಭಿವೃದ್ಧಿಗಾಗಿ ರಾಜಕಾರಣವನ್ನು ಮಾಡುತ್ತಿರುವ ಇಬ್ಬರು ಹಿರಿಯ ರಾಜಕಾರಣಿಗಳ ಮಾತನ್ನು ಕೇಳಬೇಕು ಎಂದು ಮನವಿ ಮಾಡಿದರು. ರಮೇಶ್‌ಕುಮಾರ್‌ ಭಾಷಣ ಮುಗಿಯುತ್ತಿದ್ದಂತೆ ಎದ್ದು ನಿಂತ ಪವನ್‌ ಕಲ್ಯಾಣ್‌ ಅವರ ಪಾದಗಳಿಗೆ ನಮಸ್ಕರಿಸಿ, ನಿಮ್ಮಂತಹ ಹಿರಿಯರ ಆಶಿರ್ವಾದ ನಮಗೆ ಬೇಕು. ಸದಾ ನಿಮ್ಮ ಜೊತೆ ನಾನು ಇರುವುದಾಗಿ ತಿಳಿಸಿದರು.

ಥಿಯೇಟರ್‌ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲಲು ಇಷ್ಟವಿಲ್ಲ: ಪವನ್‌ ಕಲ್ಯಾಣ್‌

ತುಮಕೂರು ಜಿಲ್ಲೆ ಪಟ್ಟನಾಯಕನಹಳ್ಳಿಯ ಸ್ಪಟಿಕಾಪುರ ಮಠದ ಪರಮಪೂಜ್ಯ ಶ್ರೀ ನಂಜಾವಧೂತ ಸ್ವಾಮೀಜಿ ರವರು ಆಶೀರ್ವಚನ ನೀಡಿದರು.
 

Latest Videos
Follow Us:
Download App:
  • android
  • ios