Asianet Suvarna News Asianet Suvarna News

ಸಿಸಿಟಿವಿಯಲ್ಲಿ ಸೆರೆಯಾಯ್ತು ಅಗೋಚರ ಬೆಳಕು: ಜನರಲ್ಲಿ ಆತಂಕ

ಸಿಸಿ ಕ್ಯಾಮರಾದಲ್ಲಿ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಬೆಳಕಿನ ಆಕೃತಿಯೊಂದು ಓಡಾಡಿದ ದೃಶ್ಯ ಸೆರೆಯಾಗಿದ್ದು, ಅದು ಒಂದು ಬಟ್ಟಲಿನ ಆಕೃತಿಯು ಉರಿಯುವ ಬೆಳಕಿನಂತೆ ಮೇಲ್ಮುಖವಾಗಿ ಚಲಿಸಿದೆ. ದೃಶ್ಯ ನೋಡಿದ ಜನ ಆತಂಕಕ್ಕೊಳಗಾಗಿದ್ದಾರೆ.

unknown light captured in cctv people feared thinking it is negative energy
Author
Bangalore, First Published Nov 11, 2019, 12:36 PM IST

ಮಡಿಕೇರಿ(ನ.11): ಅನುಮಾನ ಮೂಡಿಸುವಂತಹ ಅಗೋಚರ ಶಕ್ತಿಯ ಬೆಳಕೊಂದು ಶನಿವಾರ ರಾತ್ರಿ ಗೋಚರವಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ಮೂಲಕ ಜನರಲ್ಲಿ ಆತಂಕವನ್ನು ಸೃಷ್ಟಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದೆ.

ನಗರದ ಕೊಯಮತ್ತೂರು ಆಗ್ರೋ ಡೀಸೆಲ್ಸ್ ಗೋಡೌನ್‌ನ ಸಿಸಿ ಕ್ಯಾಮರಾದಲ್ಲಿ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಬೆಳಕಿನ ಆಕೃತಿಯೊಂದು ಓಡಾಡಿದ ದೃಶ್ಯ ಸೆರೆಯಾಗಿದ್ದು, ಅದು ಒಂದು ಬಟ್ಟಲಿನ ಆಕೃತಿಯು ಉರಿಯುವ ಬೆಳಕಿನಂತೆ ಮೇಲ್ಮುಖವಾಗಿ ಚಲಿಸಿದೆ.

ಕೊಡಗಿನಲ್ಲಿ ಅರೆಬಿಕಾ ಕಾಫಿ ಕೊಯ್ಲು ಆರಂಭ

ನೆಲದಿಂದ ಮೇಲ್ಭಾಗದ ಗೋಡೆಯವರೆಗೆ ಸಾಗಿ ನಿಂತ ಬೆಳಕಿನ ಆಕೃತಿಯ ದೃಶ್ಯವನ್ನು ಕಂಡ ಕೆಲವರು ಅಗೋಚರ ಶಕ್ತಿಯೇ ಬೆಳಕಿನ ಮಾದರಿಯಲ್ಲಿ ಕಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾತ್ರಿ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಕಂಡು ಗೋಡೌನ್ ಸಿಬ್ಬಂದಿ ಭಯಭೀತರಾಗಿದ್ದು, ಅದು ನೆಗೆಟಿವ್ ಎನಜಿ ಆಗಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. 

ಈರುಳ್ಳಿ: ಗದಗದಲ್ಲಿ ಕ್ವಿಂ.ಗೆ 200, ಮಂಗಳೂರಲ್ಲಿ ಕೆಜಿಗೆ 70..!

Follow Us:
Download App:
  • android
  • ios