ಕೊಡಗು(ನ.15): ಕೊಡಗಿನಲ್ಲಿ ಕಾಡಾನೆ ದಾಳಿ ನಡೆಯುತ್ತಲೇ ಇರುತ್ತದೆ. ಇದೀಗ ಹುಲಿ ದಾಳಿಯೂ ಆರಂಭವಾಗಿದ್ದು, ದನದ ಕೊಟ್ಟಿಗೆವರೆಗೂ ಬಂದು ಹಸುವನ್ನು ಎಳೆದೊಯ್ದಿರುವ ಘಟನೆ ನಡೆದಿದೆ.

ಕೊಡಗು ಜಿಲ್ಲೆಯಲ್ಲಿ ವ್ಯಾಘ್ರ ದಾಳಿ ಮುಂದುವರೆದಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆಯೇ ಹುಲಿ ದಾಳಿ ನಡೆಸಿದೆ. ಹಸುವನ್ನ ಕೊಟ್ಟಿಗೆಯಿಂದ 100 ಮೀಟರ್ ಹುಲಿ ಎಳೆದೊಯ್ದಿದ್ದು, ಪರಕಟಗೇರಿ ಗ್ರಾಮದಲ್ಲಿ ಮುಂಜಾನೆ ಘಟನೆ ನಡೆದಿದೆ.

ಕೊಡಗು: ರಸ್ತೆ ದಾಟುತ್ತಿದ್ದ ವೃದ್ಧೆ ಮೇಲೆ ಹರಿದ ಬಸ್, ಸ್ಥಳದಲ್ಲೇ ಸಾವು

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪರಕಟಗೇರಿಯಲ್ಲಿ ಘಟನ ಸಂಭವಿಸಿದ್ದು, ಗ್ರಾಮದ ರೈತ ಕೆಳಕಂಡ ಲವ ಎಂಬವರಿಗೆ ಸೇರಿದ ಹಸುವಿನ ಮೇಲೆ ದಾಳಿಯಾಗಿದೆ. ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು, ಹಸು ಮಾಲೀಕನಿಗೆ ಪರಿಹಾರ ನೀಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಹಾರದ ಭರವಸೆ ನೀಡಿದ್ದಾರೆ.

ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..