Asianet Suvarna News Asianet Suvarna News

ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾರ್ಥಿಯ ಕೈ ಮುರಿತ : ಕೋಚ್ ವಿರುದ್ದ ಆರೋಪ

  • ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾರ್ಥಿಯ ಕೈ ಮುರಿದಿದ್ದು ಇಲ್ಲಿ ಕೋಚ್ ವಿರುದ್ದ ಪೋಷಕರ ಆರೋಪ
  • ಕೊಡಗಿನ ಪೊನ್ನಂಪೇಟೆಯಲ್ಲಿರುವ ಕ್ರೀಡಾ ಶಾಲೆಯಲ್ಲಿ ಈ ಘಟನೆ
Karnataka Decision on 2nd Phase of School Reopening on Monday snr
Author
Bengaluru, First Published Sep 20, 2021, 11:40 AM IST
  • Facebook
  • Twitter
  • Whatsapp

ಕೊಡಗು (ಸೆ.20):  ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾರ್ಥಿಯ ಕೈ ಮುರಿದಿದ್ದು ಇಲ್ಲಿ ಕೋಚ್ ವಿರುದ್ದ ಪೋಷಕರು ಆರೋಪ ಮಾಡಿದ್ದಾರೆ. 

ಕೊಡಗಿನ ಪೊನ್ನಂಪೇಟೆಯಲ್ಲಿರುವ ಕ್ರೀಡಾ ಶಾಲೆಯಲ್ಲಿ ಈ ಘಟನೆಯಾಗಿದ್ದು, ಈ ಘಟನೆಗೆ ಇಲ್ಲಿನ ಕೋಚ್ ಕಾರಣ ಎನ್ನಲಾಗಿದೆ.  ವಿದ್ಯಾರ್ಥಿಗೆ ಹಾಕಿ ಸ್ಟಿಕ್‌ನಿಂದ ಥಳಿಸಿ ಈ ರೀತಿ ಕೈ ಮುರಿದಿದೆ ಎನ್ನಲಾಗಿದೆ. 

ಹಾಕಿ ಕೋಚ್  ಆಗಿರುವ ಬುಟ್ಟಿಯಂಡ ಚಂಗಪ್ಪ ಎಂಬುವವರು ಇಲ್ಲಿನ 13 ವರ್ಷದ ವಿದ್ಯಾರ್ಥಿಗೆ ಥಳಿಸಿ ಕಯ ಮುರಿದಿದ್ದಾರೆ ಎನ್ನಲಾಗಿದೆ. 

ಬಸ್‌ನಲ್ಲಿ ನಿತ್ಯ ನೇತಾಡಿಕೊಂಡು ಹೋಗ್ತಾರೆ ವಿದ್ಯಾರ್ಥಿಗಳು, ಅಧಿಕಾರಿಗಳಿಗೆ ಜಾಣ ಕುರುಡು!

ಸದ್ಯ ವಿದ್ಯಾರ್ಥಿಗೆ ಮಡಿಕೇರಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಕೋಚ್ ಬುಟ್ಟಿಯಂಡ ಚಂಗಪ್ಪ ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆ ಅಲ್ಲ. ವಿದ್ಯಾರ್ಥಿ ತರಬೇತಿಗೆ ಬಾರದೆ ಸತಾಯಿಸುತ್ತಿದ್ದ. ಆಕಸ್ಮಿಕವಾಗಿ ನಡೆದ ಘಟನೆ ಎಂದು ಸ್ಪಷ್ಟನೆ ನೀಡಿದ್ದಾರೆ.  

Follow Us:
Download App:
  • android
  • ios