ಮಡಿಕೇರಿ(ಅ.31): ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿ ಭಾರಿ ಸದ್ದು ಮಾಡಿದ್ದ ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿ​ಸಿದಂತೆ ತನಿಖೆ ನಡೆಸಿದ ಸಿಬಿಐ, ಬುಧವಾರ ತನ್ನ ಅಂತಿಮ ವರದಿ ಸಲ್ಲಿಸಿದ್ದಾರೆ.

ನಗರಕ್ಕೆ ಆಗಮಿಸಿದ ಚೆನ್ನೈ ವಿಭಾಗದ ಸಿಬಿಐ ಡಿವೈಎಸ್‌ಪಿ ರವಿ, ಸಿಬಿಐ ವಕೀಲ ಸುಬೋಧ್‌ ಹಾಗೂ ಇಬ್ಬರು ಪೊಲೀಸರು ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾ​ಧೀಶ ವಿಜಯಕುಮಾರ್‌ ಅವರಿಗೆ ತೆರೆದ ನ್ಯಾಯಾಲಯದಲ್ಲಿ 262 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.

ಮಡಿಕೇರಿ: ಕಕ್ಕಬ್ಬೆಯಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ವಿಶೇಷ ಪೂಜೆ

2016ರ ಜು.7ರಂದು ಮಡಿಕೇರಿಯ ವಿನಾಯಕ ಲಾಡ್ಜ್‌ನ 315 ಸಂಖ್ಯೆಯ ಕೊಠಡಿಯಲ್ಲಿ ಎಂ.ಕೆ. ಗಣಪತಿ ನಿಗೂಢವಾಗಿ ಮೃತಪಟ್ಟಿದ್ದರು. ಸಾವಿಗೂ ಮುನ್ನ ತನ್ನ ಸಾವಿಗೆ ಸಚಿವ ಕೆ.ಜೆ. ಜಾಜ್‌ರ್‍ ಹಾಗೂ ಹಿರಿಯ ಪೊಲೀಸ್‌ ಅಧಿ​ಕಾರಿಗಳಾದ ಎ.ಎಂ. ಪ್ರಸಾದ್‌, ಪ್ರಣವ್‌ ಮೊಹಂತಿ ಕಾರಣ ಎಂದು ಮಾಧ್ಯಮದ ಎದುರು ಹೇಳಿಕೆ ನೀಡಿದ್ದರು. ಈ ವಿಚಾರ ರಾಷ್ಟಾ್ರದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.

ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು 2016ರ ಜು.8ರಂದು ಸಿಐಡಿಗೆ ವಹಿಸಿತ್ತು. ಜು.18ರಂದು ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯದಿಂದ ಸಚಿವ ಜಾಜ್‌ರ್‍ ಹಾಗೂ ಇಬ್ಬರು ಪೊಲೀಸ್‌ ಅಧಿಕಾರಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಎಫ್‌ಐಆರ್‌ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಜಾಜ್‌ರ್‍ ರಾಜಿನಾಮೆ ನೀಡಿದ್ದರು.

ಸಿದ್ರಾಮಯ್ಯ ಲೋಕಾಯುಕ್ತವನ್ನು ಕೊಂದು ಹಾಕಿದ್ರು: ಶೋಭಾ

ಸಿಐಡಿ ತಂಡ ಪೂರ್ಣ ತನಿಖೆಯ ನಂತರ 2016ರ ಸೆ.17ರಂದು ಮಡಿಕೇರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ‘ಬಿ’ ವರದಿಯನ್ನು ನೀಡಿತ್ತು. ಇದರಿಂದ ಸಚಿವ ಕೆ.ಜೆ. ಜಾಜ್‌ರ್‍ ಹಾಗೂ ಇಬ್ಬರು ಹಿರಿಯ ಪೊಲೀಸ್‌ ಅಧಿ​ಕಾರಿಗಳಿಗೆ ಕ್ಲೀನ್‌ ಚಿಟ್‌ ದೊರೆತಿತ್ತು. ಇದರಿಂದ ಅಸಮಾಧಾನಗೊಂಡ ಗಣಪತಿ ಕುಟುಂಬಸ್ಥರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ವೇಳೆ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿತ್ತು. ನಂತರ ಗಣಪತಿ ಕುಟುಂಬಸ್ಥರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಸುಪ್ರೀ ಕೋರ್ಟ್‌ 2017 ಸೆ.5ರಂದು ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಅದರಂತೆ ಹಂತ ಹಂತವಾಗಿ ತನಿಖೆ ನಡೆಸಿದ ಸಿಬಿಐ ತಂಡ ಅಂತಿಮವಾಗಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.