ಕೊಡಗು(ಅ.23): ಮೂತ್ರಪಿಂಡದಲ್ಲಿ ಕಲ್ಲಾಗುವುದು ಸಮಾನ್ಯ ಆರೋಗ್ಯ ಸಮಸ್ಯೆ. ಇದನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಲಾಗುತ್ತದೆ. ಆದರೆ ಕೊಡಗಿನಲ್ಲಿ ಮೂತ್ರಪಿಂಡದಲ್ಲಿ ಕಲ್ಲು ಎಂದು ಆಸ್ಪತ್ರೆ ಸೇರಿದ ವ್ಯಕ್ತಿಗೆ ಆಘಾತ ಕಾದಿತ್ತು.

ವಿರಾಜಪೇಟೆಯ ಕಡಂಗ ಗ್ರಾಮದ ರಫೀಕ್(37 ) ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಮೂತ್ರಪಿಂಡದಲ್ಲಿದ್ದ ಕಲ್ಲಿನಿಂದಾಗಿ ರಪೀಕ್ ಹೊಟ್ಟೆ ನೋವು ಸಹಿಸಲಾಗದೆ ವೈದ್ಯರಿಗೆ ತೋರಿಸಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆಂದು ಬಂದಿದ್ದಾರೆ.

ಚಿಕ್ಕಮಗಳೂರು: 3 ಕರುಗಳಿಗೆ ಜನ್ಮ ನೀಡಿದ ಹಸು...

ಭಾರೀ ಗಾತ್ರದ ಕಲ್ಲು:

ವೈದ್ಯ ಡಾ ವಿಶ್ವನಾಥ ಸಿಂಪಿ ಮೂತ್ರಪಿಂಡದಿಂದ ದಾಖಲೆ ಗಾತ್ರದ ಕಲ್ಲನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊತೆಗೆದಿದ್ದಾರೆ. ಸುಮಾರು 800 ಗ್ರಾಂ ತೂಕದ ದಾಖಲೆಯ ಕಲ್ಲನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.

800 ಗ್ರಾಂ ತೂಕದ ಕಲ್ಲು:

ಮೂತ್ರಪಿಂಡದಲ್ಲಿ ಸಣ್ಣ ಕಲ್ಲು ಇರಬಹದು ಎಂದು ರಫೀಕ್‌ ಶಸ್ತ್ರಚಿಕಿತ್ಸೆಗೂ ಮುನ್ನ ಅಂದಾಜಿಸಿದ್ದರು. ಶಸ್ತ್ರ ಚಿಕಿತ್ಸೆ ಸಂದರ್ಭ  800 ಗ್ರಾಂ ತೂಕದ ದೊಡ್ಡ ಕಲ್ಲು ಪತ್ತೆಯಾಗಿದೆ.ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ‌ ಕಲ್ಲನ್ನು ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸಕ ವಿಶ್ವನಾಥ ಸಿಂಪಿ ಮತ್ತು ಅರಿವಳಿಕೆ ತಜ್ಞ ವೈದ್ಯ ಡಾ ಸುರೇಶ್ ತಂಡ ಚಿಕಿತ್ಸೆ ನಡೆಸಿತ್ತು. ಆಪರೇಷನ್‌ಗೊಳಗಾದ ರಫೀಕ್ ಸದ್ಯ ಆರಾಮವಾಗಿದ್ದಾರೆ.

ಮಂಗಳೂರು: ಶ್ರೀರಾಮ ಸೇನೆ ಸದಸ್ಯರಿಂದ ಆಟೋ ಚಾಲಕನ ಮೇಲೆ ತಲವಾರು ದಾಳಿ...