MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • kitchen tips : ಹುಳಿಯಾದ ಮೊಸರನ್ನು ಎಸೆಯಬೇಡಿ, ಈ ಐದು ಕೆಲ್ಸಗಳಿಗೆ ಬಳಸಿ ರಿಸಲ್ಟ್‌ ನೋಡಿ

kitchen tips : ಹುಳಿಯಾದ ಮೊಸರನ್ನು ಎಸೆಯಬೇಡಿ, ಈ ಐದು ಕೆಲ್ಸಗಳಿಗೆ ಬಳಸಿ ರಿಸಲ್ಟ್‌ ನೋಡಿ

kitchen tips : ಮೊಸರು ಹುಳಿಯಾದ್ರೆ ಅನೇಕರು ಅದನ್ನು ಬಳಕೆ ಮಾಡ್ದೆ ಎಸೆಯುತ್ತಾರೆ. ನೀವೂ ಹುಳಿ ಮೊಸರನ್ನು ಎಸೆಯುತ್ತಿದ್ದರೆ ಇನ್ಮುಂದೆ ಈ ತಪ್ಪು ಮಾಡ್ಬೇಡಿ. ಇದನ್ನು ಹೇಗೆ ಬಳಸೋದು ಎನ್ನುವ ಮಾಹಿತಿ ಇಲ್ಲಿದೆ.

1 Min read
Author : Roopa Hegde
Published : Sep 26 2026, 11:32 AM IST
Share this Photo Gallery
  • FB
  • TW
  • Linkdin
  • Whatsapp
15
ಇಡ್ಲಿ, ಢೋಕ್ಳಾ ಸೇರಿದಂತೆ ಕೆಲ ತಿಂಡಿ ತಯಾರಿಕೆ
Image Credit : Asianet News

ಇಡ್ಲಿ, ಢೋಕ್ಳಾ ಸೇರಿದಂತೆ ಕೆಲ ತಿಂಡಿ ತಯಾರಿಕೆ

ಹುಳಿಯಾದ ಮೊಸರನ್ನುಕೆಲ ತಿಂಡಿಗಳಿಗೆ ನೀವು ಬಳಸಬಹುದು. ನೀವು ಇಡ್ಲಿ, ದೋಸೆ, ಢೋಕ್ಳಾ ಅಥವಾ ಉತ್ತಪ್ಪದ ಹಿಟ್ಟಿಗೆ ಸ್ವಲ್ಪ ಹುಳಿಯಾದ ಮೊಸರನ್ನು ಸೇರಿಸಿದರೆ ಹಿಟ್ಟು ಚೆನ್ನಾಗಿ ಹುದುಗಲು ಸಹಾಯವಾಗುತ್ತದೆ. ಇದರಿಂದ ತಿಂಡಿಗಳು ಮೃದು ಮತ್ತು ರುಚಿಯಾಗುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪನೀರ್
Image Credit : Asianet News

ಪನೀರ್

ಪನೀರ್ ಟಿಕ್ಕಾ, ಸೋಯಾ ಚಾಪ್ ಸೇರಿದಂತೆ ವಿವಿಧ ಪದಾರ್ಥಗಳನ್ನು ಮಸಾಲೆಯಲ್ಲಿ ನೆನೆಸಿಡುವಾಗ ಹುಳಿಯಾದ ಮೊಸರನ್ನು ಬಳಸಬಹುದು. ಇದು ಪನೀರ್ನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಗ್ರೇವಿ ತಯಾರಿಸುವಾಗಲೂ ಟೊಮೆಟೊದ ಬದಲಿಗೆ ಅಥವಾ ಅದರ ಜೊತೆಗೆ ಸ್ವಲ್ಪ ಚೆನ್ನಾಗಿ ಕಲಸಿದ ಮೊಸರನ್ನು ಬಳಸಬಹುದು.

Related Articles

Related image1
ಸಕ್ಕರೆ ಡಬ್ಬದಲ್ಲಿ ಈ ವಸ್ತು ಇಟ್ಟರೆ ಇರುವೆ ಬರೋದೇ ಇಲ್ಲ, ಇರುವೆ ಓಡಿಸೋಕೆ ಐಡಿಯಾ
Related image2
Immunity Booster: 'ಸೂಪರ್ ಮ್ಯಾನ್-ಸೂಪರ್ ವಿಮೆನ್' ಆಗುವ ಆಯುರ್ವೇದ ಗಿಡಮೂಲಿಕೆಗಳು ಇವು!
35
ಕೂದಲ ಸೌಂದರ್ಯ
Image Credit : Asianet News

ಕೂದಲ ಸೌಂದರ್ಯ

ಹುಳಿಯಾದ ಮೊಸರನ್ನು ಕೂದಲಿನ ಆರೈಕೆಗೂ ಬಳಸಬಹುದು. ಒಣ ಮತ್ತು ನಿರ್ಜೀವ ಕೂದಲಿಗೆ ಮೊಸರನ್ನು ಹಚ್ಚಿ ಸ್ವಲ್ಪ ಸಮಯದ ಬಳಿಕ ತೊಳೆಯಬಹುದು. ಮೊಸರಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಹೇರ್ ಪ್ಯಾಕ್ನಂತೆ ಬಳಸಬಹುದು.

45
ಫೇಸ್ ಪ್ಯಾಕ್
Image Credit : Asianet News

ಫೇಸ್ ಪ್ಯಾಕ್

ಚರ್ಮದ ಮೇಲಿನ ಸತ್ತ ಕೋಶಗಳನ್ನು ತೆಗೆದುಹಾಕಲು ಹುಳಿಯಾದ ಮೊಸರನ್ನು ಕೆಲವರು ಫೇಸ್ ಪ್ಯಾಕ್ನಲ್ಲಿ ಬಳಸುತ್ತಾರೆ. ಇದಕ್ಕಾಗಿ ಮೊಸರಿಗೆ ಸ್ವಲ್ಪ ಕಡಲೆಹಿಟ್ಟು, ಅರಿಶಿನ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ತಯಾರಿಸಬೇಕು. ಮುಖಕ್ಕೆ ಹಚ್ಚಿ ಕೆಲವು ನಿಮಿಷಗಳ ಬಳಿಕ ನಿಧಾನವಾಗಿ ತೊಳೆಯಿರಿ. ಸೂಕ್ಷ್ಮ ಚರ್ಮವಿದ್ದರೆ ಮೊದಲು ಸಣ್ಣ ಭಾಗದಲ್ಲಿ ಪರೀಕ್ಷಿಸಿ.

55
ತಾಮ್ರ ಮತ್ತು ಹಿತ್ತಾಳೆಯ ಪಾತ್ರೆ ಕ್ಲೀನಿಂಗ್
Image Credit : Asianet News

ತಾಮ್ರ ಮತ್ತು ಹಿತ್ತಾಳೆಯ ಪಾತ್ರೆ ಕ್ಲೀನಿಂಗ್

ಮನೆಯಲ್ಲಿ ಇರುವ ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳು ಕಪ್ಪಾಗಿದ್ದರೆ, ಹುಳಿಯಾದ ಮೊಸರಿಗೆ ಸ್ವಲ್ಪ ಉಪ್ಪು ಅಥವಾ ಹಿಟ್ಟು ಸೇರಿಸಿ ಪೇಸ್ಟ್ ತಯಾರಿಸಬಹುದು. ಈ ಪೇಸ್ಟ್ನ್ನು ಪಾತ್ರೆಯ ಮೇಲೆ ಹಚ್ಚಿ ನಿಧಾನವಾಗಿ ಉಜ್ಜಿ, ನಂತರ ಸ್ವಚ್ಛ ನೀರಿನಿಂದ ತೊಳೆಯಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegde ಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಅಡುಗೆಮನೆ ಸಲಹೆಗಳು
ಆಹಾರ
 

Latest Videos
Recommended Stories
Recommended image1
Kitchen Hacks: ನೆಲದ ಮೇಲೆ ಎಣ್ಣೆ ಬಿದ್ರೆ ತೆಗೆಯೋದು ಹೇಗೆ? ಏನಾದ್ರೂ ಚೆಲ್ಲಿದ್ರೆ ಕ್ಲೀನ್​​ ಮಾಡೋದು ಹೇಗೆ
Recommended image2
Immunity Booster: 'ಸೂಪರ್ ಮ್ಯಾನ್-ಸೂಪರ್ ವಿಮೆನ್' ಆಗುವ ಆಯುರ್ವೇದ ಗಿಡಮೂಲಿಕೆಗಳು ಇವು!
Recommended image3
Cardamom Water: ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿದರೆ ಏನಾಗುತ್ತದೆ?
Related Stories
Recommended image1
ಸಕ್ಕರೆ ಡಬ್ಬದಲ್ಲಿ ಈ ವಸ್ತು ಇಟ್ಟರೆ ಇರುವೆ ಬರೋದೇ ಇಲ್ಲ, ಇರುವೆ ಓಡಿಸೋಕೆ ಐಡಿಯಾ
Recommended image2
Immunity Booster: 'ಸೂಪರ್ ಮ್ಯಾನ್-ಸೂಪರ್ ವಿಮೆನ್' ಆಗುವ ಆಯುರ್ವೇದ ಗಿಡಮೂಲಿಕೆಗಳು ಇವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved