ತುಮಕೂರು (ಏ.07):  ಹೊರ ರಾಜ್ಯವಾದ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಏಪ್ರಿಲ್‌ 8ರಂದು ನಡೆಯಲಿರುವ ಮಂಡಲ್‌ ಪರಿಷತ್‌ ಮತ್ತು ಜಿಲ್ಲಾ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿಮದ್ಯ ವಹಿವಾಟು ನಿಷೇಧಿಸಲಾಗಿದೆ.

 ಚುನಾವಣಾ ದಿನಾಂಕದ 48 ಗಂಟೆಗಳ ಮೊದಲು ಅಂದರೆ ಏಪ್ರಿಲ್‌ 6ರ ಸಂಜೆ 5 ಗಂಟೆಯಿಂದ ಏ. 8ರ ಸಂಜೆ 5 ಗಂಟೆಯವರೆಗೆ ಮತ್ತು ಮತ ಎಣಿಕೆ ನಡೆಯುವ 10ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಟೆಯವರೆಗೆ ನಿಷೇಧಿಸಲಾಗಿದೆ.

ಮದ್ಯದ ಬಾಟಲಿಗೆ ವಿಷ ಬೆರೆಸಿ ಮಗ : ತಂದೆ ಕೊಲ್ಲಲು ಮಾಡಿದ ಕೆಟ್ಟ ಪ್ಲಾನ್ ..

 ಅನಂತಪುರಂ ಜಿಲ್ಲೆಗೆ ಹೊಂದಿಕೊಂಡಿರುವ ಕರ್ನಾಟಕ ಗಡಿಭಾಗದ ತುಮಕೂರು ಜಿಲ್ಲೆಯ 5 ಕಿ.ಮೀ ತ್ರಿಜ್ಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿಗಳ ವಹಿವಾಟು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೈ.ಎಸ್‌.ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.