ಮದ್ಯದ ಬಾಟಲಿಗೆ ವಿಷ ಬೆರೆಸಿ ಮಗ : ತಂದೆ ಕೊಲ್ಲಲು ಮಾಡಿದ ಕೆಟ್ಟ ಪ್ಲಾನ್
ಆಸ್ತಿಗಾಗಿ ಸ್ವಂತ ಮಗನೇ ತಂದೆಯನ್ನು ಕೊಂದಿದ್ದಾನೆ. ಮದ್ಯದ ಬಾಟಲಿಯಲ್ಲಿ ವಿಷ ಬೆರೆಸಿ ತಂದೆಯ ಹತ್ಯೆ ಮಾಡಿದ್ದಾರೆ.
ಮಧುಗಿರಿ (ಏ.03): ಆಸ್ತಿ ವಿಚಾರವಾಗಿ ಜನ್ಮ ನೀಡಿದ ತನ್ನ ತಂದೆಗೆ ಮದ್ಯದ ಬಾಟಲಿಗೆ ವಿಷ ಬೇರಸಿ ಮಗನೇ ಕೊಲೆ ಮಾಡಿರುವ ಧಾರುಣ ಘಟನೆ ಮಧುಗಿರಿ ಕಸಬಾ ಸಿದ್ದಾಪುರ ಗೇಟ್‌ನಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮದ ಲೇ.ಗುಂಡೇಗೌಡರ ಮಗ ಮಂಜುನಾಥ(60) ತನ್ನ ಮಗನಿಂದಲೇ ಕೊಲೆಯಾದ ದುರ್ದೈವಿ. ಈತನ ಮಗ ನವೀನ್ ಕುಮಾರ್(35) ಎಂಬಾತನೇ ತನ್ನ ತಂದೆಗೆ ಮದ್ಯದ ಬಾಟಲಿಗೆ ವಿಷ ಬೇರಸಿ ಕೊಲೆ ಮಾಡಿ ಈಗ ಕಂಬಿ ಏಣಿಸುತ್ತಿರುವ ಆರೋಪಿ. ಇವರಿಬ್ಬರ ನಡುವೆ ಆಸ್ತಿ ವಿಚಾರವಾಗಿ ಆಗಿಂದಾಗ್ಗೆ ಗಲಾಟೆ ನಡೆಯುತ್ತಿತ್ತು. ಮಾ.2ರಂದು ಈ ಘಟನೆ ನಡೆದಿದ್ದು, ಗ್ರಾಪಂ ಅಧ್ಯಕ್ಷ ವೀರಣ್ಣ ಎಂಬಾತನ ಜಮೀನಿನಲ್ಲಿ ತಂದೆ ಮಂಜುನಾಥ್‌ಗೆ ಪುತ್ರ ನವೀನ್ ಕುಮಾರ್ ಮದ್ಯಪಾನ ಮಾಡಿಸಿದ್ದಾನೆ. ಈ ವೇಳೆ ಮದ್ಯದ ಬಾಟಲಿಯಲ್ಲಿ ವಿಷ ಬೇರಸಿ ಕುಡಿಯಲು ಕೊಟ್ಟಿದ್ದಾನೆ.
ಮಂಗಳೂರು; ಅನ್ಯಕೋಮಿನ ಯುವಕ-ಯುವತಿ ಚಲಿಸುತ್ತಿದ್ದ ಬಸ್ ಮೇಲೆ ಸಂಘಟನೆ ದಾಳಿ ..
ತಂದೆ ಕುಡಿದ ಬಳಿಕ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೋಲಿಸ್ ತನಿಖೆಯಿಂದ ತಿಳಿದು ಬಂದಿದೆ. ಮೃತ ಮಂಜುನಾಥ್ ಆಸ್ತಿ ವಿಚಾರವಾಗಿ ಪುತ್ರನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಆಸ್ತಿ ಕೈ ಬಿಟ್ಟು ಹೋಗುವ ಭಯದಲ್ಲಿ ಪುತ್ರ ನವೀನ್‌ಕುಮಾರ್ ತನ್ನ ತಂದೆಯನ್ನೇ ಕೊಲೆ ಮಾಡಿದ್ದಾನೆ.
ಈ ಬಗ್ಗೆ ಠಾಣೆಯಲ್ಲಿ ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿತ್ತಲ್ಲದೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿಯೂ ಈ ಕೊಲೆ ಆಗಿರಬಹುದು ಎಂದು ನಾಗರಿಕರು ಶಂಕಿಸಿದ್ದರು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಧುಗಿರಿ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ ಅವರ ನೇತೃತ್ವದಲ್ಲಿ ತನಿಖೆ ನಡೆದಿದ್ದು ಕೊಲೆ ಪ್ರಕರಣ ಬಯಲಿಗೆ ಬಂದಿದೆ.