'ಝೀರೋ ಟ್ರಾಫಿಕ್ ಹೀರೋ' : ಹನೀಫ್ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ
ಮಹಮ್ಮದ್ ಹನೀಫ್ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಆಂಬುಲೆನ್ಸ್ ಹೀರೋ. ನಾಲ್ಕುವರೇ ಗಂಟೆಯಲ್ಲಿ ಈತ ಕ್ರಮಿಸಿದ್ದು 380 ಕಿ. ಮೀಟರ್ ದೂರವನ್ನು. ಆಂಬುಲೆನ್ಸ್ ಡ್ರೈವರ್ ಆಗೋದು ಕನಸಷ್ಟೇ ಅಲ್ಲ, ಚಟವಾಗಿತ್ತು ಎನ್ನುತ್ತಾರೆ ಹನೀಫ್.
ಮಂಗಳೂರು(ಫೆ.07): ಮಹಮ್ಮದ್ ಹನೀಫ್ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಆಂಬುಲೆನ್ಸ್ ಹೀರೋ. ನಾಲ್ಕುವರೇ ಗಂಟೆಯಲ್ಲಿ ಈತ ಕ್ರಮಿಸಿದ್ದು 380 ಕಿ. ಮೀಟರ್ ದೂರವನ್ನು. 40 ದಿನದ ಹಸುಗೂಸಿನೊಂದಿಗೆ ಮಧ್ಯಾಹ್ನ 12 ಗಂಟಗೆ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ನಿಂದ ಹೊರಟ ಹನೀಫ್ 4 ಗಂಟೆ 10 ನಿಮಿಷಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿದ್ದಾನೆ. ಪುಟ್ಟ ಮಗುವಿಗಾಗಿ ಆಂಬುಲೆನ್ಸ್ ಡ್ರೈವರ್ ತೋರಿಸಿದ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವನ್ನು ಉಳಿಸಲು ಹೆಚ್ಚಿನ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ಹೋಗುವಂತೆ ಮಂಗಳೂರಿನ ವೈದ್ಯರು ಸಲಹೆ ಮಾಡಿದ್ದರು. ಮಗುವನ್ನು ಶಿಫ್ಟ್ ಮಾಡಬೇಕಾದ ವಿಷಯ ತಿಳಿದ ಬೆಳ್ತಂಗಡಿಯ ಬಳಂಜದ ಮಹಮ್ಮದ್ ಹನೀಫ್ ಕೂಡಲೇ ಮಗುವನ್ನು ಜಯದೇವ ಆಸ್ಪತ್ರೆಗೆ ತಲುಪಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್
ಯಶವಂತಪುರದಿಂದ ಝೀರೋ ಟ್ರಾಫಿಕ್ ಸಿಗಲಿಲ್ಲ. ಇಲ್ಲದಿದ್ದರೆ 4 ಗಂಟೆಯಲ್ಲೇ ಆಸ್ಪತ್ರೆ ತಲುಪುತ್ತಿದ್ದೆ ಎಂದಿದ್ದಾರೆ. ದಾರಿಯುದ್ದಕ್ಕೂ ಝೀರೋ ಟ್ರಾಫಿಕ್ ಒದಗಿಸಿ, ಜನರನ್ನು ಚದುರಿಸಿ ಎಲ್ಲ ಸಹಾಯ ಮಾಡಿದ ಪೊಲೀಸ್ ಸಿಬ್ಬಂದಿಗೆ ಹನೀಫ್ ಧನ್ಯವಾದ ಹೇಳಿದ್ದಾರೆ.
9 ತಿಂಗಳ ಹಿಂದೆ 250 ನಿಮಿಷದಲ್ಲಿ ಬೆಂಗಳೂರಿನಿಂದ ಕೋಝಿಕ್ಕೋಡ್‌ಗೆ 380 ಕಿ. ಮೀಟರ್ ಕ್ರಮಿಸಿದ್ದರು. 32 ವರ್ಷದ ಹನೀಫ್ ಈ ರೀತಿ ಸಾಹಸ ಮಾಡಿರುವುದು ಇದೇ ಮೊದಲಲ್ಲ. ಬೆಂಗಳೂರು ಕೆಎಂಸಿಸಿ ಆಂಬುಲೆನ್ಸ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹನೀಫ್ ಈ ಹಿಂದೆ ಬೆಸ್ಟ್ ಆಂಬುಲೆನ್ಸ್ ಡ್ರೈವರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕೇರಳ ಸರ್ಕಾರದ ರಸ್ತೆ ಸುರಕ್ಷ ವಿಭಾಗ ಈ ಪ್ರಶಸ್ತಿ ನೀಡಿತ್ತು.
ಮಂಗಳೂರು ಗೋಲಿಬಾರ್: ಸಾಕ್ಷಿ ಹೇಳೋಕೆ ಬಂದ್ರು ಅಪಾರ ಜನ
ಪಿಯುಸಿ ಓದಿದ ಹನೀಫ್‌ಗೆ ಆಂಬುಲೆನ್ಸ್ ಡ್ರೈವರ್ ಆಗುವುದು ಬಾಲ್ಯದ ಕನಸು. ಹನೀಫ್‌ಗೆ ಚಿಕ್ಕಂದಿನಿಂದಲೂ ಆಂಬುಲೆನ್ಸ್ ಡ್ರೈವರ್ ಆಗೋ ಆಸೆ ಇತ್ತು. ರೋಗಿಗಳನ್ನು ಕರೆದುಕೊಂಡು ಹೋಗುವುದು, ಅವರ ಜೀವವುಳಿಸುವ ಕೆಲಸದ ನನಗೆ ಚಟ ಇತ್ತು ಎನ್ನುತ್ತಾರೆ ಹನೀಫ್. ತಂದೆಯನ್ನು ಕಳೆದುಕೊಂಡಿರುವ ಹನೀಫ್‌ಗೆ ತಾಯಿ ಮಾತ್ರ ಇದ್ದಾರೆ.
ಮಿಷನ್ ಬಗ್ಗೆ ಮೊದಲೇ ಮಾಹಿತಿ ರವಾನೆಯಾಗಿತ್ತು:
ಮಗುವನ್ನು ಶಿಫ್ಟ್ ಮಾಡುವ ಬಗ್ಗೆ ಜನರಿಗೆ ಮೊದಲೇ ಮಾಹಿತಿ ಇತ್ತು. ಕೆಎಂಸಿಸಿ ಆಸ್ಪತ್ರೆ ವಾಟ್ಸಾಫ್ ಗ್ರೂಪ್‌ನ ಮೂಲಕ ಮಗುವನ್ನು ಶಿಫ್ಟ್ ಮಾಡುವ ವಿಚಾರವನ್ನು ಹಂಚಿಕೊಳ್ಳಲಾಗಿತ್ತು. ಹಾಗಾಗಿ ಆಂಬುಲೆನ್ಸ್ ಬರಬೇಕಾದರೆ ಜನ ತಾವಾಗಿಯೇ ದಾರಿ ಮಾಡಿಕೊಟ್ಟಿದ್ದಾರೆ.
ಮಂಗಳೂರು: ಪುಟ್ಟ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ