Asianet Suvarna News Asianet Suvarna News

ಮಂಗಳೂರು ಗೋಲಿಬಾರ್: ಸಾಕ್ಷಿ ಹೇಳೋಕೆ ಬಂದ್ರು ಅಪಾರ ಜನ

ಮಂಗಳೂರು ಗಲಭೆಗೆ ಸಂಬಂಧಿಸಿ ಈ ಹಿಂದೆ ಸಾರ್ವಜನಿಕರಿಗೆ ಸಾಕ್ಷಿ ಹೇಳಲು ಅವಕಾಶ ನೀಡಲಾಗಿತ್ತು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾಕ್ಷಿ ಹೇಳಲು ಬಂದಿದ್ದರು. ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಜನ ಅಪಾರ ಸಂಖ್ಯೆಯಲ್ಲಿ ಸಾಕ್ಷಿ ಹೇಳಲು ಆಗಮಿಸಿದ್ದಾರೆ.

People come forward to give statement as they witness mangalore golibar incident
Author
Bangalore, First Published Feb 6, 2020, 3:02 PM IST

ಮಂಗಳೂರು(ಫೆ.06): ಮಂಗಳೂರು ಗಲಭೆಗೆ ಸಂಬಂಧಿಸಿ ಈ ಹಿಂದೆ ಸಾರ್ವಜನಿಕರಿಗೆ ಸಾಕ್ಷಿ ಹೇಳಲು ಅವಕಾಶ ನೀಡಲಾಗಿತ್ತು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾಕ್ಷಿ ಹೇಳಲು ಬಂದಿದ್ದರು. ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಜನ ಅಪಾರ ಸಂಖ್ಯೆಯಲ್ಲಿ ಸಾಕ್ಷಿ ಹೇಳಲು ಆಗಮಿಸಿದ್ದಾರೆ.

ಮಂಗಳೂರು ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ ಸಾಕ್ಷ್ಯ ನೀಡಲು ಅಪಾರ ಸಂಖ್ಯೆಯ ಜನರು ಆಗಮಿಸಿದ್ದಾರೆ. ಸಾರ್ವಜನಿಕರಿಗೆ ಸಾಕ್ಷ್ಯ ನೀಡಲು ಮತ್ತೊಂದು ಅವಕಾಶ ನೀಡಲಾಗಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಈ ಅವಕಾಶ ನೀಡಲಾಗಿತ್ತು.

'ಮಂಗ್ಳೂರು ಗೋಲಿಬಾರ್ ಸಂಬಂಧ ಬಂದ ದೂರುಗಳೆಷ್ಟು..'?

75 ಕ್ಕೂ ಹೆಚ್ಚು ಜನರು ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಸಾಕ್ಷ್ಯ ನೀಡಿದ್ದಾರೆ. ಮಂಗಳೂರಿನ ಮಿನಿವಿಧಾನಸೌಧದ ಸಹಾಯಕ ಆಯುಕ್ತರ ಕೋರ್ಟ್ ಹಾಲ್‌ನಲ್ಲಿ ಸಾಕ್ಷ್ಯಹೇಳಲಾಗಿದೆ.

ಮ್ಯಾಜಿಸ್ಟ್ರೇಟ್ ತನಿಖಾಧಿಕಾರಿ ಹಾಗೂ ಉಡುಪಿ ಡಿಸಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ಸಾಕ್ಷಿ ಸಂಗ್ರಹ ನಡೆದಿದೆ. ಪ್ರತ್ಯಕ್ಷದರ್ಶಿಗಳು ಸೇರಿದಂತೆ ಈವರೆಗೂ ಒಟ್ಟು 201 ಜನರು ಸಾಕ್ಷಿ ಹೇಳಿದ್ದಾರೆ. ವಿಡಿಯೋ ಸಾಕ್ಷಿ ಸೇರಿದಂತೆ ಪ್ರತ್ಯಕ್ಷದರ್ಶಿಗಳು ವಿವಿಧ ರೀತಿ ಸಾಕ್ಷಿ ನುಡಿದಿದ್ದಾರೆ.

ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ತನಿಖೆ..?

Follow Us:
Download App:
  • android
  • ios