ಮಂಗಳೂರು(ಫೆ.06): ಅಪ್ರಾಪ್ತ ಬಾಲಕನಿಗೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವಿಟ್ಲ ಸಮೀಪದ ಶಾಲೆ ಆವರಣದಲ್ಲಿ ಶನಿವಾರ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ದೌರ್ಜನ್ಯಕ್ಕೆ ಒಳಗಾದವ ವಿಟ್ಲ ಸಮೀಪದ 14 ವರ್ಷದ ಶಾಲಾ ವಿದ್ಯಾರ್ಥಿ. ಶಾಲೆಯಿಂದ ಹೊರ ಬರುವ ಸಮಯದಲ್ಲಿ ಬಾಲಕನನ್ನು ವ್ಯಕ್ತಿಯೊಬ್ಬ ಪುಸಲಾಯಿಸಿ ದೌರ್ಜನ್ಯಕ್ಕೆ ಒಳ ಪಡಿಸಿದ್ದಾನೆ ಎನ್ನಲಾಗಿದೆ.

 

ಶಾಲೆಯಿಂದ ಬಂದ ಬಾಲಕ ಜ್ವರದಿಂದ ಬಳಲುತ್ತಿದ್ದ. ಔಷಧ ನೀಡಿದರೂ ಸೋಮವಾರ ಮತ್ತೆ ಶಾಲೆಗೆ ಹೋಗಲು ಹಿಂದೇಟು ಹಾಕಿದ್ದು, ಕೂಲಂಕಷವಾಗಿ ವಿಚಾರಣೆ ಮಾಡಿದಾಗ ವಿಷಯ ಬಹಿರಂಗವಾಗಿದೆ. ಪೋಷಕರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.