Asianet Suvarna News Asianet Suvarna News

ದೇವೇಗೌಡರಿಗೆ ನನ್ನ ದೇಹದ ಮೇಲಾದ ಪರಿಣಾಮದ ಬಗ್ಗೆ ಆತಂಕ ಇದೆ: ಹೆಚ್‌ಡಿಕೆ

ಆನಾರೋಗ್ಯದ ಮಧ್ಯೆ ಕೂಡ ಹೆಚ್‌ಡಿಕೆ ಪ್ರಚಾರಕ್ಕೆ ಇಳಿದಿದ್ದಾರೆ. ನನಗೆ ಇನ್ನೂ ಎರಡು ಮೂರು ದಿನ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ. ಆದ್ರೆ ನಾನು ರೆಸ್ಟ್ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ.

Karnataka Election 2023 HD Devegowda worried about My health condition says HD Kumaraswamy gow
Author
First Published Apr 25, 2023, 5:26 PM IST | Last Updated Apr 25, 2023, 5:26 PM IST

ಚನ್ನಪಟ್ಟಣ/ಮೈಸೂರು (ಏ.25): ಆನಾರೋಗ್ಯ ಇದ್ದರೂ ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಅದಕ್ಕೂ ಮುನ್ನ ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು.  ನನಗೆ ಇನ್ನೂ ಎರಡು ಮೂರು ದಿನ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ. ಆದ್ರೆ ನಾನು ರೆಸ್ಟ್ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಕೆ ಆರ್ ಕ್ಷೇತ್ರ, ಚಾಮರಾಜ ಕ್ಷೇತ್ರ ಹಾಗೂ  ವರುಣಾದಲ್ಲಿ ಸಭೆ ಕರೆದಿದ್ದೇನೆ. ಅಲ್ಲಿಯ ಪ್ರಚಾರ ಸಭೆಗೆ ಕಾರ್ಯಕ್ರಮ ನಿಗದಿ ಮಾಡಿದ್ದೇನೆ. ಜ್ವರದಿಂದ ಚೇತರಿಸಿಕೊಂಡಿದ್ದೇನೆ. ವಿಶ್ರಾಂತಿ ಇಲ್ಲದೇ ಜ್ವರ, ಮೈ- ಕೈ ನೋವು ಇತ್ತು. ಈಗ ಚೇತರಿಸಿಕೊಂಡು ಮತ್ತೆ ಪ್ರಚಾರಕ್ಕೆ ಬಂದಿದ್ದೇನೆ. ಈಗಾಗಲೇ ನಾನು ಕನ್ನಡಿಗರ ಹೃದಯ ಮುಟ್ಟಿದ್ದೇನೆ. ಮುಂದಿನ 10 ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ಇರುತ್ತೇನೆ ಎಂದಿದ್ದಾರೆ.

ಇವತ್ತಿನಿಂದ ಮೇ.8ವರೆಗೂ ನಿರಂತವಾಗಿ ಪ್ರಚಾರದಲ್ಲಿರಲಿದ್ದೇನೆ. ದೇವೇಗೌಡರಿಗೆ ನನ್ನ ದೇಹದ ಮೇಲಾದ ಪರಿಣಾಮ ಬಗ್ಗೆ ಆತಂಕ ಇದೆ. ನಿನ್ನೆಯಿಂದ ಮೂರು ಕಡೆ ಉರಿ ಬಿಸಿಲಿನಲ್ಲಿ ದೊಡ್ಡ ಸಭೆ ಅಟೆಂಡ್ ಮಾಡಿದ್ದಾರೆ. ಶಿರ, ಮದುಗಿರಿ ,ಕೊರಟೆಗೆರೆಯಲ್ಲಿ ಬಹಳ ದೊಡ್ಡ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈವತ್ತು ಪಿರಿಯಾಪಟ್ಟಣ ಕೆ ಆರ್ ನಗರಕ್ಕೆ ಹೊರಟಿದ್ದಾರೆ. ಅವರೂ ಸಹ ಸುಮಾರು ಕನಿಷ್ಟ 50 ರಿಂದ 60 ಕ್ಷೇತ್ರಗಳಿಗೆ ಭೇಟಿ ಕೊಡಲು ಕಾರ್ಯಕ್ರಮ ರೂಪಿಸಿದ್ದಾರೆ. ದೇವಗೌಡ ಈ ಇಳಿ ವಯಸ್ಸಿನಲ್ಲಿ ಕೂಡ 123 ಗುರಿ ಮುಟ್ಟೋಕೆ ಅವರ ಶ್ರಮ ಹಾಕುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ರಾಮನಗರ ಪ್ರಚಾರಕ್ಕೆ ಮೋದಿ ಆಗಮನ, ಹೆಚ್ ಡಿ ಕೆ ಟಾಂಗ್:
ರಾಮನಗರ ಪ್ರಚಾರಕ್ಕೆ ಮೋದಿ ಆಗಮಿಸುತ್ತಿರುವುದಕ್ಕೆ ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ. ಮೋದಿನಾದ್ರು ಬರ್ಲಿ ಅಮೇರಿಕಾ ಅಧ್ಯಕ್ಷನಾದ್ರು ಬರ್ಲಿ. ನರೇಂದ್ರ ಮೋದಿ ಬಂದು ಭಾಷಣ ಮಾಡಿ ಹೋಗ್ತಾರೆ. ಮಂಡ್ಯ, ತುಮಕೂರು, ಮೈಸೂರಿನಿಂದ ಜನ ಕರೆ ತರ್ತಾರೆ ಅಷ್ಟೇ. ಅದೆಲ್ಲ ಯಾರೊದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ತರ ಆಗಿದೆ. ನಾನು ಅಮಿತ್ ಶಾ ರೋಡ್ ಶೋ ನೋಡಿದ್ದೇನೆ. ಅದರಿಂದ ಜನಕ್ಕೆ ಉಪಯೋಗವಿಲ್ಲ. ಅವರೇನಾದ್ರು ಜನಕ್ಕೆ ಮಾಡಿದ್ದಾರಾ. ಬರ್ತಾರೆ ಹೋಗ್ತಾರೆ ಇದರಿಂದಾಗಿ ನನಗೆ ಯಾವುದೇ ಆತಂಕ ಇಲ್ಲ. ನಾನು ಕಳೆದ ನಾಲ್ಕೂವರೆ ತಿಂಗಳಿಂದ ಮಾಡಿರುವ ಕಾರ್ಯಕ್ರಮಗಳಿಗೆ ಇದ್ಯಾವ ಕಾರ್ಯಕ್ರಮವು ಸರಿಸಾಟಿ ಇಲ್ಲ ಎಂದು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಲಿಂಗಾಯುತ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ದೊಡ್ಡವರ ವಿಚಾರ ನಮಗೇಕೆ ಎಂದಷ್ಷೇ ಹೇಳಿದರು. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿ, ಮುಖ್ಯಮಂತ್ರಿ ಸಮುದಾಯದ ಪ್ರತಿನಿಧಿ ಅಲ್ಲ, ನಾಡಿನ ಪ್ರತಿನಿಧಿ. ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ. ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಪಕ್ಷಗಳು ನಾಯಕರನ್ನು ಆಯ್ಕೆ ಮಾಡುತ್ತವೆ. ಆದರೆ ನಾಡಿನ ಹಿತದೃಷ್ಟಿ ಇಟ್ಟುಕೊಂಡು ಸಿಎಂ ಕೆಲಸ ಮಾಡಬೇಕು. ಆ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಯೂ ಸರಿಯಲ್ಲ. ಅವರು ಒಬ್ಬ ಅನುಭವಿ ರಾಜಕಾರಣಿ. ಅಂಥವರ ಬಾಯಲ್ಲಿ ಆ ಮಾತು ಯಾಕೆ ಬಂತು ಅಂತ ಗೊತ್ತಿಲ್ಲ. ಯಾವ ಅರ್ಥದಲ್ಲಿ ಆ ಮಾತು ಹೇಳಿದ್ದರೋ ಗೊತ್ತಿಲ್ಲ. ಬಹುಶಃ ಕಾಂಗ್ರೆಸ್ ಮುಗಿಸಬೇಕು ಅಂತ ಆ ರೀತಿ ಹೇಳಿರಬಹುದು. ಭ್ರಷ್ಟಾಚಾರ ವಿಚಾರ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್‌ಡಿಕೆ ಹೇಳಿಕೆ ನೀಡಿದ್ದಾರೆ.

ಊಟದ ವಿಚಾರದಲ್ಲಿ ಹೆಚ್‌ಡಿಕೆ ಮಕ್ಕಳ ರೀತಿ ಹಠ ಮಾಡ್ತಾರೆ, ಬರೀ ಮೊಸರನ್ನ ತಿಂತಾರೆ: ಅನಿತಾ

ವರುಣ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಒಳ ಒಪ್ಪಂದ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಆ ರೀತಿಯ ತೀರ್ಮಾನ ತೆಗೆದುಕೊಂಡಿಲ್ಲ. ನಮಗೆ ಇನ್ನೊಬ್ಬ ಅಭ್ಯರ್ಥಿಯನ್ನು ಸೋಲಿಸುವುದು ಮುಖ್ಯವಲ್ಲ. ನಮಗೆ ನಮ್ಮ ಅಭ್ಯರ್ಥಿ ಗೆಲುವೇ ಮುಖ್ಯ. ಭಾರತಿಶಂಕರ್ ಅವರು ಒಳ್ಳೆಯ ಅಭ್ಯರ್ಥಿ. ಈ ಹಿಂದೆ ಶಾಸಕರಾಗಿದ್ದಾಗ ಆ ಕ್ಷೇತ್ರದ 3 ಹೋಬಳಿಗಳನ್ನು ಪ್ರತಿನಿಧಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಸಮರ್ಥರಾಗಿದ್ದಾರೆ ಎಂದಿದ್ದಾರೆ.

ಮೋದಿಯಾದರೂ ಬರಲಿ, ಅಮೆರಿಕ ಅಧ್ಯಕ್ಷನಾದರೂ ಬರಲಿ, ಭಾಷಣ ಮಾಡಿ ಹೋಗ್ತಾರೆ 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್‌.ಡಿ.ದೇವೇಗೌಡ ಹಾಗೂ ಜಿಟಿ.ದೇವೇಗೌಡರಿಗೆ ಮೀಸಲಿದೆ. ಒಕ್ಕಲಿಗರ ಮತ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆ ಇಲ್ಲ. ಕುಮಾರಸ್ವಾಮಿ ನನ್ನನ್ನು ಬೆಂಬಲಿಸಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಎಚ್‌ಡಿಕೆ, ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ಅವರು ನಿಲ್ಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡಗೆ ನಾನ್ಯಾಕೆ ಬೆಂಬಲ ನೀಡಲಿ ? ಒಕ್ಕಲಿಗರು ಸಿದ್ದೇಗೌಡ ಮಾತಿಗೆ ಕಿವಿಗೊಡಬೇಡಿ. ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರನ್ನು ತಾಯಿ ಚಾಮುಂಡೇಶ್ವರಿ ‌ನೋಡಿಕೊಳ್ಳುತ್ತಾಳೆ. ಜಿ.ಟಿ.ದೇವೇಗೌಡ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದಿದ್ದಾರೆ.

Latest Videos
Follow Us:
Download App:
  • android
  • ios