ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ ಎನ್ನುವ ಆರೋಪ ಮತ್ತೊಮ್ಮೆ ಸಾಬೀತಾಗಿದೆ. ಈ ಬಾರಿ ಕಲಬುರಗಿ ನಗರ ಪೊಲೀಸರು ನಡೆಸಿದ  ಮಿಂಚಿನ ಕಾರ್ಯಾಚರಣೆಯಲ್ಲಿ ಜೈಲಿನಲ್ಲಿನ ಅಕ್ರಮ ಬೆಳಕಿಗೆ ಬಂದಿದೆ.  

ಕಲಬುರಗಿ(ಡಿ.29):  ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ದಿಢೀರ್ ದಾಳಿ ನಡೆಸಿ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮವನ್ನ ಬಯಲಿಗೆಳಿದಿದ್ದಾರೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ ಎನ್ನುವ ಆರೋಪ ಮತ್ತೊಮ್ಮೆ ಸಾಬೀತಾಗಿದೆ. ಈ ಬಾರಿ ಕಲಬುರಗಿ ನಗರ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಜೈಲಿನಲ್ಲಿನ ಅಕ್ರಮ ಬೆಳಕಿಗೆ ಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು! ಕಲಬುರಗಿ ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯ ಪರತಾಬಾದ್ ಠಾಣೆಯ ಪೊಲೀಸರು, ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ 4 ಮೊಬೈಲ್, 4 ಸಿಮ್ ಕಾರ್ಡ್ ಮತ್ತು 1 ಲಕ್ಷ 62 ಸಾವಿರ ರೂಪಾಯಿ ಕ್ಯಾಶ್ ಪತ್ತೆಯಾಗಿದೆ. ಇದೆಲ್ಲವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. 

ನಾಳೆಯಿಂದ ಕಲಬುರಗಿಯಲ್ಲಿ ಸರ್ಕಾರಿ‌ ನೌಕರರ ಕ್ರೀಡಾಕೂಟ

ಜೈಲೊಳಗೆ ದುಡ್ಡು ಎಲ್ಲಿಂದ ಬಂತು ?

ಈ ಹಿಂದೆ ಸಹ ಸಾಕಷ್ಟು ಬಾರಿ ಪೊಲೀಸ್ ದಾಳಿ ನಡೆದ ಸಂದರ್ಭದಲ್ಲಿ ಮೊಬೈಲ್ ಹಾಗೂ ಸಿಮ್ ಕಾರ್ಡ್ ಗಳು ಪತ್ತೆಯಾಗಿದ್ದವು. ಈ ಬಾರಿ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಜೈಲು ಒಳಗೆ ಇಷ್ಟು ಪ್ರಮಾಣದ ಹಣ ಎಲ್ಲಿಂದ ಬಂತು ? ಏಕೆ ಬಂತು ? ಹೇಗೆ ಬಂತು ? ಈ ಹಣದ ವಾರಸುದಾರರು ಯಾರು ? ಯಾವ ಕಾರಣಕ್ಕಾಗಿ ಈ ಹಣ ಇವರಿಗೆ ಸಂದಾಯ ಮಾಡಲಾಯಿತು ? ಈ ಎಲ್ಲದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಕಲ್ಬುರ್ಗಿ ನಗರ ಪೊಲೀಸ್ ಕಮಿಷನರ್ ರವಿಕುಮಾರ್ ತಿಳಿಸಿದ್ದಾರೆ. 

ಜೈಲ್ ಒಳಗೆ ಅಕ್ರಮ ನಡೆಯುತ್ತಿರುವ ಬಗ್ಗೆ ಸುಳಿವು ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ. ಈ ಬಗ್ಗೆ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.