ಮಂಗಳೂರು(ಜ.16): ಶಾಸಕ ಹರೀಶ್‌ ಪೂಂಜ ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ಇದೆಯೇ? ಹೌದು ಎನ್ನುತ್ತಾರೆ ಯುವ ಜ್ಯೋತಿಷಿಯೊಬ್ಬರು. ಜ್ಯೋತಿಷಿಗಳ ಭವಿಷ್ಯ ನಿಜವಾಗುತ್ತಾ ಎಂಬುದು ಕಾದು ನೋಡಬೇಕಷ್ಟೆ.

ಅಳದಂಗಡಿಯಲ್ಲಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಜಾತ್ರೆಯ ಸಂದರ್ಭ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಸೂಳಬೆಟ್ಟಿನ, ಪ್ರಸ್ತುತ ಬೆಂಗಳೂರಿನಲ್ಲಿರುವ ಯುವ ಜ್ಯೋತಿಷಿ ಶ್ರೀನಾಥ ಜೋಶಿ ಅವರು ಬಹಿರಂಗವಾಗಿ ಶಾಸಕರ ಸಮ್ಮುಖದಲ್ಲೇ ಭವಿಷ್ಯ ನುಡಿದಿದ್ದಾರೆ.

KMCಯಲ್ಲಿ ಬಾಲಕನಿಗೆ ಮಾರ್ಗಭಂಜಕ ಹೃದಯ ಚಿಕಿತ್ಸೆ, ದಕ್ಷಿಣ ಕನ್ನಡದಲ್ಲಿ ಮೊದಲ ಯಶಸ್ವಿ

ಹಲವಾರು ವರ್ಷಗಳಿಂದ ಇವರ ಕಾರ್ಯವೈಖರಿ ನೋಡಿ, ಅಧ್ಯಯನ ಮಾಡಿ ಜ್ಯೋತಿಷ್ಯದ ಮೂಲಕ ಕಂಡು ಕೊಂಡಾಗ ಕೆಲ ವರ್ಷಗಳಲ್ಲೇ ಬೆಳ್ತಂಗಡಿಯ ನೆಲ ರಾಜ್ಯಕ್ಕೆ ಮುಖ್ಯಮಂತ್ರಿಯೊಬ್ಬರನ್ನು ನೀಡಲಿದೆ ಎಂದು ಕಂಡಿದೆ ಎಂದು ಹೇಳಿದರಲ್ಲದೆ ಈ ಮಾತನ್ನು ಸತ್ಯದ ಮಣ್ಣಾದ ಅಳದಂಗಡಿಯಲ್ಲಿ, ಸತ್ಯದೇವತೆಯ ಎದುರಲ್ಲೇ ,ಗಣ್ಯರ ಸಮ್ಮುಖದಲ್ಲಿ ಘಂಟಾಘೋಷವಾಗಿ ಹೇಳುತ್ತಿದ್ದೇನೆ ಎಂದು ಶ್ರೀನಾಥ ಜೋಶಿ ಹೇಳಿದ್ದಾರೆ.

'ಯತ್ನಾಳ ಗೂಂಡಾಗಿರಿ ಮಾಡಿದ್ರೆ ಅದೇ ಭಾಷೆಯಲ್ಲೇ ಉತ್ತರ ಕೊಡ್ತೇವೆ'

ಮುಂದೊಂದು ದಿನ ಖಂಡಿತವಾಗಿ ನಾನು ಈ ದಿನ ಹೇಳಿದ ಮಾತನ್ನು ನೆನಪಿಸಿಕೊಳ್ಳುತ್ತೀರಿ ಎಂದು ಜ್ಯೋತಿಷಿ ಹೇಳಿದರು. ಅಳದಂಗಡಿಯಲ್ಲಿ ಇವರು ಹೇಳಿದ ಭವಿಷ್ಯವಾಣಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಜನವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ