KMCಯಲ್ಲಿ ಬಾಲಕನಿಗೆ ಮಾರ್ಗಭಂಜಕ ಹೃದಯ ಚಿಕಿತ್ಸೆ, ದಕ್ಷಿಣ ಕನ್ನಡದಲ್ಲಿ ಮೊದಲ ಯಶಸ್ವಿ
ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸದೆ ಜನ್ಮಜಾತ ಲೋಪವಾದ ವೆಂಟ್ರಿಕ್ಯೂಲಾರ್ ಸೆಪ್ಟಲ್ ಡಿಫೆಕ್ಟ್‌ಗೆ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡಲು ಪಕ್ರ್ಯೂಟೇನಿಯಸ್ ಡಿವೈಸ್ ಕ್ಲೋಷರ್ ಉಪಯೋಗಿಸಲಾಗಿದೆ.
ಮಂಗಳೂರು(ಜ.16): ಜನ್ಮಜಾತ ಲೋಪವಾದ ವೆಂಟ್ರಿಕ್ಯೂಲಾರ್ ಸೆಪ್ಟಲ್ ಡಿಫೆಕ್ಟ್ (ವಿಎಸ್‌ಡಿ)ನಿಂದ ಬಳಲುತ್ತಿದ್ದ 13 ವರ್ಷ ವಯಸ್ಸಿನ ಬಾಲಕನಿಗೆ ಮಾರ್ಗಭಂಜಕ ಹೃದಯ ಚಿಕಿತ್ಸಾ ವಿಧಾನ(ಕ್ಯಾಥೆಟರ್ ಆಧಾರಿತ ಕ್ಲೋಷರ್ ತಂತ್ರ)ವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆ ಯಶಸ್ವಿಯಾಗಿ ನಡೆಸಿದೆ. ಚಿಕಿತ್ಸೆ ನೀಡಲು ಪಕ್ರ್ಯೂಟೇನಿಯಸ್ ಡಿವೈಸ್ ಕ್ಲೋಷರ್ ಉಪಯೋಗಿಸಲಾಗಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸದೆ ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ಚಿಕಿತ್ಸೆ ನೆರವೇರಿಸಲಾಗಿದೆ.
ಆಸ್ಪತ್ರೆಯ ಡಾ. ರಾಜೇಶ್ ಭಟ್ ಯು., ಡಾ. ಪದ್ಮನಾಭ ಕಾಮತ್ (ಹೃದಯರೋಗ ಶಸ್ತ್ರಚಿಕಿತ್ಸಾ ತಜ್ಞರು), ಡಾ. ಗಣೇಶ್ ಪಡುಕೋಳಿ ಮತ್ತು ನರ್ಸ್ ಶ್ರೀಲತಾ ಅವರನ್ನು ಒಳಗೊಂಡ ತಂಡ ಈ ಚಿಕಿತ್ಸಾ ವಿಧಾನದಲ್ಲಿ ಭಾಗವಹಿಸಿತ್ತು. ಬಾಲಕನನ್ನು ಚಿಕಿತ್ಸೆ ನಡೆದ ಮೂರು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಶಾಲೆಗೆ ತೆರಳಲು ಆರಂಭಿಸಿದ್ದಾನೆ.
ಮಂಗಳೂರು ಸಮಾವೇಶ: ಹಕ್ಕೊತ್ತಾಯಗಳೇನೇನು..?
‘ವೆಂಟ್ರಿಕ್ಯೂಲಾರ್ ಸೆಪ್ಟಲ್ ಡಿಫೆಕ್ಟ್(ವಿಎಸ್‌ಡಿ)ಎಂದರೆ ಹೃದಯದ ಎಡ ಹೃತ್ಕುಕ್ಷಿ ಮತ್ತು ಬಲ ಹೃತ್ಕುಕ್ಷಿಗಳ ನಡುವೆ ಅಸಾಧಾರಣ ರೀತಿಯ ಸಂಪರ್ಕ ಉಂಟಾಗಿರುತ್ತದೆ. ಇದು ಮಕ್ಕಳಲ್ಲಿ ಕಂಡುಬರುವ ಜನ್ಮಜಾತ ತೊಂದರೆ. ಪ್ರತ್ಯೇಕ ಗಾಯವಾಗಿ ಅಥವಾ ಇತರ ಹೃದಯದ ತೊಂದರೆಗಳೊಂದಿಗೆ ಇದು ಕಾಣಿಸಿಕೊಳ್ಳಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವುದು. ಹೃದಯದ ವೈಫಲ್ಯ ಅಥವಾ ಸಾವಿಗೂ ಕಾರಣವಾಗಬಹುದು.
ಎತ್ತಿನಗಾಡಿಯಲ್ಲಿ ಸಿಎಂ ಯಡಿಯೂರಪ್ಪ, ಸಚಿವ ಅಶೋಕ್ ಸವಾರಿ
ಇತ್ತೀಚಿನವರೆಗೆ ವಿಎಸ್‌ಡಿಗೆ ತೆರೆದ ಹೃದಯದ ಶಸ್ತ್ರಕ್ರಿಯೆ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ನೂತನವಾದ ಕ್ಯಾಥೆಟರ್ ಆಧಾರಿತ ಕ್ಲೋಷರ್ ತಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ವಿಧಾನವನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ, ಬಹಳ ಕಡಿಮೆ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳುವಂತೆ ನಡೆಸಲಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿರುವುದು ಇಲ್ಲದಿರುವುದರಿಂದ ಇದು ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ವರವಾಗಿದೆ. ಏಕೆಂದರೆ ಮಕ್ಕಳ ಎದೆಭಾಗದಲ್ಲಿ ದೊಡ್ಡ ಗಾಯದ ಗುರುತು ಇರುವುದಿಲ್ಲ ಎಂದು ಕೆಎಂಸಿ ಆಸ್ಪತ್ರೆಯ ಡಾ.ರಾಜೇಶ್ ಭಟ್ ಯು. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.