Asianet Suvarna News Asianet Suvarna News

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ : ಯುವಕ ಅರೆಸ್ಟ್

ಬಹಿರ್ದೆಸೆಗೆಂದು ತೆರಳಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಯುವಕನೋರ್ವನನ್ನು ಬಂಧಿಸಲಾಗಿದೆ. 

youth Arrested in Chitradurga For Rape Minor Girl
Author
Bengaluru, First Published Dec 22, 2019, 9:57 AM IST

ಚಿತ್ರದುರ್ಗ[ಡಿ.22]: 16 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಮೂಲದ ಯುವಕನನ್ನು ಬಂಧಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಮಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಘಟನೆ ನಡೆದಿದ್ದು ಆಂಧ್ರ ಪ್ರದೇಶದ ರಾಯದುರ್ಗ ತಾಲೂಕಿನ ಸೋಮಲಾಪುರದ ಹರೀಶ್ [21] ಎನ್ನುವಾತನನ್ನು ಬಂಧಿಸಲಾಗಿದೆ. 

ಡಿಸೆಂಬರ್ 17 ರಂದು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿತ್ತು. ಆಮಧ್ರದ ಹಡಗಲಿ ಬಳಿ ಕರೆದೊಯ್ದು ಅತ್ಯಾಚಾರ ಎಸಗಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. 

ಬೆಂಗಳೂರು: ಪೌರತ್ವದ ಕಿಚ್ಚಿಗೆ ಕಿಕ್ಕೇರಿಸಲು ಅಶ್ಲೀಲ ಪೋಸ್ಟರ್...

ಇದೀಗ ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ.

Follow Us:
Download App:
  • android
  • ios