ಚನ್ನಪಟ್ಟಣಕ್ಕೆ ಡಬಲ್ ಧಮಾಕ : ಇಬ್ಬರಿಗೆ ಸಚಿವ ಸ್ಥಾನ ?

ಚನ್ನಪಟ್ಟಣಕ್ಕೆ ಢಬಲ್ ಧಮಾಕ ಒಲಿಯುವ ಸಾಧ್ಯತೆ ಇದೆ. ಇಲ್ಲಿ ಗೆದ್ದವರೋರ್ವರಿಗೆ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿನ ಮುಖಂಡರೋರ್ವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ.

Yogeshwar May Get portfolio in BSY Cabinet

ಸು ನಾ ನಂದಕುಮಾರ್

ಚನ್ನಪಟ್ಟಣ [ಡಿ.10]:  ಮುಂದಿನ ದಿನಗಳಲ್ಲಿ ವಿಸ್ತರಣೆಗೊಳ್ಳಲಿರುವ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಬೊಂಬೆನಾಡಿಗೆ ಡಬಲ್ ಧಮಾಕ ದೊರೆಯಲಿದೆಯೇ..? ಚುನಾವಣೆಗೆ ಸ್ಪರ್ಧೆ ಮಾಡುವ ಮುನ್ನವೇ ಅನರ್ಹರು ಗೆದ್ದರೆ ಸಚಿವ ಸ್ಥಾನ ಖಾತ್ರಿ ಎಂದು ಯಡಿಯೂರಪ್ಪ ಘೋಷಿಸಿದ್ದರು. ಅದರಂತೆ ಯಶವಂತಪುರ ಕ್ಷೇತ್ರದಿಂದ ಗೆಲವು ಸಾಧಿಸಿರುವ ತಾಲೂಕಿನ ಶೆಟ್ಟಿಹಳ್ಳಿ ಮೂಲದ ಎಸ್.ಟಿ. ಸೋಮಶೇಖರ್ ಸಚಿವರಾಗುವುದು ಪಕ್ಕಾ ಆಗಿದೆ.

 ಇನ್ನು ಮೈತ್ರಿ ಸರ್ಕಾರ ಬೀಳಿಸಿದ ಮಾಜಿ ಸಚಿವ ಯೋಗೇ ಶ್ವರ್ ಹೆಸರು ಸಚಿವ ಸಂಪುಟದ ವಿಸ್ತರಣೆ ವೇಳೆ ಅಚ್ಚರಿಯ ಆಯ್ಕೆಯಾಗಿ ಪಟ್ಟಿಯಲ್ಲಿ ಕಾಣಿಸಿಕೊ ಳ್ಳಲಿದೆ ಎಂಬುದು ಆಪ್ತ ಮೂಲಗಳ ವಿವರಣೆ.

ಮಂತ್ರಿ ಗಾದಿಗೆ ತಾಲೂಕಿನ ಮಗ: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಕುಟುಂಬದ ಎಸ್.ಟಿ. ಸೋಮಶೇಖರ್ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿ ಗೆಲುವು ಸಾಧಿಸುವ ಜತೆಗೆ ಮಂತ್ರಿ ಸ್ಥಾನವನ್ನು ಖಚಿತ ಪಡಿಸಿಕೊಂಡಿದ್ದಾರೆ. ಸದ್ಯದಲ್ಲೇ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ವೇಳೆ ಸೋಮಶೇಖರ್ ಸಚಿವರಾಗುವುದು ಖಚಿತವಾಗಿದೆ. ಈಗಾಗಲೇ ಇವರ ಹುಟ್ಟೂರಿನಲ್ಲಿ ಸೋಮಶೇಖರ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.

ಯೋಗಿಗೆ ಮಂತ್ರಿಗಿರಿ?: ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ ಅವರಿಗೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮೊದಲ ಬಾರಿಯೇ ಮಂತ್ರಿ ಸ್ಥಾನ ದೊರೆಯಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಕೊನೆಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದು, ಉಪಚುನಾವಣೆ ಬಳಿಕ ನಡೆಯಲಿರುವ ವಿಸ್ತರಣೆಯ ವೇಳೆ ಯೋಗೇಶ್ವರ್‌ಗೆ ಖಚಿಯತವಾಗಿ ಮಂತ್ರಿ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿ ಮೂಡಿದೆ.

ಉಪಚುನಾವಣೆಯಲ್ಲಿ ಹುಣಸೂರಿನಿಂದ ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿ ಸಚಿವ ಸ್ಥಾನ ನೀಡುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಕೊನೆ ಕ್ಷಣದಲ್ಲಿ ವಿಶ್ವನಾಥ್ ಸ್ಪರ್ಧಿಸಿದರು. ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಯೋಗೇಶ್ವರ್ ಅವರನ್ನು ವಿಧಾನಪರಿಷತ್‌ಗೆ ನೇಮಕ ಮಾಡಿ ಸಚಿವ ಸ್ಥಾನ ನೀಡಲಿದ್ದಾರೆ ಎಂದು ಸಿಪಿವೈ ಆಪ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ನಶೆ ಏರಿಸುವಂತಿದ್ದಾಳೆ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್!...

ಮಾತು ಉಳಿಸಿಕೊಳ್ಳುವರೇ ಯಡಿಯೂರಪ್ಪ: ಮೈತ್ರಿ ಸರ್ಕಾರಕ್ಕೆ ಸಡ್ಡು ಹೊಡೆದು ಕಮಲದ ಕೈ ಹಿಡಿದ 17 ರೆಬಲ್ ಶಾಸಕರ ಪಾಲಿನ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡಿರುವ ಯೋಗೇಶ್ವರ್ ಈ ಶಾಸಕರ ರಾಜೀನಾಮೆಯಿಂದ ಹಿಡಿದು, ಅವರು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಪೂರ್ಣಗೊಳಿಸುವವರೆಗೆ ಜತೆಗೆ ನಿಂತು ಸಾಥ್ ನೀಡಿದ್ದು ಯೋಗೇಶ್ವರ್.

ಕಾಂಗ್ರೆಸ್ ಸೋಲಿನ ಹಿಂದಿನ ಕಾರಣವೇ ನಾಯಕರ ಘರ್ಷಣೆ...

ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನನಗೆ ಮಂತ್ರಿ ಸ್ಥಾನ ಕೊಡುವುದಾಗಿ ಯಡಿಯೂರಪ್ಪಮಾತುಕೊಟ್ಟಿದ್ದಾರೆ ಎಂದು ಯೋಗೇಶ್ವರ್ ಆಪ್ತರ ಬಳಿ ಹೇಳಿಕೊಂಡಿದ್ದು ಉಂಟು. ಇದೀಗ ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡಿ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡಾರೆ ಎಂದು ಕಾಯ್ದು ನೋಡಬೇಕಿದೆ.

ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಾಲೂಕಿನ ಇಬ್ಬರು ಮುಖಂಡರು ಮಂತ್ರಿಯಾಗುವ ಸಾಧ್ಯತೆ ಇದ್ದು, ಕೊನೆ ಕ್ಷಣದಲ್ಲಿ ಏನಾದೀತು ಎಂದು ಕಾಯ್ದು ನೋಡಬೇಕಿದೆ.

Latest Videos
Follow Us:
Download App:
  • android
  • ios